ದ್ವಾರಕಾ ಮತ್ತು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಂದ ಸ್ಥಾಪನೆ !
ನವದೆಹಲಿ – ಚಲನಚಿತ್ರ, ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನಗಳ ಮೂಲಕ ಆಗುತ್ತಿದ್ದ ಹಿಂದೂ ದೇವತೆಗಳ, ಧರ್ಮದ ಅಪಮಾನವನ್ನು ತಡೆಯಲು ಈಗ `ಧರ್ಮ ಸೆನ್ಸಾರ ಬೋರ್ಡ’ ಅನ್ನು ಸ್ಥಾಪಿಸಲಾಗಿದೆ. ದ್ವಾರಕಾ ಮತ್ತು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಇದನ್ನು ಸ್ಥಾಪಿಸಿದ್ದಾರೆ. ಈ ಬೋರ್ಡ ಚಲನಚಿತ್ರಗಳ ಧಾರ್ಮಿಕ ವಿಷಯಗಳ ಮೇಲೆ ಗಮನವಿಡುವುದು ಮತ್ತು ಅವುಗಳಿಗೆ ಅನುಮತಿ ನೀಡುವುದು.
Abhimukteswarananda Saraswati says about Bollywood – There should be a ‘Dharma Censor Board’ for scenes that hurt sentiments. https://t.co/bzK0fFetZE
— DEE NEWS (@DEENEWS_IN) January 4, 2023
೧. ಶಂಕರಾಚಾರ್ಯರು ಇವರು, ಕೆಲವು ಬೆರಳೆಣಿಕೆಯಷ್ಟು ಜನರು ವಿವಿಧ ಮಾಧ್ಯಮಗಳಿಂದ ಜಗತ್ತಿನಾದ್ಯಂತ ಕೋಟಿಗಟ್ಟಲೆ ವೀಕ್ಷಕರ ಮನೋರಂಜನೆ ಮಾಡುತ್ತಾರೆ; ಆದರೆ ಇದರಿಂದ ಸಂಸ್ಕೃತಿ, ಪರಂಪರೆ, ಧರ್ಮ ಮತ್ತು ಸಮಾಜದ ಸೂಜ್ಷ್ಮ ಅಂಶಗಳಿಗೆ ನೋವುಂಟು ಮಾಡುತ್ತಾರೆ. ಸಮಾಜದಲ್ಲಿ ದ್ವೇಷವನ್ನು ಹರಡುತ್ತಾರೆ; ಆದ್ದರಿಂದಲೇ ಜನರ ಒತ್ತಾಯದಿಂದ ನಾವು `ಧರ್ಮ ಸೆನ್ಸಾರ ಬೋರ್ಡ’ನ ಸ್ಥಾಪನೆ ಮಾಡಿದ್ದೇವೆ. ಯಾವ ಚಲನಚಿತ್ರ, ಮಾಲಿಕೆ ಮತ್ತು ವೆಬ್ ಸರಣಿಯಲ್ಲಿನ ದೃಶ್ಯಗಳು, ಸಂವಾದ, ಕಥೆ ಮುಂತಾದವುಗಳ ಮೇಲೆ ಗಮನವಿಡುವುದು. ಇದರಿಂದ ಸಮಾಜದಲ್ಲಿ ದ್ವೇಷ ಹರಡುವ ವಿಷಯ ಕೋಟಿಗಟ್ಟಲೆ ಜನರ ವರೆಗೆ ತಲುಪುವುದಿಲ್ಲ, ಎಂದು ಹೇಳಿದರು.
೨. ಈ ಕುರಿತು `ಉತ್ತರಪ್ರದೇಶ ಫಿಲ್ಮ ಡೆವಲಪಮೆಂಟ ಕೌನ್ಸಿಲ್’ ನ ಉಪಾಧ್ಯಕ್ಷ ತರುಣ ರಾಠಿಯವರು, ಯಾವುದೇ ಚಲನಚಿತ್ರ ಪ್ರದರ್ಶನಗೊಳ್ಳುವ ಮೊದಲು` ಧರ್ಮ ಸೆನ್ಸಾರ ಬೋರ್ಡ್’ ಅದರಲ್ಲಿರುವ ಧಾರ್ಮಿಕ ವಿಷಯಗಳನ್ನು ನೋಡುವುದು ಮತ್ತು ತದನಂತರವೇ ಇಂತಹ ಚಲನಚಿತ್ರಗಳಿಗೆ ಅನುಮತಿಯನ್ನು ನೀಡುವಅಧಿಕಾರ ಈ ಬೋರ್ಡಗೆ ಇದೆ. ಚಲನಚಿತ್ರವನ್ನು ತಯಾರಿಸಿದ ಬಳಿಕ ಒಂದು ವೇಳೆ ಅದರಲ್ಲಿ ಧಾರ್ಮಿಕ ಭಾವನೆಯನ್ನು ನೋಯಿಸಿರುವುದು ಕಂಡು ಬಂದರೆ, ಆ ಚಲನಚಿತ್ರದ ನಿರ್ಮಾಪಕರು ಚಲನಚಿತ್ರದಲ್ಲಿ ಬದಲಾವಣೆ ಮಾಡಬೇಕಾಗುವುದು. ಒಂದು ವೇಳೆ ಕೋಟಿಗಟ್ಟಲೆ ಖರ್ಚು ಮಾಡಿ ಚಲನಚಿತ್ರ ನಿರ್ಮಾಣವಾದ ಬಳಿಕ ಬದಲಾವಣೆ ಮಾಡಬೇಕಾಗಿದ್ದರೆ, ಇದರಿಂದ ನಿರ್ಮಾಪಕರ ಹಾನಿಯೇ ಆಗುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|