ವೀಸಾ ಅವಧಿ ಮುಗಿದ ನಂತರವೂ ವಾಸಿಸುತ್ತಿದ್ದ ಆಫ್ರಿಕನ್ನರು ಬಂಧಿಸಿದಕ್ಕೆ ಆಫ್ರಿಕನ್ ಸಮೂಹದಿಂದ ದೆಹಲಿ ಪೋಲಿಸರ ಮೇಲೆ ದಾಳಿ

ನವದೆಹಲಿ – ದಕ್ಷಿಣ ದೆಹಲಿಯ ಪೊಲೀಸರು ಜನವರಿ ೭ ರಂದು ಮಧ್ಯಾಹ್ನ ಸುಮಾರು ೩ ಗಂಟೆಗೆ ರಾಜು ಪಾರ್ಕ್ ಪರಿಸರದಿಂದ ೩ ಆಫ್ರಿಕರನ್ನು ಬಂಧಿಸಿದ್ದರು. ಅವರ ವೀಸಾದ ಅವಧಿ ಮುಗಿದಿದ್ದರೂ ಅವರು ಭಾರತದಲ್ಲಿ ವಾಸವಾಗಿದ್ದರು. ಆಗ ಆಫ್ರೀಕಿ ವಂಶದ ೧೦೦ ಕ್ಕೂ ಹೆಚ್ಚಿನ ಜನರ ಸಮೂಹದಿಂದ ಪೊಲೀಸರನ್ನು ಸತ್ತುವರೆದು ಅವರನ್ನು ಥಳಿಸಿದರು. ಈ ಘಟನೆಯ ದುರುಪಯೋಗಪಡಿಸಿಕೊಂಡು ಪೊಲೀಸರ ವಶದಲ್ಲಿರುವ ಆರೋಪಿ ಓಡಿ ಹೋದರು; ಆದರೆ ಅದರಲ್ಲಿನ ಒಬ್ಬ ಆರೋಪಿ ಫಿಲಿಪ್ ನನ್ನು ಪೊಲೀಸರು ಮತ್ತೆ ಬಂಧಿಸಿದರು.

ಈ ಘಟನೆಯ ನಂತರ ಸಂಜೆ ಆರೂವರೆಯ ನಂತರ ಸಂಯುಕ್ತ ತಂಡ ಮತ್ತೆ ರಾಜು ಪಾರ್ಕಿಗೆ ಹೋದರು. ಇಲ್ಲಿಂದ ಅವರು ನೈಜೀರಿಯಾದ ೪ ನಾಗರೀಕರನ್ನು ಬಂದಿಸಿದರು. ಇದರಲ್ಲಿ ಒಬ್ಬ ಮಹಿಳೆಯ ಸಮಾವೇಶ ಕೂಡ ಇದೆ. ನಂತರ ಮತ್ತೆ ಆಫ್ರಿಕಾದ ಗುಂಪು ಪೊಲೀಸರನ್ನು ಸುತ್ತುವರೆದರು. ಈ ಸಮಯದಲ್ಲಿ ಅವರ ಸಂಖ್ಯೆ ಸುಮಾರು ೧೫೦ -೨೦೦ ರಷ್ಟು ಇತ್ತು. ಇವರು ಆರೋಪಿಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದರು; ಆದರೆ ಈ ಸಮಯದಲ್ಲಿ ಪೊಲೀಸ ತಂಡ ಜಾಗರೂಕವಾಗಿತ್ತು. ತಂಡವು ಪರಿಸ್ಥಿತಿಯನ್ನು ಹತೋಟಿಗೆ ತಂದು ಆರೋಪಿಯನ್ನು ಪೊಲೀಸ ಠಾಣೆಗೆ ಎಳೆದು ತಂದರು. ಅವರನ್ನು ಗಡಿಪಾರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು !

ಪೊಲೀಸರು ವಿದೇಶಿಯರಿಂದ ಒದೆ ತಿಂದಿದ್ದರಿಂದ ಜಗತ್ತಿನಾದ್ಯಂತ ಭಾರತೀಯ ಪೊಲೀಸರ ಬಗ್ಗೆ ಯಾವ ಪ್ರತಿಮೆ ನಿರ್ಮಾಣ ಆಗಿರಬಹುದು, ಇದರ ಯೋಚನೆ ಮಾಡದೆ ಇರುವುದು ಒಳಿತು !