ಲಖೀಂಪೂರ ಖಿರಿ(ಉತ್ತರಪ್ರದೇಶ)ದಲ್ಲಿ ಮುಸಲ್ಮಾನ ಪತಿಯಿಂದ ಮತಾಂತರಗೊಂಡ ಹಿಂದೂ ಪತ್ನಿಯ ಹತ್ಯೆ

ಲಖಿಮಪೂರ ಖೀರಿ (ಉತ್ತರ ಪ್ರದೇಶ) – ಇಲ್ಲಿಯ ಹಫೀಜಪೂರ ಗ್ರಾಮದ ಮಹಮ್ಮದ್ ವಸಿ ತನ್ನ ಪತ್ನಿ ಉಮಾ ಶರ್ಮ ಉರ್ಫ್ ಅಕ್ಸಾ ಫಾತಿಮಿಳಿಗೆ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹತ್ಯೆಯ ನಂತರ ಅವನು ಉಮಾಳ ಮೃತದೇಹವನ್ನು ಮನೆಯಲ್ಲಿ ಗುಂಡಿ ತೋಡಿ ಮುಚ್ಚಿಟ್ಟಿದ್ದನು ಮತ್ತು ಅವನು ೨ ದಿನ ಅಲ್ಲಿಯೇ ಮಲಗಿದ್ದನು. ವಸಿ ಇವನ ತಾಯಿ ಕೆಲವು ದಿನಗಳಿಗಾಗಿ ಸಂಬಂಧಿಕರ ಮನೆಗೆ ಹೋಗಿದ್ದಾರ ಈ ಘಟನೆ ನಡೆದಿದೆ. ಅವಳು ಹಿಂತಿರುಗಿ ಬಂದ ಬಳಿಕ ಉಮಾಳ ಬಗ್ಗೆ ವಿಚಾರಿಸಿದಾಗ ವಸಿ ಆಕೆಯ ಹತ್ಯೆ ಮಾಡಿರುವುದಾಗಿ ತಿಳಿಸಿದನು. ತದನಂತರ ತಾಯಿಯೇ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಗುಂಡಿಯನ್ನು ಅಗೆದು ಉಮಾಳ ಮೃತ ದೇಹ ಹೊರ ತೆಗೆದರು ಮತ್ತು ವಸಿಯನ್ನು ಬಂಧಿಸಿದರು. ವಸಿ ಮತ್ತು ಉಮಾ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿಗಳ ಮಧ್ಯೆ ಜಗಳ ಆಗುತ್ತಿತ್ತು. ಇದರಿಂದಾಗಿಯೇ ಈ ಹತ್ಯೆ ನಡೆದಿದೆಯೆಂದು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರೊಂದಿಗೆ ವಿವಾಹವಾದ ಬಳಿಕ ಹಿಂದೂ ಯುವತಿಯರ ಸ್ಥಿತಿ ಏನಾಗುತ್ತದೆ, ಇದು ಈ ರೀತಿಯ ಘಟನೆಯಿಂದ ಸತತವಾಗಿ ಬೆಳಕಿಗೆ ಬರುತ್ತಿರುವಾಗಲು ಹಿಂದೂ ಸಂಘಟನೆಗಳು ಅವರಿಗೆ ಧರ್ಮ ಶಿಕ್ಷಣ ನೀಡಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸುವುದು ಅವಶ್ಯಕವಾಗಿದೆ !