77 ಸಾವಿರ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಹೊಂದಿರುವ ವಕ್ಫ ಬೋರ್ಡನ ವ್ಯವಹಾರ ಪಾರದರ್ಶಕವಾಗಿಲ್ಲ !

ಕೆಲಸವನ್ನು ಜಾಲತಾಣದಲ್ಲಿ ಪ್ರಕಟಿಸಲು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರಿಂದ ಮುಖ್ಯಮಂತ್ರಿಗಳಿಗೆ ಪತ್ರ !

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಮುಂಬಯಿ, 6 ಜನೇವರಿ (ವಾರ್ತೆ) – ಕೆಲಸದಲ್ಲಿ ಪಾರದರ್ಶಕತೆ ಬರಬೇಕು, ಅದಕ್ಕಾಗಿ ಸರಕಾರದಿಂದ ಎಲ್ಲ ನಾಗರಿಕರಿಗಾಗಿ ಅನುದಾನ ಪಡೆದಿರುವ ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಯ ಕೆಲಸಗಳ ಮಾಹಿತಿಯನ್ನು ಜಾಲತಾಣದಲ್ಲಿ ಲಭ್ಯ ಮಾಡಿಕೊಡಲಾಗುತ್ತದೆ. ಸರಕಾರದ ವಿವಿಧ ವಿಭಾಗ ಮತ್ತು ನಗರಪಾಲಿಕೆಗಳಿಗೂ ಸ್ವತಂತ್ರವಾದ ಜಾಲತಾಣಗಳಿವೆ; ಆದರೆ 77 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ವಕ್ಫ ಪ್ರಾಧಿಕರಣದ ಕೆಲಸಗಳು ಪ್ರಜಾಪ್ರಭುತ್ವದ ಮಾಲೀಕರಾಗಿರುವ ನಾಗರಿಕರ ವರೆಗೆ ತಲುಪುವುದೇ ಇಲ್ಲ. ಹಿಂದೂ ವಿಧೀಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ ಇವರು ಈ ಗಂಭೀರ ವಿಷಯದ ಕಡೆಗೆ ಸರಕಾರದ ಗಮನವನ್ನು ಸೆಳೆದಿದ್ದಾರೆ. ಜನೇವರಿ 6 ರಂದು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದು ವಕ್ಫ ಪ್ರಾಧಿಕಾರಣದ ಕೆಲಸ ಕಾರ್ಯಗಳನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ಮನವಿ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಖಾತೆಯು ಮುಖ್ಯಮಂತ್ರಿಗಳೆಡೆಗೆ ಇರುವುದರಿಂದ ಈ ಪತ್ರ ಮುಖ್ಯಮಂತ್ರಿಗಳ ಹೆಸರಿಗೆ ನೀಡಲಾಗಿದೆ.

ಈ ಪತ್ರದಲ್ಲಿ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು,

1. ಭಾರತೀಯ ನ್ಯಾಯಾಂಗವು ಕೂಡ ಕೆಲಸ ಕಾರ್ಯಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವುದನ್ನು ಪ್ರಾರಂಭಿಸಿದೆ. ಉಚ್ಚ ನ್ಯಾಯಾಲಯದಲ್ಲಿ ಎಷ್ಟು ಗಂಟೆಗೆ, ಎಷ್ಟು ಸಂಖ್ಯೆಯ ಪ್ರಕರಣದ ಆಲಿಕೆ ಇದೆ ? ಆಲಿಕೆಗೆ ಎಷ್ಟು ಸಮಯದವರೆಗೆ ನಡೆಯಿತು ? ಎನ್ನುವುದನ್ನು ಜಗತ್ತಿನಲ್ಲಿ ಎಲ್ಲಿ ಕುಳಿತು ನೋಡಬಹುದಾಗಿದೆ. ದೇಶದ ಸೆಷನ್ ನ್ಯಾಯಾಲಯವು, ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಇವರ ಬೃಹತ್ ಪ್ರಸಾರ ಮಾಧ್ಯಮಗಳು ಕೂಡ ಅವರ ದಿನನಿತ್ಯದ ಕೆಲಸಗಳನ್ನು ಜಾಲತಾಣದಲ್ಲಿ ಲಭ್ಯವಿರುತ್ತದೆ. ಆ ಪ್ರಕರಣಗಳಲ್ಲಿ ಆಯಾ ಸಮಯದ ಆದೇಶಗಳನ್ನು ಜಾಲತಾಣಗಳ ಮೇಲೆ ಪ್ರಸಾರವಾಗುತ್ತದೆ. ಪ್ರಕರಣದ ದಿನಾಂಕ, ಯಾವ ನ್ಯಾಯಧೀಶರ ಮುಂದೆ ಎಷ್ಟು ಪ್ರಕರಣಗಳಿವೆ ? ಮತ್ತು ಅದು ಯಾವ ಹಂತದಲ್ಲಿದೆ ? ನ್ಯಾಯಾಧೀಶರು ಎಷ್ಟು ಕಾಲ ರಜೆಯ ಮೇಲೆ ಇರುವವರಿದ್ದಾರೆ ?, ಇಷ್ಟು ಸವಿಸ್ತಾರ ಮಾಹಿತಿಯನ್ನು ಜಾಲತಾಣದಲ್ಲಿ ಪ್ರಸಾರವಾಗುತ್ತದೆ.

2. ವಕ್ಫ ಪ್ರಾಧಿಕರಣ ಮಾತ್ರ ಇಲ್ಲಿಯವರೆಗೂ 50 ವರ್ಷಗಳ ಹಿಂದಿನ ಪದ್ಧತಿಯನ್ನೇ ಏಕೆ ಮುಂದುವರಿಸಿಕೊಂಡು ಬಂದಿದೆ ? ಅಥವಾ ಅದನ್ನು ಹಾಗೆಯೇ ಮುಂದುವರಿಸಲಾಗುತ್ತಿದೆಯೇ? ಈ ಪ್ರಾಧಿಕಾರಣದ ನ್ಯಾಯಾಧೀಶರ ಹುದ್ದೆ, ಅಧ್ಯಕ್ಷರು ಅಥವಾ ಸದಸ್ಯರು ಮುಂತಾದ ಹುದ್ದೆಗಳನ್ನು ಯಾರು ಅಲಂಕರಿಸುತ್ತಾರೆ ? ಅವರನ್ನು ಹೇಗೆ ಆರಿಸುತ್ತಾರೆ ? ಯಾವ ಪ್ರಕರಣದ ಆಲಿಕೆ ಯಾವಾಗ ಆಗುತ್ತದೆ ? ಎನ್ನುವ ಯಾವುದೇ ಮಾಹಿತಿ ಎಲ್ಲಿಯೂ ಕಂಡು ಬಂದಿರುವುದಿಲ್ಲ. ಈ ಮಾಹಿತಿಯನ್ನು ಹೊರಗೆ ತಿಳಿಯಬಾರದೆಂದು ಇದೆಯೇ ? ಇದರಿಂದ ಯಾರ ಹಿತವನ್ನು ಕಾಪಾಡಲಾಗುತ್ತಿದೆ ?

3. ಆಂಗ್ಲ ಭಾಷೆಯಲ್ಲಿ ಒಂದು ಗಾದೆಯಿದೆ, `ನಾಲೇಜ ಇಸ್ ಪಾವರ ಅಂಡ್ ಬೋಥ ಆರ್ ಸೋರ್ಸಸ್ ಆಫ್ ಸ್ಯಾಟಿಸ್ ಫ್ಯಾಕ್ಷನ್’ (ಜ್ಞಾನವು ಶಕ್ತಿಯಾಗಿದೆ ಮತ್ತು ಎರಡೂ ಸಮಾಧಾನದ ಸ್ರೋತವಾಗಿದೆ). ಇಂದಿನ ಜಗತ್ತು ಮಾಹಿತಿಯೇ ಆಗಿದೆ. ಹೀಗಿರುವಾಗ ನಾವು ಮುಸಲ್ಮಾನ ಅಥವಾ ಮುಸಲ್ಮಾನೇತರರಿಗೆ ಈ ಮಾಹಿತಿಯಿಂದ ಏಕೆ ವಂಚಿತಗೊಳಿಸುತ್ತಿದ್ದೀರಿ ? ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ.

4. `ವಕ್ಫ ಬೋರ್ಡ ಅಥವಾ ಸರಕಾರದ ಬಳಿ ಹಣ ಇಲ್ಲದ್ದರಿಂದ ನ್ಯಾಯಾಲಯದಂತಹ ಮಾಹಿತಿಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ’, ಎನ್ನುವ ಹಾರಿಕೆಯ ಉತ್ತರವನ್ನು ನೀವು ನೀಡುವುದಿಲ್ಲವೆಂದು ನಮಗೆ ಖಂಡಿತವಾಗಿಯೂ ತಿಳಿದಿದೆ; ಕಾರಣ ಮಹಾರಾಷ್ಟ್ರ ಸರಕಾರ ಇಷ್ಟು ಬಡವಾಗಿಲ್ಲ.

ದೇವಸ್ಥಾನಗಳ ನಿಧಿಯಿಂದ ದೇಣಿಗೆ, ವಕ್ಫ ಬೋರ್ಡನಿಂದ ಏನು ?

ದೇವಸ್ಥಾನಗಳ ಹಣದಿಂದ ಆಸ್ಪತ್ರೆ, ಶಾಲೆ ಹೀಗೆ ಅನೇಕ ಕಡೆಗಳಲ್ಲಿ ದೊಡ್ಡ ದೇಣಿಗೆಗಳನ್ನು ನೀಡುವುದು ಸರಕಾರಕ್ಕೆ ರೂಢಿಯಾಗಿದೆ. ಸಿದ್ಧಿವಿನಾಯಕ ದೇವಸ್ಥಾನದ ವಿಷಯದಲ್ಲಿ ಮಾಜಿ ನ್ಯಾಯಮೂರ್ತಿ ಟಿಪಣೀಸ ಸಮಿತಿಯ ವರದಿ, ವಿಧಿ ಮತ್ತು ನ್ಯಾಯ ವಿಭಾಗವು ಆಯಾ ಸಮಯದಲ್ಲಿ ಕೋರಿರುವ ಸ್ಪಷ್ಟೀಕರಣಗಳು ದೇವಸ್ಥಾನಗಳ ವಿಷಯದಲ್ಲಿತ್ತು; ಆದರೆ ವಕ್ಫ ಬೋರ್ಡ ಬಗ್ಗೆ ಏನು ? ಶಿರ್ಡಿ ದೇವಸ್ಥಾನದ 500 ಕೋಟಿ ರೂಪಾಯಿಗಳನ್ನು ನಿಳವಂಡೆ ಡ್ಯಾಂನ ಕಾಲುವೆಗಾಗಿ ನೀಡಿರುವುದು, ಸರಕಾರಿ ಅಧೀನದಲ್ಲಿರುವ ದೇವಸ್ಥಾನಗಳು ಮುಖ್ಯಮಂತ್ರಿ ಸಹಾಯನಿಧಿಗೆ ಕೋಟಿಗಟ್ಟಲೆ ರೂಪಾಯಿಗಳ ದೇಣಿಗೆಗಳನ್ನು ನೀಡುವುದು, ಇವು ಕೆಲವು ಉದಾಹರಣೆಗಳಾಗಿವೆ. ಸರಕಾರ ಈ ವಕ್ಫ ಬೋರ್ಡಗೆ ಈ ರೂಢಿ ಏಕೆ ಮಾಡುವುದಿಲ್ಲ ? ಈ ಭೇದಭಾವವನ್ನು ನೀವು ಏಕೆ ಮಾಡುತ್ತೀರಿ ? ಪಂಢರಪುರದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಬಳಿ 1 ಸಾವಿರದ 200 ಎಕರೆ ಭೂಮಿಯಿದೆ; ಆದ್ದರಿಂದ ಆ ದೇವಸ್ಥಾನವನ್ನು ಶ್ರೀಮಂತವೆಂದು ತಿಳಿಯಲಾಗುತ್ತಿದ್ದರೇ 77 ಸಾವಿರ ಎಕರೆ ಭೂಮಿಯಿರುವ ವಕ್ಫ ಬೋರ್ಡಗೆ ಏನು ಹೇಳಬೇಕು ? ಈ ಭೂಮಿಯ ತಪಾಸಣೆಯನ್ನು ಸಮಾಜದಿಂದ ಏಕೆ ಮುಚ್ಚಿಡುತ್ತಿದ್ದಾರೆ ?

ನ್ಯಾಯವಾದಿ ವಿರೇಂದ್ರ ಇಚಲಕರಂಜೀಕರ ಇವರು ಸರಕಾರದಲ್ಲಿ ಮಾಡಿರುವ ಬೇಡಿಕೆ !

1. ವಕ್ಫ ಬೋರ್ಡ ತಮ್ಮ ಭೂಮಿಯಲ್ಲಿ ಪ್ರತಿವರ್ಷ ಏನಾದರೂ ಹಾಕುತ್ತಲೇ ಇರಬೇಕು. ಅದರ ಲೆಕ್ಕವನ್ನು ಸರಿಯಾಗಿ ಇಡಲಾಗುತ್ತಿದೆಯೇ ? ಎನ್ನುವ ಪ್ರಶ್ನೆ ನಮಗಿದೆ. ಇದರ ಮಾಹಿತಿ ಜನತೆಗೆ ಸಿಗಬೇಕು, ಇದಕ್ಕಾಗಿ ‘e-courts.gov.in’ ಅಥವಾ ‘https://courts.mah.nic.in’ ಈ ನ್ಯಾಯಾಲಯದ ಸರಕಾರಿ ಜಾಲತಾಣದಲ್ಲಿ `ಮಹಾರಾಷ್ಟ್ರ ವಕ್ಫ ಪ್ರಾಧಿಕಾರಣ’ದಲ್ಲಿ ಸಮಾವೇಶವಾಗಲು ಶೀಘ್ರವಾಗಿ ಹೆಜ್ಜೆಯನ್ನಿಡಬೇಕು.

2. ಈ ಪ್ರಕ್ರಿಯೆ ಇಲ್ಲಿಯವರೆಗೆ ಮಾಡದೇ ಇದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸರಕಾರಿ ಕ್ರಮ ಜರುಗಿಸಬೇಕು.

3. ಮಾಹಿತಿ ದೊರೆಯದೇ ಇರುವುದರಿಂದ ವಕ್ಫ ಪ್ರಾಧಿಕಾರಣದ ಮುಂದೆ ಬರುವ ಅರ್ಜಿದಾರರು, ಅವರ ನ್ಯಾಯವಾದಿ, ಹಾಗೆಯೇ ಇದರಿಂದ ಸಮಾಜದ ದೊಡ್ಡ ಅಸೌಕರ್ಯವಾಗುತ್ತಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ವಕ್ಫ ಪ್ರಾಧಿಕಾರಣದ ಕೆಲಸ ಕಾರ್ಯಗಳ ಮಾಹಿತಿಯನ್ನು ಮುಚ್ಚಿಟ್ಟು ಕೊಳ್ಳಲು ಇಚ್ಛಿಸುವಂತಹವರ ಶುಕ್ರಾಚಾರ್ಯರ ಮೇಲೆ ಕ್ರಮಕೈಕೊಳ್ಳಬೇಕು.

4. ಸಂಕೇತಸ್ಥಳದ ಮೇಲೆ ಮಾಹಿತಿ ದೊರೆಯುವಂತೆ ಮಾಡಲು ಇನ್ನೂ 10 ವರ್ಷಗಳಾದರೂ ತಗಲುತ್ತದೆ ಅಥವಾ ಬೇಕಾಗಬಹುದು. ಇದರಿಂದ ಅದಾಗುವವರೆಗೆ ಒಂದು ಸ್ವತಂತ್ರ ಜಾಲತಾಣ ಮತ್ತು `ಆಂಡ್ರಾಯ್ಡ ಅಪ್ಲಿಕೇಶನ’ ತಯಾರಿಸಿ ಈ ಮಾಹಿತಿಯನ್ನು ಜನರ ವರೆಗೆ ತಲುಪಿಸಬೇಕು.