ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಆಗ್ರಹಿಸಿ ನಾಗಪುರದಲ್ಲಿ ಮೆರವಣಿಗೆ !

`ಹಿಂದೂ ಧರ್ಮ ಜಾಗರಣ ಸಮಿತಿ’ಯ ಶ್ಲಾಘನೀಯ ಪ್ರಯತ್ನ !

ನಾಗಪುರ – ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ, ಎಂದು ಆಗ್ರಹಿಸಿ ಇಲ್ಲಿ `ಹಿಂದೂ ಜಾಗರಣ ಸಮಿತಿ’ಯಿಂದ ಜನವರಿ ೧ ರಂದು ಮೆರವಣಿಗೆ ನಡೆಸಲಾಯಿತು. ಇದರಲ್ಲಿ ಅನೇಕ ಧರ್ಮ ಪ್ರೇಮಿಗಳು ಸಹಭಾಗಿ ಆಗಿದ್ದರು. ಆ ಸಮಯದಲ್ಲಿ ಅವರು ಉತ್ಸಾಹದಿಂದ ಘೋಷಣೆ ಕೂಗಿದರು ಹಾಗೂ ಹನುಮಾನ ಚಾಲಿಸಾದ ಪಠಣೆ ಮಾಡಿದರು.

ಓರ್ವ ಕಾರ್ಯಕರ್ತನು, “ಭಾರತ ಇದು ಹಿಂದೂ ಧರ್ಮದವರ ದೇಶವಾಗಿದೆ. ಈ ದೇಶದಲ್ಲಿ ೧೦೦ ಕೋಟಿ ಹಿಂದೂಗಳು ವಾಸಿಸುತ್ತಾರೆ. ಆದರೂ ಕೂಡ ಭಾರತ ಹಿಂದೂ ರಾಷ್ಟ್ರ ಇಲ್ಲ. ಎಲ್ಲಿ ಮುಸಲ್ಮಾನರು ಅಥವಾ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ, ಆ ದೇಶವನ್ನು ಇಸ್ಲಾಮಿಕ ದೇಶ ಎಂದು ಘೋಷಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸುತ್ತಿದ್ದರೂ ಕೂಡ ಇದನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಾಗುತ್ತಿಲ್ಲ ? ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು.” ಎಂದು ಹೇಳಿದರು.