ಪ್ರಧಾನಿ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯ ಸ್ಥಿರ

ಪ್ರಧಾನಿ ನರೇಂದ್ರ ಮೋದಿ ಮತ್ತು ತಾಯಿ ಹಿರಾಬೇನ ಮೋದಿ

ಕರ್ಣಾವತಿ (ಗುಜರಾತ) – ಪ್ರಧಾನಿ ನರೇಂದ್ರ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಧಾನಿ ಮೋದಿಯವರು ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಲು ದೆಹಲಿಯಿಂದ ಕರ್ಣಾವತಿಗೆ ತಲುಪಿ ಆಸ್ಪತ್ರೆಗೆ ಭೇಟಿ ನೀಡಿದರು. ಹಿರಾಬೇನ್ ಇವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯಿಂದ ಹೇಳಲಾಗಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ಅವರ ೧೦೦ ನೇ ಹುಟ್ಟುಹಬ್ಬ ಆಚರಿಸಲಾಗಿತ್ತು.