ಗುರುಗೋವಿಂದ ಸಿಂಗ್ ಇವರ ಕ್ಷಾತ್ರವೃತ್ತಿ !

೫ ಜನವರಿ ೨೦೨೨ ರಂದು ಇರುವ ಗುರುಗೋವಿಂದ ಸಿಂಗ್ ಇವರ ಜಯಂತಿ ನಿಮಿತ್ತ …

ಗುರುಗೋವಿಂದ ಸಿಂಗ್

೧. ಇಬ್ಬರು ಮುಸಲ್ಮಾನ ಸಹೋದರರು ಗುರುಗೋವಿಂದ ಸಿಂಗ್‌ರ ವಿಶ್ವಾಸ ಸಂಪಾದಿಸುವುದು

ಆ ದಿನ ‘ಗುರುಗೋವಿಂದ ಸಿಂಗ್‌’ರು ಎಂದಿನಂತೆ ಪ್ರವಚನವನ್ನು ಮಾಡಲು ಕುಳಿತರು. ಅವರ ಪ್ರವಚನಕ್ಕೆ ಗುಲಖಾನ್ ಮತ್ತು ಅಬ್ದುಲ್ಲಾಖಾನ್ ಎನ್ನುವ ಇಬ್ಬರು ಸಹೋದರರು ಕೂಡ ಬಂದರು. ಅವರು ಕೆಲವು ದಿನಗಳ ವರೆಗೆ ನಿಯಮಿತವಾಗಿ ಇವರ ಪ್ರವಚನಕ್ಕೆ ತಪ್ಪದೆ ಬರುತ್ತಿದ್ದರು. ಅವರಿಬ್ಬರು ಮನಃಪೂರ್ವಕವಾಗಿ ಪ್ರವಚನ ಕೇಳುತ್ತಿದ್ದರು. ಅವರು ಗುರುಗೋವಿಂದ ಸಿಂಗ್ ಮತ್ತು ಉಳಿದ ಎಲ್ಲರೊಂದಿಗೆ ವಿಶ್ವಾಸವನ್ನು ಸಂಪಾದಿಸಿದ್ದರು. ಗುರುಗಳು ಅವರಿಗೆ ಪ್ರಸಾದವನ್ನು ಕೂಡ ಕೊಡುತ್ತಿದ್ದರು. ಆ ಪ್ರಸಾದವನ್ನು ಆ ಪಠಾಣ ಸಹೋದರರು ಭಕ್ತಿಭಾವದಿಂದ ಸೇವಿಸುತ್ತಿದ್ದರು.

೨. ವಿಶ್ವಾಸಘಾತ ಮಾಡಿದ ಖಾನ್ ಸಹೋದರರು

ಒಂದು ದಿನ ಗುಲಖಾನ್ ಮತ್ತು ಅಬ್ದುಲ್ಲಾಖಾನ್ ಇಬ್ಬರೂ ಗುರುಗೋವಿಂದ ಸಿಂಗ್‌ರ ಡೇರೆಯಿದ್ದಲ್ಲಿಗೆ ಬಂದರು. ಅಬ್ದುಲ್ಲಾಖಾನ್ ಹೊರಗೆ ನಿಂತನು ಮತ್ತು ಗುಲಖಾನ್ ಡೇರೆಯ ಒಳಗೆ ಬಂದನು. ಅವನು ವಿಶ್ರಾಂತಿ ಪಡೆಯುತ್ತಿದ್ದ ಗುರು ಗೋವಿಂದಸಿಂಗ್‌ರ ಶರೀರವನ್ನು ಹರಿತವಾದ ಖಂಜರಿನಿಂದ ಇರಿದನು. ಅಷ್ಟು ದೊಡ್ಡ ಆಘಾತವಾಗಿದ್ದರೂ ಗುರುಗೋವಿಂದ ಸಿಂಗ್‌ರು ತಮ್ಮ ಶರೀರದಲ್ಲಿದ್ದ ಖಂಜಿರವನ್ನು ಎಳೆದು ಅದೇ ಖಂಜಿರದಿಂದ ತಮ್ಮ ಮೇಲೆ ದಾಳಿ ಮಾಡಿದ ಗುಲಖಾನನ ಶರೀರವನ್ನು ಇರಿದರು. ನಂತರ ತಮ್ಮಲ್ಲಿದ್ದ ಖಡ್ಗದಿಂದ ಅವನ ರುಂಡವನ್ನು ಹಾರಿಸಿದರು. ಈ ಘರ್ಷಣೆ ನಡೆಯುವಾಗ ಅವರ ಶಿಷ್ಯರು ಅಲ್ಲಿಗೆ ಧಾವಿಸಿ ಬಂದರು. ಗುರುಗೋವಿಂದ ಸಿಂಗ್‌ರು ಡೇರೆಯ ಹೊರಗೆ ಬಂದು ಅಲ್ಲಿ ನಿಂತಿದ್ದ ಅಬ್ದುಲ್ಲಾಖಾನನ ವಧೆ ಮಾಡಿದರು.

೩. ಮಾರಣಾಂತಿಕ ಹಲ್ಲೆಯ ನಂತರ ನಾಲ್ಕನೆ ದಿನವೆ ಪ್ರವಚನಕ್ಕೆ ಬರುತ್ತಾರೆ

ಅವರ ಮೇಲಾದ ಈ ಮಾರಣಾಂತಿಕ ಆಕ್ರಮಣದಿಂದ ಗುರುಗೋವಿಂದ ಸಿಂಗ್‌ರವರು ಪಾರಾದರು. ಅವರ ಶರೀರದ ಮೇಲೆ ದೊಡ್ಡ ಗಾಯವಾಗಿತ್ತು. ಓರ್ವ ಆಂಗ್ಲ ಶಸ್ತ್ರಚಿಕಿತ್ಸಕರು ಅವರ ಗಾಯವನ್ನು ಹೊಲಿದು ಉಪಚಾರ ಮಾಡಿದರು. ನಾಲ್ಕನೆ ದಿನವೇ ಅವರು ಪ್ರವಚನದ ಸ್ಥಳಕ್ಕೆ ಬಂದರು.

(ಆಧಾರ : ‘ಧರ್ಮಭಾಸ್ಕರ’, ಫೆಬ್ರವರಿ ೨೦೧೪)