೨೦೨೨ ರಲ್ಲಿ ಕಾಶ್ಮೀರದಲ್ಲಿ ೧೭೨ ಉಗ್ರರು ಹತ !

  • ೨೬ ಸೈನಿಕರು ವೀರ ಮರಣ

  • ಉಗ್ರರ ದಾಳಿಯಲ್ಲಿ ೨೯ ನಾಗರಿಕರ ಸಾವು

ಶ್ರೀನಗರ (ಜಮ್ಮು-ಕಾಶ್ಮೀರ) – ಭದ್ರತಾ ಪಡೆಯು ೨೦೨೨ ರಲ್ಲಿ ವಿದೇಶದಲ್ಲಿನ ೪೨ ಉಗ್ರರ ಸಹಿತ ೧೭೨ ಉಗ್ರರನ್ನು ಮುಗಿಸಿದೆ. ಇದರ ಜೊತೆಗೆ ಭಾರತದ ೨೬ ಸೈನಿಕರು ವೀರ ಮರಣವನ್ನು ಹೊಂದಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರಾದ ವಿಜಯಕುಮಾರ ಇವರು ಈ ಮಾಹಿತಿ ನೀಡಿದರು. ಹತರಾಗಿರುವವರಲ್ಲಿ `ಟಿಆರ್.ಎಫ್’ ಮತ್ತು `ಲಷ್ಕರೆ-ಏ-ತೊಯ್ಬಾ’ದ ೩೫ ಉಗ್ರರು, `ಜೈಷ-ಎ-ಮಹಮ್ಮದ್’ನ ೩೨ ಹಾಗೂ `ಹಿಜಬುಲ್ ಮುಜಾಹಿದ್ದಿನ’ನ ೩೨ ಉಗ್ರರು ಹತರಾಗಿದ್ದಾರೆ. ಅವರಿಂದ ೩೬೦ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದೆ.

೧. ೨೦೨೨ ರಲ್ಲಿ ರಸ್ತೆಯಲ್ಲಿನ ಹಿಂಸಾಚಾರ, ಕಲ್ಲು ತೂರಾಟ, ಇಂಟರ್ನೆಟ್ ಬಂದಾಗಿರುವ ಪ್ರಮಾಣ ಇದರಲ್ಲಿ ಯಾವುದೇ ಘಟನೆ ಕಾಶ್ಮೀರದಲ್ಲಿ ನಡೆದಿಲ್ಲ.

೨. ೨೦೨೨ ರಲ್ಲಿ ವಿವಿಧ ಸಂಘಟನೆಗಳಲ್ಲಿ ೬೫ ಹೊಸ ಉಗ್ರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿನ ೫೮ ಉಗ್ರರನ್ನು ಕೊಲ್ಲಲಾಗಿದೆ.

೩. ಉಗ್ರರ ಗುಂಡಿನ ದಾಳಿಯಲ್ಲಿ ೨೯ ನಾಗರೀಕರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ೨೧ ಜನರು ಸ್ಥಳೀಯರಾಗಿದ್ದು ಅದರಲ್ಲಿ ೬ ಜನರು ಹಿಂದೂ ಮತ್ತು ೧೫ ಜನರು ಮುಸಲ್ಮಾನರಿದ್ದರು. ೮ ಜನರು ಹೊರ ರಾಜ್ಯಗಳಿಂದ ಕಾಶ್ಮೀರಕ್ಕೆ ಬಂದಿದ್ದರು.

೪. ೨೦೧೬ ರಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಘಟನೆಯ ೨ ಸಾವಿರ ೮೯೭ ಪ್ರಕರಣಗಳಲ್ಲಿ ೨೦೨೨ ರಲ್ಲಿ ಈ ಸಂಖ್ಯೆ ೨೬ ಕ್ಕೇ ಇಳಿದಿದೆ. ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಸಹಭಾಗಿ ಇರುವ ೧ ಸಾವಿರದ ೫೬೦ ಜನರನ್ನು ಬಂಧಿಸಲಾಗಿದೆ. ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ೧೧.೮ ಕೇಜಿ ಬ್ರೌನ್ ಶುಗರ್, ೪೬ ಕೇಜಿ ಹೇರಾಯಿನ್ ಮತ್ತು ೨೦೦ ಕೇಜಿ ಚರಸ್ ವಶಪಡಿಸಿಕೊಂಡಿದೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಪ್ರತಿವರ್ಷ ೧೦೦ ಕ್ಕೂ ಹೆಚ್ಚಿನ ಉಗ್ರರು ಹತರಾಗುತ್ತಿದ್ದರೂ ಪಾಕಿಸ್ತಾನದಲ್ಲಿ ಅದರ ನಿರ್ಮಿತಿ ನಡೆಯುತ್ತಲೇ ಇದ್ದರಿಂದ ಕಾಶ್ಮೀರದಲ್ಲಿನ ಭಯೋತ್ಪಾದನೆ ನಾಶವಾಗುತ್ತಿಲ್ಲ. ಆದ್ದರಿಂದ ಅದನ್ನು ಬೇರು ಸಹಿತ ನಾಶ ಮಾಡುವುದಕ್ಕಾಗಿ ಪಾಕಿಸ್ತಾನವನ್ನು ನಾಶಗೊಳಿಸುವುದು ಅವಶ್ಯಕವಾಗಿದೆ !