ಬಲಾತ್ಕಾರದ ಪ್ರಕರಣದಲ್ಲಿ ಪಾದ್ರಿ ರಾಜು ಕೊಕ್ಕೇನನಿಗೆ ೭ ವರ್ಷಗಳ ಶಿಕ್ಷೆ !

೯ ವರ್ಷಗಳನಂತರ ಶಿಕ್ಷೆ ವಿಧಿಸಿದ ಕೇರಳದ ‘ಪೋಕ್ಸೋ’ ನ್ಯಾಯಾಲಯ !

ಪಾದ್ರಿ ರಾಜು ಕೊಕ್ಕೇನ

ತಿರುವನಂತಪುರಮ್ – ಕೇರಳದ ತ್ರಿಶುರ ಸಮೀಪದ ಸೈಂಟ್ ಪಾಲ್ ಚರ್ಚ್‌ನಲ್ಲಿನ ೪೦ ವರ್ಷದ ಪಾದ್ರಿ ರಾಜು ಕೊಕ್ಕೇನ ೯ ವರ್ಷದ ಹುಡುಗಿಗೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಕೇರಳದಲ್ಲಿನ ‘ಪೋಕ್ಸೋ’ (ಪ್ರೊಟೆಕ್ಶನ್ ಆಫ್ ಚಿಲ್ಡ್ರನ್ ಫ್ರಾಮ್ ಸೆಕ್ಯ್ಶುವಲ್ ಆಫೆನ್ಸ್) ನ್ಯಾಯಾಲಯವು ಪಾದ್ರಿ ರಾಜು ಕೊಕ್ಕೇನನಿಗೆ ೯ ವರ್ಷಗಳ ನಂತರ ಇತ್ತೀಚೆಗೆ ಕೇವಲ ೭ ವರ್ಷಗಳ ಕಠಿಣ ಶಿಕ್ಷೆ ಹಾಗೂ ೫೦ ಸಾವಿರ ರೂಪಾಯಿ ದಂಡದ ಶಿಕ್ಷೆಯನ್ನು ವಿಧಿಸಿತು.

೧. ಸಂತ್ರಸ್ತೆಯು ಪಾದ್ರಿ ಎಂದು ಕೊಕ್ಕೇನನು ಕರ್ಯನಿರ್ವಹಿಸುತ್ತಿದ್ದ ಚರ್ಚ್‌ನಲ್ಲಿನ ‘ಹೋಲೀ ಕಮ್ಯುನಿಯನ್’ (ಚರ್ಚ್‌ನಲ್ಲಿ ಪವಿತ್ರ ವಿಚಾರಗಳ ಕೊಡು-ಕೊಳ್ಳುವಿಕೆ) ತರಗತಿಯಲ್ಲಿ ಭಾಗವಹಿಸಿದ್ದಳು.

೨. ಪಾದ್ರಿಯು ಬಡ ಕುಟುಂಬದಲ್ಲಿನ ಈ ಹುಡುಗಿಗೆ ಬಟ್ಟೆಗಳನ್ನು ಕೊಡುವ ಆಸೆ ತೋರಿಸಿ ಕೋಣೆಗೆ ಕರೆದುಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ಮಾಡಿದನು. ಪಾದ್ರಿ ತನ್ನ ಸಂಚಾರಿವಾಣಿಯಲ್ಲಿ ಹುಡುಗಿಯ ನಗ್ನ ಚಿತ್ರಗಳನ್ನು ತೆಗೆದಿದ್ದನು. ಅದನ್ನು ಸಮಾಜದಲ್ಲಿ ಪ್ರಸಾರ ಮಾಡುವೆನೆಂದು ಗದರಿಸುತ್ತಾ ಪಾದ್ರಿ ಅವಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು.

೩. ನ್ಯಾಯಾಧೀಶ ಬಿಂದೂ ಸುಧಾಕರನ್ ಇವರು ಕೊಕ್ಕೇನನಿಗೆ ಶಿಕ್ಷೆಯನ್ನು ವಿಧಿಸಿದರು. ‘ದಂಡದ ಮೊತ್ತವನ್ನು ಸಂತ್ರಸ್ತ ಹುಡುಗಿಗೆ ಕೊಡಬೇಕು. ದಂಡವನ್ನು ತುಂಬಿಸದಿದ್ದರೆ ೫ ತಿಂಗಳು ಹೆಚ್ಚುವರಿ ಸೆರೆಮನೆವಾಸವನ್ನು ಭೋಗಿಸಬೇಕಾಗುವುದು’, ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸಂಪಾದಕೀಯ ನಿಲುವು

  • ಬಲಾತ್ಕಾರಕ್ಕೀಡಾದ ಹುಡುಗಿಗೆ ೯ ವರ್ಷಗಳನಂತರ ಸಿಕ್ಕಿದ ನ್ಯಾಯವು ಅನ್ಯಾಯವಲ್ಲವೆ ?
  • ಯಾವಾಗಲೂ ಹಿಂದೂ ಸಂತರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಅವಮಾನಗೊಳಿಸುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ಕಾಮುಕ ರೂಪವನ್ನು ಸಮಾಜದ ಮುಂದೆತರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು