ಅಮೇರಿಕಾದಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತ ಮುಂಚೂಣಿಯಲ್ಲಿ !

ಇಸ್ಲಾಮಾಬಾದ – ಅಮೇರಿಕಾದ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತದ ಗುಂಪು ಮುಂಚೂಣಿಯಲ್ಲಿವೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದಿ ಡಾನ್’ ಸುದ್ದಿಯನುಸಾರ ಈ ಕಟ್ಟಡಕ್ಕಾಗಿ ಅತ್ಯಧಿಕ ಬೋಣಿಗೆಯನ್ನು ಇಸ್ರೈಲ್ ಗುಂಪು ಹಾಕಿದ್ದು, ತದನಂತರ ಭಾರತದ ಸ್ಥಾನವಿದೆ. ವಿಶೇಷವೆಂದರೆ ಪಾಕಿಸ್ತಾನದ `ರಿಯಲ್ ಎಸ್ಟೇಟ’ ಗುಂಪು ಮೂರನೇ ಸ್ಥಾನದಲ್ಲಿದೆ.

೧. ಇಸ್ರಾಯಿಲ್ ಸಮೂಹವು ಪಾಕಿಸ್ತಾನಿ ರಾಯಭಾರಿ ಕಚೇರಿಗೆ 54 ಕೋಟಿ 40 ಲಕ್ಷ ರೂಪಾಯಿಗಳ ಬೋಣಿಗೆ ಹಾಕಿದರೆ, ಭಾರತದ ಗುಂಪು 40 ಕೋಟಿ ರೂಪಾಯಿಗಳ ಬೋಣಿಗೆ ಹಾಕಿದೆ. 32 ಕೋಟಿ ರೂಪಾಯಿಗಳ ಬೋಣಿಗೆಯನ್ನು ಹಾಕಿರುವ ಪಾಕಿಸ್ತಾನಿ ಗುಂಪು ಮೂರನೇ ಸ್ಥಾನದಲ್ಲಿದೆ. ಈ ಕಚೇರಿಯಲ್ಲಿ ಒಂದು ಕಾಲದಲ್ಲಿ ಅಮೇರಿಕಾದ ರಕ್ಷಣಾ ವಿಭಾಗದ ಕಾರ್ಯಾಲಯವಿತ್ತು.

೨. ಈ ಕಚೇರಿಯ ರಾಜಕೀಯ ಶಾಶ್ವತ ಸ್ಥಿತಿ 2018 ರಲ್ಲಿ ಮುಕ್ತಾಯಗೊಂಡಿದೆ. ಆರ್ಥಿಕ ಸಂಕಟವನ್ನು ಎದುರಿಸುತ್ತಿರುವ ಪಾಕಿಸ್ತಾನವು ಈ ರಾಯಭಾರ ಕಚೇರಿಯನ್ನು ಮಾರಾಟ ಮಾಡುವ ನಿರ್ಧರಿಸುವುದು ತಿಳಿಯಲಾಗುತ್ತಿದೆ.

೩. ರಾಯಭಾರ ಕಚೇರಿಯ ಅಧಿಕಾರಿಗಳು, ಈ ಕಟ್ಟಡವು ವಾಶಿಂಗ್ಟನ್ ನ ಪ್ರತಿಷ್ಠಿತ ಪರಿಸರದಲ್ಲಿದೆ. ಪಾಕಿಸ್ತಾನದ ಶಾಹಬಾಜ ಸರಕಾರದ ಮಂತ್ರಿಮಂಡಲವು ಈ ಕಟ್ಟಡದ ಮಾರಾಟಕ್ಕೆ ಸಮ್ಮತಿ ನೀಡಿದೆಯೆಂದು ತಿಳಿಸಿದ್ದಾರೆ. ಪಾಕಿಸ್ತಾನದ ಮೇಲೆ ಸಧ್ಯಕ್ಕೆ 60 ಲಕ್ಷ ಕೋಟಿ ರೂಪಾಯಿಗಳ ಸಾಲವಿದ್ದು ಇದು ಹೊಸ ತ್ರಿವಿಕ್ರಮವೆಂದು ನಂಬಲಾಗುತ್ತಿದೆ.