ಝಾರಖಂಡ ಪೊಲೀಸರೊಂದಿಗಿನ ಹೊಂದಾಣಿಕೆಯಿಂದ ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಾಣಿಕೆ ! – ಭಾಜಪ ಶಾಸಕ ನಿಶಿಕಾಂತ ದುಬೆ ಇವರ ಆರೋಪ

ಭಾಜಪ ಶಾಸಕ ನಿಶಿಕಾಂತ ದುಬೆ

ರಾಂಚಿ(ಝಾರಖಂಡ)- ಝಾರಖಂಡ ರಾಜ್ಯದ ಕೆಲವು ಪಶುಮಾರಾಟ ಮಾರುಕಟ್ಟೆಗಳು ಕಸಾಯಿಖಾನೆಗಾಗಿ ಪಶುಗಳನ್ನು ಖರೀದಿಸುತ್ತವೆ. ಅಲ್ಲಿಂದ ಕಳ್ಳಸಾಗಾಣಿಕೆಗಾಗಿಯೂ ಪಶುಗಳನ್ನು ದೊಡ್ಡ ಸಂಖ್ಯೆಯಲ್ಲಿ ಖರೀದಿಸಲಾಗುತ್ತದೆ. ವಿಶೇಷವಾಗಿ ಹಸುಗಳನ್ನು ಖರೀದಿಸಿ ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಇದರಲ್ಲಿ ಪೊಲೀಸರ ‘ಅರ್ಥ’ ಪೂರ್ಣ ಸಹಾಯವಿರುತ್ತದೆ ಎಂದು ಭಾಜಪ ಶಾಸಕ ನಿಶಿಕಾಂತ ದುಬೆಯವರು ಆರೋಪಿಸಿದ್ದಾರೆ.

೧. ಝಾರಖಂಡನ ಮೋಹನಪುರ, ಹಿರಣಪುರ ಮತ್ತು ದುಮಕಾ ಈ ಮಾರುಕಟ್ಟೆಯಲ್ಲಿ ಪ್ರತಿವಾರ ೨೫ ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಇಲ್ಲಿಂದ ಪಶು ಕಳ್ಳಸಾಗಾಣಿಕೆದಾರರು ಗೋವಂಶವನ್ನು ಖರೀದಿಸಿ ಆಸ್ಸಾಂನಿಂದ ನದಿ ಮಾರ್ಗದ ಮೂಲಕ ಅನಧಿಕೃತವಾಗಿ ಹಸುಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತಾರೆ. ಇಲ್ಲಿ ಅವರು ಹಸುಗಳನ್ನು ಬಾಳೆಗಿಡದ ಕಂಬಕ್ಕೆ ಕೇವಲ ಅವುಗಳ ಮೂಗು ಮೇಲೆ ಇರುವಂತೆ ಮಾಡಿ ಕಟ್ಟಲಾಗುತ್ತದೆ. ಮೇಲಿನ ಭಾಗದಿಂದ ಹಸುವಿನ ಯಾವುದೇ ಅವಯವ ಕಾಣಿಸದಂತೆ ಎಚ್ಚರಿಕೆಯನ್ನು ವಹಿಸುತ್ತಾರೆ. ಬಾಂಗ್ಲಾದೇಶಕ್ಕೆ ೨ ಹಸುವನ್ನು ಕಳುಹಿಸಲು ೫೨ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತದೆ. ಕಳ್ಳ ಸಾಗಾಣಿಕೆದಾರರು ಗಡಿರೇಖೆಯಿಂದ ಅರ್ಧ ಕಿಲೋಮೀಟರ ಈ ಬದಿಗೆ ತಮ್ಮ ಡೇರೆ ನಿರ್ಮಿಸಿದ್ದಾರೆ. ಈ ಕಳ್ಳಸಾಗಾಣಿಕೆಯ ವಿಷಯದ ಬಗ್ಗೆ ಭಾಜಪ ಶಾಸಕಿ ಮೇನಕಾ ಗಾಂಧಿಯವರು ಈ ಹಿಂದೆಯೇ ಚಿಂತೆಯನ್ನು ವ್ಯಕ್ತಪಡಿಸಿ ಪೊಲೀಸರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು.

೨. ಭಾಜಪ ಶಾಸಕ ನಿಶಿಕಾಂತ ದುಬೆಯವರು ಒಂದು ವ್ಹಿಡಿಯೋ ಪ್ರಸಾರ ಮಾಡಿದ್ದು, ಅದರಲ್ಲಿ ಗೋಕಳ್ಳಸಾಗಾಣಿಕೆದಾರರು ಹಸುಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತಿರುವುದು ಕಾಣಿಸುತ್ತಿದೆ. ಅಲ್ಲದೇ ದುಬೆಯವರು ೧೦ ಸಾವಿರ ಹಸುಗಳನ್ನು ಗೋಕಳ್ಳಸಾಗಾಣಿಕೆದಾರರ ವಶದಿಂದ ಮುಕ್ತಗೊಳಿಸಿರುವುದಾಗಿ ಹೇಳಿದ್ದಾರೆ. ಮೊಯಿನುದ್ದೀನ ಮತ್ತು ಅಲಿ ಅನ್ಸಾರಿ ಈ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ವಿಷಯವನ್ನು ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿ ಗೋವುಗಳ ಕಳ್ಳಸಾಗಾಣಿಕೆಯನ್ನು ನಿಲ್ಲಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ.