`ಲಷ್ಕರ್-ಎ-ಖಾಲ್ಸಾ’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಿಂದ ಭಾಜಪದ ಮುಖಂಡರಿಗೆ ಪಕ್ಷ ಬಿಡುವಂತೆ ಬೆದರಿಕೆ !

ಭಾಜಪದ ಸಂಸದ ಘನಶ್ಯಾಮ ಲೋಧಿ

ರಾಮಪುರ (ಉತ್ತರಪ್ರದೇಶ) – `ಲಷ್ಕರ್-ಎ-ಖಾಲ್ಸಾ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸಂದೀಪ ಸಿಂಹ ಈ ಭಯೋತ್ಪಾದಕನು ಇಲ್ಲಿಯ ಭಾಜಪದ ಸಂಸದ ಘನಶ್ಯಾಮ ಲೋಧಿ ಇವರಿಗೆ ಭಾಜಪವನ್ನು ಬಿಡದೇ ಇದ್ದಲ್ಲಿ ಅವರ ಜೊತೆಗೆ ಅವರ ಕುಟುಂಬದವರ ಹತ್ಯೆ ಮಾಡುವುದಾಗಿ ಬೆದರಿಕೆ ನೀಡಿದ್ದಾನೆ. ಪಂಜಾಬ್, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಈ ರಾಜ್ಯಗಳಲ್ಲಿನ ಭಾಜಪದ ಅನೇಕ ಮುಖಂಡರಿಗೆ ಈ ರೀತಿಯ ಬೆದರಿಕೆ ನೀಡಲಾಗಿದೆ. ಲೋಧಿ ಇವರ ವಾಟ್ಸಾಅಪ್ ಮೇಲೆ ಈ ಬೆದರಿಕೆ ಬಂದಿದೆ. ಹಾಗೂ ಭಾಜಪದ ಇತರ ಮುಖಂಡರ ಸಹಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಮತ್ತು ಭಾರತೀಯ ಸೇನೆಗೂ ಕೂಡ ಗುರಿ ಪಡಿಸಲಾಗುವುದು ಎಂದು ಬೆದರಿಕೆ ನೀಡಲಾಗಿದೆ.

ಭಾಜಪದ ಯುವ ಮೋರ್ಚಾದ ಪ್ರಮುಖ ತಜಿಂದಿರ ಸಿಂಹ ತಿವಾನ

೧. ಮುಂಬಯಿನ ಭಾಜಪದ ಯುವ ಮೋರ್ಚಾದ ಪ್ರಮುಖ ತಜಿಂದಿರ ಸಿಂಹ ತಿವಾನ ಅವರಿಗೂ ಕೂಡ ಅವರ ವಾಟ್ಸಅಪ್ ನಲ್ಲಿ ಈ ರೀತಿಯ ಬೆದರಿಕೆ ನೀಡಿದ್ದಾರೆ. ಈ ಬೆದರಿಕೆ ಕೂಡ ಸಂದೀಪ ಸಿಂಹನು ನೀಡಿದ್ದಾನೆ.

೨. ಉತ್ತರಪ್ರದೇಶದ ಮುರಾದಬಾದ ಇಲ್ಲಿಯ ಭಾಜಪದ ಕಾರ್ಯಕರ್ತ ವೀರ ಸೈನಿ ಇವರಿಗೂ ಕೂಡ ಬೆದರಿಕೆ ನೀಡಲಾಗಿದೆ. ಅವರು ಭಾಜಪದ ಕಿಸಾನ್ ಮೋರ್ಚ ಸಂಘಟನೆಯ ಪದಾಧಿಕಾರಿ ಆಗಿದ್ದಾರೆ. ಈ ಬೆದರಿಕೆಯಲ್ಲಿ ಅಶ್ಲೀಲ ಘೋಷಣೆ ಮತ್ತು `ಖಲಿಸ್ತಾನ ಜಿಂದಾಬಾದ್’ ಎಂದು ಬರೆಯಲಾಗಿದೆ.

ಲಷ್ಕರ್ ಎ ಖಾಲಾಸಾ ಈ ಸಂಘಟನೆಯನ್ನು ಪಾಕಿಸ್ತಾನ ಹುಟ್ಟುಹಾಕಿದೆ

ಪಾಕಿಸ್ತಾನದ ಕುಖ್ಯಾತ ಗೂಢಚಾರ ಸಂಸ್ಥೆ ಐ.ಎಸ್.ಐ. ನಿಂದ `ಲಷ್ಕರ್-ಎ-ಖಾಲ್ಸಾ’ದ ಸ್ಥಾಪನೆ ಮಾಡಿದೆ. ಸಾಮಾಜಿಕ ಮಾಧ್ಯಮದಿಂದ ಈ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಈ ಮೂಲಕ ಶಿಖ್ಕ ಯುವಕರನ್ನು ಬ್ರೈನ್ ವಾಷ್ ಮಾಡಿ ಈ ಸಂಘಟನೆಗೆ ಸೇರಿಸಲು ಪ್ರಯತ್ನ ಮಾಡಲಾಗುತ್ತದೆ. ಐ.ಎಸ್.ಐ.ನ ಅಧಿಕಾರಿ ಫೇಸ್ ಬುಕ್ ನಲ್ಲಿ `ಅಮರ ಖಲಿಸ್ತಾನಿ’ `ಆಜಾದ್ ಖಲಿಸ್ತಾನಿ’ ಈ ಹೆಸರಿನ ಖಾತೆ ತೆರೆದು ಪ್ರಸಾರ ಮಾಡುತ್ತಿದೆ.

ಲಷ್ಕರ್-ಎ-ಖಾಲ್ಸಾದ ಮೂಲಕ ಜಮ್ಮು-ಕಾಶ್ಮೀರದಲ್ಲಿ ಕಾರ್ಯಚಟುವಟಿಕೆ ನಡೆಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಫಗಾನ ನಾಗರಿಕರನ್ನು ಸೇರಿಸಲಾಗುತ್ತಿದೆ. ಅವರಿಗೆ ಭಯೋತ್ಪಾದಕ ಕಾರ್ಯಚಟುವಟಿಕೆ ನಡೆಸುವ ಪ್ರಶಿಕ್ಷಣ ನೀಡಲಾಗುತ್ತಿದೆ. ಈ ಸಂಘಟನೆಯಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿನ ಗೂಂಡಾ ಶಿಖ್ಕರನ್ನು ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಅವರಿಗೆ ಮಾದಕ ವಸ್ತುಗಳ ಮೂಲಕ ಹಣಗಳಿಸುವ ಆಮಿಷ ತೋರಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರ ಜೊತೆಗೆ ಈಗ ಖಲಿಸ್ತಾನಿ ಭಯೋತ್ಪಾದನೆ ಹೆಚ್ಚುತ್ತಿದೆ. ಸರಕಾರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದರ ಬೇರುಗಳು ಗಟ್ಟಿ ಆಗುವ ಮುನ್ನವೇ ಅದನ್ನು ಕಿತ್ತು ಎಸೆಯವ ಅವಶ್ಯಕತೆ ಇದೆ !