ನಾವು ಬರುತ್ತಿದ್ದೇವೆ !
ಇಸ್ಲಾಮಾಬಾದ (ಪಾಕಿಸ್ತಾನ) – ಕಳೆದ ಕೆಲವು ವಾರಗಳಿಂದ ಪಾಕಿಸ್ತಾನ ಮತ್ತು `ತೆಹರಿಕ-ಎ-ತಾಲಿಬಾನ ಪಾಕಿಸ್ತಾನ’ (ಟಿ.ಟಿ.ಪಿ) ಈ ಭಯೋತ್ಪಾದಕ ಸಂಘಟನೆಯೊಂದಿಗೆ ಶಸ್ತ್ರಾಸ್ತ್ರಸಹಿತ ಸಂಘರ್ಷ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಯಿಂದ ಒಂದು ವಿಡಿಯೋ ಪ್ರಸಾರ ಮಾಡಲಾಗಿದ್ದು, ಇದರಲ್ಲಿ ಪಾಕಿಸ್ತಾನದ ಸಂಸತ್ತು ಕಾಣಿಸುತ್ತಿದೆ. ಒಬ್ಬ ವ್ಯಕ್ತಿಯ ಕೈಯಲ್ಲಿ ಕಾಗದದ ತುಂಡು ಕಾಣಿಸುತ್ತಿದೆ. ಅದರ ಮೇಲೆ ಆಂಗ್ಲ ಮತ್ತು ಉರ್ದು ಭಾಷೆಯಲ್ಲಿ `ನಾವು ಬರುತ್ತಿದ್ದೇವೆ’, ಎಂದು ಸಂದೇಶ ಬರೆದಿದೆ. ಈ ಬಾರಿಯೂ ಈ ವ್ಯಕ್ತಿ ಪಾಕಿಸ್ತಾನ ಸಂಸತ್ತಿನೆಡೆಗೆ ತೋರಿಸುತ್ತಿದ್ದಾನೆ.
The short video, set to an ominous song, shows a man holding out a piece of paper with the threat message in Urdu and English with the country’s parliament in the background. #Pakistan #World #News https://t.co/PWvNHd7Uew
— IndiaToday (@IndiaToday) January 4, 2023
ಈ ವಿಡಿಯೋ ಇಸ್ಲಾಮಾಬಾದಿನ ಮಾರಗಲ್ಲಾ ಹಿಲ್ಸ ಮೇಲೆ ತಯಾರಿಸಲಾಗಿದೆ. ವಿಡಿಯೋದಲ್ಲಿ ವಿಡಿಯೋ ಸಿದ್ಧಪಡಿಸಿದ ವ್ಯಕ್ತಿಯ ಮುಖ ಕಾಣಿಸುತ್ತಿಲ್ಲ. ಪಾಕಿಸ್ತಾನದ `ಡಾನ್ ನ್ಯೂಸ’ ಜಾಲತಾಣವು `ಪೊಲೀಸರು ಈ ವಿಡಿಯೋ ತಯಾರಿಸಿರುವವನನ್ನು ಬಂಧಿಸಿದ್ದಾರೆ’, ಎಂದು ಹೇಳಿದೆ.
ಪಾಕಿಸ್ತಾನ ಖೈಬರ ಪಖ್ತೂನಖ್ವಾದಲ್ಲಿ ಟಿ.ಟಿ.ಪಿ.ಯ 7 ರಿಂದ 10 ಸಾವಿರ ಭಯೋತ್ಪಾದಕರು !
ಪಾಕಿಸ್ತಾನದ ಗೃಹಸಚಿವ ರಾಣಾ ಸನಾಉಲ್ಲಾಹ ಇವರು `ಡಾನ್’ ದಿನಪತ್ರಿಕೆಗೆ ನೀಡಿರುವ ಒಂದು ಸಂದರ್ಶನದಲ್ಲಿ ಅಫಘಾನಿಸ್ತಾನಕ್ಕೆ ತಾಗಿಕೊಂಡಿರುವ ಖೈಬರ ಪಖ್ತೂನಖ್ವಾ ಪ್ರಾಂತದಲ್ಲಿ ಟಿ.ಟಿ.ಪಿ.ಯ 7 ರಿಂದ 10 ಸಾವಿರ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ. ಇವರಲ್ಲಿ ಕೆಲವು ಭಯೋತ್ಪಾದಕರು ಟಿ.ಟಿ.ಪಿ.ಯ ಕೆಲಸವನ್ನು ಬಿಟ್ಟಿದ್ದರು; ಆದರೆ ಕಳೆದ ಕೆಲವು ದಿನಗಳಲ್ಲಿ ಅವರು ಪುನಃ ಸಕ್ರಿಯರಾಗಿದ್ದಾರೆ. ಈ ಭಯೋತ್ಪಾದಕರಿಗೆ ಅವರ 25 ಸಾವಿರ ಕುಟುಂಬದವರ ಸಹಕಾರವೂ ಸಿಗುತ್ತಿದೆ. ಹಾಗೆಯೇ ಕೆಲವು ಸ್ಥಳೀಯರೂ ಈ ಭಯೋತ್ಪಾದಕರ ಸಹಾಯದಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದರು.