ಬುರಹಾನಪುರ (ಮಧ್ಯಪ್ರದೇಶ) ಇಲ್ಲಿಯ ದರ್ಗಾದ ಹೊಲದಲ್ಲಿ ಹನುಮಂತನ ಮೂರ್ತಿ ಪತ್ತೆ !

(ದರ್ಗಾ ಎಂದರೆ ಮುಸಲ್ಮಾನರ ಗೋರಿ)

ಭೋಪಾಲ್ – ರಾಜ್ಯದ ಬುರಹಾನಪುರದಲ್ಲಿನ ದರ್ಗಾಹ-ಏ-ಹಕಿಮಿ ಮತ್ತು ಶ್ರೀ ಇಚ್ಛೇಶ್ವರ ಮಂದಿರ ಟ್ರಸ್ಟ್ ನ ಭೂಮಿಯಲ್ಲಿ ಅತಿಕ್ರಮಣದ ವಾದ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಮತ್ತು ದರ್ಗಾ-ಏ-ಹಕಿಮಿ ಎದುರು ಬದರು ಇರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈಗ ಜನವರಿ ೩, ೨೦೨೩ ರಂದು ಬುರಹಾನಪುರನ ಲೋಧಿಪುರಾದ ದರ್ಗಾಹ-ಏ-ಹಕಿಮಿಯ ಒಡೆತನದ ಹೊಲದಲ್ಲಿ ಹನುಮಂತನ ಮೂರ್ತಿ ಪತ್ತೆಯಾಗಿದ್ದರಿಂದ ಹೊಸ ವಾದ ನಿರ್ಮಾಣವಾಗಿದೆ. ಹಿಂದೂ ಸಂಘಟನೆ ಮತ್ತು ಸ್ಥಳೀಯ ಜನರು ಈ ಸ್ಥಳದಲ್ಲಿ ಹಿಂದೆ ದೇವಸ್ಥಾನ ಇತ್ತು ಮತ್ತು ಅದರ ಸಂರಕ್ಷಣೆಯ ಆಶ್ವಾಸನೆ ನೀಡಿ ದರ್ಗಾದ ಜೊತೆಗೆ ಭೂಮಿಯ ವ್ಯವಹಾರ ಮಾಡಲಾಗಿತ್ತು; ಆದರೆ ದರ್ಗಾದ ವ್ಯವಸ್ಥಾಪಕ ಮಂಡಳಿಯು ಇಲ್ಲಿಯ ದೇವಸ್ಥಾನ ದ್ವಂಸ ಮಾಡಿ ಅಲ್ಲಿ ಹೋಗುವ ದಾರಿ ಕೂಡ ಮುಚ್ಚಿದರು.’ ಎಂದು ಆರೋಪಿಸಿದ್ದಾರೆ. (ಮುಸಲ್ಮಾನರ ಜೊತೆ ಭೂಮಿ ವ್ಯವಹಾರ ನಡೆಸಿ ಅವರ ಆಶ್ವಾಸನೆಯ ಬಗ್ಗೆ ವಿಶ್ವಾಸ ಇಡುವುದು ಇದು ಆತ್ಮಹತ್ಯೆದಂತೆಯೇ ಇದೆ. ಹಿಂದೂಗಳಿಗೆ ಇದು ಅರ್ಥ ಆಗುವ ದಿನವೇ ಸುದಿನ ! – ಸಂಪಾದಕರು)

ಇತ್ತೀಚಿಗೆ ದರ್ಗಾಹ-ಏ-ಹಕಿಮಿ ಮತ್ತು ಇಚ್ಛೇಶ್ವರ ಮಂದಿರ ಟ್ರಸ್ಟ್ ಇವರಲ್ಲಿನ ವಾದ  ಪರಿಹರಿಸಲು ಶಾಸಕೀ ಸುಮಿತ್ರಾ ಕಾಸದೆಕರ ಸಹಿತ ದೇವಸ್ಥಾನದ ಟ್ರಸ್ಟ್ ನ ಜನರು ಹೊಲದ ಹತ್ತಿರ ತಲುಪಿದರು. ಅವರಿಗೆ ಹೊಲದ ಪೊದೆಯಲ್ಲಿ ಹನುಮಂತನ ಮೂರ್ತಿ ಕಾಣಿಸಿತು. ಹನುಮಂತನ ಭಕ್ತರು ಹೊಲದ ಬೇಲಿಯ ಬಿಗ ಒಡೆದು ಶ್ರೀ ಹನುಮಂತನ ಪ್ರಾಚೀನ ಮೂರ್ತಿ ಹೊರ ತೆಗೆದರು. ಅಲ್ಲಿ ಅವರು ಹನುಮಂತನ ಮೂರ್ತಿಯ ಪೂಜೆ ಮಾಡಿದರು.