#DelhiaHorror ದೆಹಲಿಯಲ್ಲಿ ಕಾರು ಸ್ಕೂಟಿಗೆ ಗುದ್ದಿ ಯುವತಿಗೆ ೧೨ ಕಿಲೋಮೀಟರ್ ದೂರದ ವರೆಗೆ ಎಳೆದು ಕೊಂಡು ಹೋದ ಸವಾರ

೫ ಆರೋಪಿಗಳಿಗೆ ೩ ದಿನಗಳ ಪೊಲೀಸ್ ಕಸ್ಟಡಿ

ನವ ದೆಹಲಿ – ಇಲ್ಲಿಯ ಕಾಂಝಾವಾಲಾ ಪ್ರದೇಶದಲ್ಲಿ ಡಿಸೆಂಬರ್ ೩೧ ರ ರಾತ್ರಿ ಒಂದು ಚತುಶ್ಚಕ್ರ ವಾಹನವು ದ್ವಿಚಕ್ರ ವಾಹನಕ್ಕೆ ಗುದ್ದಿತು. ಈ ದ್ವಿಚಕ್ರ ವಾಹನದಿಂದ ಯುವತಿ ವಾಹನದ ಅಡಿಗೆ ಸಿಲುಕಿದಳು ಮತ್ತು ಆಕೆಯನ್ನು ಹಾಗೆ ೧೨ ಕಿಲೋಮೀಟರ್ ದೂರದ ವರೆಗೆ ಎಳೆದು ಕೊಂಡು ಹೋದರು. ಈ ಅಪಘಾತದಲ್ಲಿ ಆಕೆಯು ಸಾವನ್ನಪ್ಪಿದಳು. ಪೊಲೀಸರು ಈ ಪ್ರಕರಣದಲ್ಲಿ ವಾಹನದಲ್ಲಿದ್ದ ೫ ಜನರನ್ನು ಬಂಧಿಸಿದ್ದು ಅವರನ್ನು ೩ ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದು ಅಪಘಾತವೆಂದು ಪೊಲೀಸರ ಪ್ರಾರ್ಥಮಿಕ ವಿಚಾರಣೆಯಲ್ಲಿ ಹೇಳುತ್ತಾ ತಪ್ಪಿತಸ್ಥರ ಮನುಷ್ಯ ವಧೆಯ ದೂರು ದಾಖಲಿಸಲಾಗಿದೆ; ಆದರೆ ಯುವತಿಯ ಸಂಬಂಧಿಕರು ಇದು ಉದ್ದೇಶಪೂರ್ವಕ ಮಾಡಿರುವ ಹತ್ಯೆ ಎಂದು ಹೇಳುತ್ತಾ `ಹುಡುಗಿಯ ಮೇಲೆ ಅಧಿಕಪ್ರಸಂಗ ಆಗಿದೆಯೇ ?’, ಇದನ್ನು ಕೂಡ ಹುಡುಕಲು ಹೇಳಿದ್ದಾರೆ. `ಆರೋಪಿ ದೀಪಕ ಖನ್ನಾ, ಅಮಿತ್ ಖನ್ನಾ, ಮಿಥುನ್, ಕೃಷ್ಣ ಮತ್ತು ಮನೋಜ ಮಿತ್ತಲ್ ಇವರು ನಶೆಯಲ್ಲಿ ಇದ್ದರೋ ಅಥವಾ ಇಲ್ಲವೋ ? ಇದನ್ನು ಕೂಡ ಪರೀಕ್ಷಿಸುವುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ.

೧. ಈ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಇವರು, ಈ ಪ್ರಕರಣ ಬಹಳ ಅಪಾಯಕಾರಿಯಾಗಿದೆ. ನಾನು ದೆಹಲಿ ಪೋಲಿಸರಿಗೆ ಆಯೋಗದ ಎದುರು ಹಾಜರ ಇರಲು ನೋಟಿಸ್ ಜಾರಿ ಮಾಡಿದ್ದೇನೆ. ಸಂಪೂರ್ಣ ಸತ್ಯ ಬೆಳಕಿಗೆ ಬರಬೇಕು, ಎಂದು ಹೇಳಿದರು.

೨. ಪೊಲೀಸ್ ಉಪಾಯುಕ್ತ ಹರೇಂದ್ರ ಸಿಂಹ ಇವರು, ಈ ಪ್ರಕರಣ ಅಪಘಾತವೇ ಆಗಿದೆ. ಅಪಘಾತದಿಂದ ಯುವತಿಯ ಶರೀರಕ್ಕೆ ಗಾಯಗಳಾಗಿವೆ. ರಕ್ತಸ್ರಾವವಾಗಿದೆ. ಇದು ಲೈಂಗಿಕ ಅತ್ಯಾಚಾರ ಅಥವಾ ಕೊಲೆ ಆಗಿರುವ ವಾರ್ತೆ ಪ್ರಸಾರ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಸಂಪೂರ್ಣವಾಗಿ ತಪ್ಪಾಗಿದೆ. ಎಂದು ಹೇಳಿದರು.

ಪೊಲೀಸರಿಗೆ ಅಪಘಾತದ ಮಾಹಿತಿ ನೀಡಿದರೂ ಕೂಡ ಕ್ರಮ ಕೈಗೊಂಡಿಲ್ಲ ! – ಪ್ರತ್ಯಕ್ಷದರ್ಶಿಯ ಆರೋಪ

ಪೊಲೀಸರ ವಾಯರ್ ಲೆಸ್ ಸಂದೇಶವಾಹನ ಇರುವ ವಾಹನದಲ್ಲಿನ ಪೊಲೀಸರಿಗೆ ಅಪಘಾತದ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ಪ್ರತ್ಯಕ್ಷದರ್ಶಿ ದೀಪಕ ಇವರು ಆರೋಪಿಸಿದ್ದಾರೆ. `ನಾನು ಬೆಳಿಗ್ಗೆ ೩.೧೫ ಗಂಟೆಗೆ ಹಾಲು ವಿತರಿಸುವುದಕ್ಕಾಗಿ ಹೋಗುತ್ತಿದ್ದೆ. ಆಗ ನಾನು ಚತುಶ್ಚಕ್ರ ವಾಹನದಲ್ಲಿ ಮಹಿಳೆಯನ್ನು ಎಳೆದುಕೊಂಡು ಹೋಗುವುದನ್ನು ನೋಡಿದೆ. ನಾನು ಬೇಗಮಪುರವರೆಗೆ ವಾಹನ ಹಿಂಬಾಲಿಸಿ ಹೋದೆ. ನಾನು ಪೋಲೀಸರಿಗೆ ದೂರವಾಣಿ ಕರೆ ಮಾಡಿದ ನಂತರ ಬೆಳಿಗ್ಗೆ ೫ ಗಂಟೆಯವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ,’ ಎಂದು ಹೇಳಿದರು. (ಈ ವಿಷಯವಾಗಿ ಆಳವಾಗಿ ವಿಚಾರಣೆ ನಡೆಸಿ ಅದರಲ್ಲಿ ಸತ್ಯವಿದ್ದರೆ, ಸಂಬಂಧಿಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಪೊಲೀಸರು ಇದನ್ನು ಅಪಘಾತ ಎಂದು ಹೇಳುತ್ತಿದ್ದರೇ, ಯುವತಿಯ ಸಂಬಂಧಿಕರು ಇದು ಹತ್ಯೆ ಎಂದು ಆರೋಪಿಸಿದ್ದಾರೆ !