ಬೆಂಗಳೂರು – ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯ ಇವರು ಜನವರಿ ೬, ೨೦೨೩ ರಂದು ಹಿಂದುತ್ವದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು, “ರಾಮ ಮಂದಿರಕ್ಕೆ ನಾನು ಎಂದಿಗೂ ವಿರೋಧ ಮಾಡಿಲ್ಲ ನಾನು ಹಿಂದೂ ಆಗಿದ್ದೇನೆ; ಆದರೆ ಹಿಂದುತ್ವದ ವಿರೋಧಿ ಆಗಿರುವೆ,” ಎಂದು ಹೇಳಿದರು. (`ಯಾವ ರೀತಿ ಸಕ್ಕರೆ ಮತ್ತು ಅದರ ಸಿಹಿ ಬೇರೆ ಮಾಡಲು ಸಾಧ್ಯವಿಲ್ಲ ಅದೇ ರೀತಿ ಹಿಂದೂ ಮತ್ತು ಹಿಂದುತ್ವ ಇದೆ, ಇದು ಕೂಡ ತಿಳಿಯದೇ ಇರುವ ಸಿದ್ದರಾಮಯ್ಯ ! – ಸಂಪಾದಕರು)
ನಾನು ಹಿಂದೂ, ಆದರೆ ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ: ಮಾಜಿ ಸಿಎಂ ಸಿದ್ಧರಾಮಯ್ಯ#Siddaramaiah #Hinduism #Hubballi https://t.co/GkddCYJYRo
— TV9 Kannada (@tv9kannada) January 6, 2023
೧. ರಾಮ ಮಂದಿರದ ಮೂಲಕ ರಾಜಕೀಯ ಲಾಭ ಪಡೆಯುವವರ ವಿರುದ್ಧ ಇದ್ದೇನೆ. ಭಾಜಪ ರಾಮಮಂದಿರವನ್ನು ರಾಜಕೀಯ ಲಾಭಕ್ಕಾಗಿ ಉಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಅವರು, ಭಾರತೀಯ ಸಂವಿಧಾನದಲ್ಲಿ ಎಲ್ಲಾ ಧರ್ಮಕ್ಕೂ ಸಮಾನವಾಗಿದೆ ಎಂದು ಹೇಳಿದರು. (ಹೀಗಿದ್ದರೇ, ಒಂದು ವಿಶಿಷ್ಟ ಧರ್ಮದ ಜನರಿಗಾಗಿ ಕಾಂಗ್ರೆಸ್ ಎಷ್ಟು ವರ್ಷ ವಿಶೇಷ ರಿಯಾಯತಿ ಏಕೆ ನೀಡಿತು ? ಈ ಮೂಲಕ ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ಸನ್ನೂ ಸಿದ್ದರಾಮಯ್ಯ ಏಕೆ ವಿರೋಧಿಸಲಿಲ್ಲ ? – ಸಂಪಾದಕರು)
೨. ಭಾಜಪದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇವರು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು `ಸಿದ್ದರಾಮಯ್ಯ ಖಾನ್’ ಎಂದು ಹೇಳಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ನಮ್ಮ ದೇಶದಲ್ಲಿ ಬೇರೆಯ ಧಾರ್ಮಿಕ ಸಂಸ್ಕೃತಿ ಇದೆ. ಪ್ರತಿಯೊಂದು ವ್ಯಕ್ತಿಯನ್ನೂ ಮನುಷ್ಯವೆಂದು ನೋಡಬೇಕು. ಕಾಂಗ್ರೆಸ್ ಪಕ್ಷ ಯಾವಾಗಲೂ ಕೋಮುವಾದಕ್ಕೆ ಪ್ರೋತ್ಸಾಹ ನೀಡುವವರಿಗೆ ವಿರೋಧಿಸಿದೆ, ಎಂದು ಹೇಳಿದರು. (ಸ್ವಾತಂತ್ರ್ಯದ ೭೫ ವರ್ಷದ ನಂತರ ಕೂಡ ಮೀಸಲಾತಿ ಮುಂದುವರೆಸಿ ಕಾಂಗ್ರೆಸ್ ಜಾತಿ ಆಧಾರದಲ್ಲಿ ಸಮಾಜದಲ್ಲಿ ಬಿರುಕು ಮೂಡಿಸುತ್ತದೆ ಮತ್ತು ರಾಜಕೀಯ ದುರುಪಯೋಗಪಡಿಸಿಕೊಳ್ಳುವುದಕ್ಕಾಗಿ ಕೋಮುವಾದಕ್ಕೆ ಪ್ರೋತ್ಸಾಹ ನೀಡುತ್ತದೆ, ಇದು ಎಲ್ಲರೂ ತಿಳಿದಿರುವ ವಿಷಯವೇ ಆಗಿದೆ ! – ಸಂಪಾದಕರು)