`ಪಠಾಣ’ ಚಲನಚಿತ್ರದಲ್ಲಿನ ೧೦ ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ಸೆನ್ಸಾರ್ ಬೋರ್ಡಿನ ಆದೇಶ

ಹಿಂದೂಗಳ ವಿರೋಧಕ್ಕೆ ಯಶಸ್ಸು !

ನವ ದೆಹಲಿ – ಕೇಂದ್ರ ಚಲನಚಿತ್ರ ಪರಿಶೀಲನ ಮಂಡಳಿಯು (ಸೆನ್ಸಾರ್ ಬೋರ್ಡ್ ನಿಂದ ) `ಪಠಾಣ’ ಚಲನಚಿತ್ರದಲ್ಲಿನ ೧೦ ದೃಶ್ಯಗಳನ್ನು ಬದಲಾಯಿಸಲು ಆದೇಶಿಸಿದೆ. ಹಾಗೂ ಕೆಲವು ಸಂಭಾಷಣೆ ಕೂಡ ಬದಲಾಯಿಸಲು ಹೇಳಿದ್ದಾರೆ. ಈ ಚಲನಚಿತ್ರದಲ್ಲಿನ `ಬೇಶರಂ ರಂಗ’ ಈ ಹಾಡಿನ ಮೂಲಕ ಕೇಸರಿ ವಸ್ತ್ರಕ್ಕೆ ಅವಮಾನ ಮಾಡುವುದರ ಜೊತೆಗೆ ಅಶ್ಲೀಲತೆ ಪಸರಿಸಲಾಗುತ್ತಿದೆ ಎಂದು ದೂರು ನೀಡಿದ ನಂತರ ಬೋರ್ಡ ಈ ಬಗ್ಗೆ ಗಮನಹರಿಸಿ ಅದರಲ್ಲಿ ಬದಲಾವಣೆ ಮಾಡಲು ಹೇಳಿದ್ದಾರೆ. ಬರುವ ಜನವರಿ ೨೫ ರಂದು ಚಲನಚಿತ್ರ ಪ್ರದರ್ಶನಗೊಳ್ಳಲಿದೆ.