ಅಂಜಲಿಯು ಕಾರ್ ನ ಅಡಿಯಲ್ಲಿ ಸಿಲುಕಿದ್ದು ತಿಳಿದಿತ್ತು ! – ಅಪರಾಧಿಗಳಿಂದ ಸ್ವೀಕೃತಿ

ದೆಹಲಿಯಲ್ಲಿನ ಅಪಘಾತ ಪ್ರಕಾರಣ

ನವ ದೆಹಲಿ – ದೆಹಲಿಯ ಕಂಝಾವಾಲಾ ಅಪಘಾತದಲ್ಲಿ ಮೃತಪಟ್ಟ ಯುವತಿ ಅಂಜಲಿಯು ಕಾರ್ ನ ಅಡಿಗೆ ಸಿಲುಕಿದ್ದಳು, ಇದು ನಮಗೆ ತಿಳಿದಿತ್ತು, ಎಂದು ಬಂಧಿತ ಅಪರಾಧಿಗಳು ಒಪ್ಪಿಕೊಂಡಿದ್ದಾರೆ. ಡಿಸೆಂಬರ್ ೩೧ ರಂದು ರಾತ್ರಿ ಅಂಜಲಿಯು ಸ್ಕೂಟಿಗೆ ಕಾರ್ ಗುದ್ದಿತು. ಇದರಲ್ಲಿ ಅಂಜಲಿ ಕೆಳಗೆ ಬಿದ್ದ ನಂತರ ಆಕೆ ಕಾರ್ ನ ಅಡಿಯಲ್ಲಿ ಸಿಲುಕಿದ್ದಳು ಮತ್ತು ೧೨ ಕಿಲೋಮೀಟರ್ ಎಳೆದುಕೊಂಡು ಹೋಗಿದ್ದರಿಂದ ಆಕೆಯು ಸಾವನ್ನಪ್ಪಿದ್ದಳು.

ಈ ಅಪಘಾತದ ಸಮಯದಲ್ಲಿ ಆಕೆಯ ಜೊತೆ ಆಕೆಯ ಸ್ನೇಹಿತೆ ನಿಧಿ ಕೂಡ ಇದ್ದಳು. ಅಪಘಾತದ ನಂತರ ಆಕೆ ಓಡಿ ಹೋದಳು. ೨ ವರ್ಷಗಳ ಹಿಂದೆ ಗಾಂಜಾ ಮತ್ತು ಮಾದಕ ವಸ್ತುಗಳು ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಆಕೆಯನ್ನು ಬಂದಿಸಲಾಗಿತ್ತು, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಪಘಾತದ ಪ್ರಕರಣದಲ್ಲಿ ಇಲ್ಲಿಯವರೆಗೆ ಮನೋಜ ಮಿತ್ತಲ, ದೀಪಕ ಖನ್ನಾ, ಅಮಿತ ಖನ್ನಾ, ಕೃಷ್ಣ, ಮಿಥುನ ಮತ್ತು ಆಶುತೋಷ ಇವರನ್ನು ಬಂಧಿಸಲಾಗಿತ್ತು. ಹಾಗೂ ಅಂಕುಶ ಖನ್ನಾಗೆ ಜಾಮಿನು ಸಿಕ್ಕಿದೆ.

(ಸೌಜನ್ಯ : India Today)

ಸಂಪಾದಕೀಯ ನಿಲುವು

ಓರ್ವ ಯುವತಿಯನ್ನು ಈ ರೀತಿ ನಿರ್ದಯವಾಗಿ ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನಿಸಬೇಕು !