ಸಮಿತಿಯ ಸ್ಥಾಪನೆಯ ವಿರುದ್ಧ ಸಲ್ಲಿಸಿರುವ ಅರ್ಜಿ ತಪ್ಪು ಎಂದು ನ್ಯಾಯಾಲಯದಿಂದ ಸ್ಪಷ್ಟನೆ
ನವ ದೆಹಲಿ – ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳಿಂದ ಸಮಾನ ನಾಗರೀಕ ಕಾನೂನಿನ ಪರಿಶೀಲನೆಗಾಗಿ ಸ್ಥಾಪನೆ ಮಾಡಲಾಗಿರುವ ಸಮಿತಿಯ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಈ ಸಮಿತಿಯ ಸ್ಥಾಪನೆಗೆ ಸವಾಲು ನೀಡಲಾಗಿತ್ತು. ನ್ಯಾಯಾಲಯವು ಈ ಅರ್ಜಿಯ ಬಗ್ಗೆ ವಿಚಾರಣೆ ನಡೆಸಲು ನಿರಾಕರಿಸಿದೆ. ನ್ಯಾಯಾಲಯವು, ಈ ಸಮಿತಿಯ ಸ್ಥಾಪನೆ ಸರಕಾರದ ಅಧಿಕಾರದ ಅಡಿಯಲ್ಲಿ ನಡೆಯಬೇಕು, ಎಂದು ಹೇಳಿದೆ.
ಮುಖ್ಯ ನ್ಯಾಯಾಧೀಶರಾದ ಧನಂಜಯ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಇವರ ನ್ಯಾಯಪೀಠವು, `ಸಂವಿಧಾನದ ಕಲಂ ೧೬೨ ರ ಅಡಿಯಲ್ಲಿ ಈ ಸಮಿತಿಯ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ತಪ್ಪೇನಿದೆ ? ನೀವು ಅರ್ಜಿ ಹಿಂಪಾಪಡೆಯದಿದ್ದರೆ ನಾವು ಅದನ್ನು ತಳ್ಳಿ ಹಾಕುವೆವು ? ಯಾವುದೇ ಸಮಿತಿಯ ಸ್ಥಾಪನೆಯ ಬಗ್ಗೆ, `ಅದು ಸಂವಿಧಾನ ವಿರೋಧಿ ಆಗಿದೆ’ ಎಂದು ಹೇಳಿ ಅರ್ಜಿ ದಾಖಲಿಸಲಾಗುವುದಿಲ್ಲ.’ ಎಂದು ಹೇಳಿದೆ. ಅದರ ನಂತರ ಅರ್ಜಿದಾರರು ಅರ್ಜಿಯನ್ನು ಹಿಂಪಡೆದರು.