ಸಂರಕ್ಷಣೆಗಾಗಿ ನಮಗೆ ಅಮೇರಿಕಾ ಧನ ಸಹಾಯ ಮಾಡುವುದು !

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಇವರ ದಾವೆ !

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ

ಇಸ್ಲಾಮಾಬಾದ (ಪಾಕಿಸ್ತಾನ) – ಅಮೇರಿಕಾ ಅಫ್ಘಾನಿಸ್ತಾನದ ಗಡಿಯಲ್ಲಿ ಸಂರಕ್ಷಣೆ ಹೆಚ್ಚಿಸುವುದಕ್ಕಾಗಿ ಮತ್ತು ಭಯೋತ್ಪಾದನೆ ತಡೆಯುವುದಕ್ಕಾಗಿ ಪಾಕಿಸ್ತಾನಕ್ಕೆ ಧನ ಸಹಾಯ ಮಾಡಲು ಒಪ್ಪಿಗೆ ನೀಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲವಲ್ ಭುಟ್ಟೋ ಇವರು ಹೇಳಿದರು. ಭುಟ್ಟೋ ಇವರು ಕಳೆದ ವಾರ ಅಮೇರಿಕಾದ ಪ್ರವಾಸ ಮಾಡಿದ್ದರು. ಆಗ ಅವರು ಅಮೆರಿಕಾದ ಸಂಸದರ ಜೊತೆಗೆ ಪಾಕಿಸ್ತಾನಕ್ಕೆ ಸಂರಕ್ಷಣೆಗಾಗಿ ಧನ ಸಹಾಯ ಮಾಡುವುದರ ಬಗ್ಗೆ ಚರ್ಚೆ ನಡೆಸಿದ್ದರು.

ಭುಟ್ಟೊ ತಮ್ಮ ಮಾತನ್ನು ಮುಂದುವರೆಸುತ್ತಾ, ಅಮೇರಿಕಾದ ಸಂಸದ ಬಾಬ್ ಮೈನೆಂಡೆಜ್ ಮತ್ತು ಲಿಂಡೆಸ್ ಗ್ರಹಂ ಇವರು ೨೦೨೩ ನೇ ಬಜೆಟಿನಲ್ಲಿ ಪಾಕಿಸ್ತಾನಕ್ಕೆ ಸಂರಕ್ಷಣೆಗಾಗಿ ಧನ ಸಹಾಯ ನೀಡುವ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ ನೀಡಿದರು.