ಬೆಳಗಾವಿಯ ಶ್ರೀ ರಾಮ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತಕರ ಇವರ ಮೇಲೆ ಗುಂಡಿನ ದಾಳಿ !

ಮೂವರ ಬಂಧನ.


ಬೆಳಗಾವಿ – ಇಲ್ಲಿ ಜನೇವರಿ 8 ರಂದು ಜರುಗಲಿದ್ದ ಹಿಂದೂ ಸಭೆಯ ಸಿದ್ಧತೆಯ ವರದಿಯನ್ನು ತೆಗೆದುಕೊಂಡು ಸಂಜೆ ಮನೆಗೆ ಹಿಂತಿರುವುವಾಗ ಶ್ರೀರಾಮ ಸೇನೆ ಮತ್ತು ಹಿಂದೂ ರಾಷ್ಟ್ರ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀ ರವಿಕುಮಾರ ಕೋಕಿತಕರ ಇವರ ಮೇಲೆ ಜನೇವರಿ 7 ರಂದು ಹಿಂಡಲಗಾದ ಮರಾಠಿ ಶಾಲೆಯ ಹತ್ತಿರ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಶ್ರೀ ಕೋಕಿತಕರ ಇವರ ಮುಖಕ್ಕೆ 2 ಗುಂಡುಗಳು ತಾಗಿ ಹೋಗಿದ್ದರಿಂದ ಅವರು ಗಾಯಗೊಂಡಿದ್ದಾರೆ. ಅವರ ವಾಹನ ಚಾಲಕನ ಎಡ ಭುಜಕ್ಕೆ ಗುಂಡು ತಗುಲಿರುವುದರಿಂದ ಅವರೂ ಕೂಡ ಗಾಯಗೊಂಡಿದ್ದಾರೆ. ಇಬ್ಬರನ್ನೂ `ಕೆ.ಎಲ್.ಇ.’ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದ್ದು, ಇಬ್ಬರ ಆರೋಗ್ಯಕ್ಕೆ ಅಪಾಯವಿಲ್ಲವೆಂದು ಆಧುನಿಕ ವೈದ್ಯರು ಹೇಳಿದ್ದಾರೆ. ಈ ಪ್ರಕರಣದಿಂದ ನಗರದಲ್ಲಿ ಪೊಲೀಸ ಬಂದೋಬಸ್ತನ್ನು ಹೆಚ್ಚಿಸಲಾಗಿದೆ. ಈ ಪ್ರಕರಣದಲ್ಲಿ ಅಭಿಜಿತ ಭಾತಕಾಂಡೆ, ರಾಹುಲ ಕೋಡಚವಾಡ ಮತ್ತು ಜ್ಯೋತಿಬಾ ಮುತಗೇಕರ ಹೆಸರಿನ ಮೂವರನ್ನು ಬಂಧಿಸಲಾಗಿದೆಯೆಂದು ಬೆಳಗಾವಿ ಪೊಲೀಸ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಇವರು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿರಿ- ಶ್ರೀ ಪ್ರಮೋದ ಮುತಾಲಿಕ , ಶ್ರೀರಾಮ ಸೇನೆ

ಈ ಘಟನೆಯ ವಿಷಯದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಶ್ರೀ ಪ್ರಮೋದ ಮುತಾಲಿಕ ಇವರು ಮಾತನಾಡುತ್ತಾ, `ಈ ಘಟನೆಯನ್ನು ನಾವು ಬಲವಾಗಿ ನಿಷೇಧಿಸುತ್ತೇವೆ. ಈ ಕೃತ್ಯ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು’.ಎಂದು ಹೇಳಿದ್ದಾರೆ.

ಸಭೆ ನಡೆಸುವ ಬಗ್ಗೆ ಇರುವ ವಿರೋಧದ ಕಾರಣದಿಂದ ಗೋಲಿಬಾರ ?

ಜನೇವರಿ 8 ರಂದು ನಗರದಲ್ಲಿ ಛತ್ರಪತಿ ಸಂಭಾಜಿ ಮೈದಾನದಲ್ಲಿ ವಿರಾಟ ಹಿಂದೂ ಸಭೆಯ ಆಯೋಜನೆ ಮಾಡಲಾಗಿತ್ತು. ಆ ಸಭೆಗೆ ಹಿಂದೂ ರಾಷ್ಟ್ರ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಧನಂಜಯ ದೇಸಾಯಿ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ ಮುತಾಲಿಕ ಇವರು ಮಾರ್ಗದರ್ಶನ ಮಾಡಿದರು. ಸಭೆಗೆ ಇದ್ದ ವಿರೋಧದ ಕಾರಣದಿಂದ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿ ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುವ ಆಕ್ರಮಣಗಳು ಚಿಂತಾಜನಕವಾಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ.