ರಾಷ್ಟ್ರೀಯ ಅನ್ವೇಷಣಾ ಇಲಾಖೆಯಿಂದ ೯ ಜನರ ಬಂಧನ
ನವದೆಹಲಿ – ಶ್ರೀಲಂಕಾದಲ್ಲಿನ ಲಿಪ್ರೇಶನ್ ಟೈಗರ್ಸ್ ಆಫ್ ತಮಿಳ್ ಇಲಂ (ಲಿಟ್ಟೇ ) ಈ ಸಂಘಟನೆಯನ್ನು ಇಲ್ಲಿಯ ಸೈನ್ಯವು ಕ್ರಮ ಕೈಗೊಳ್ಳುತ್ತಾ ಕೆಲವು ವರ್ಷಗಳ ಹಿಂದೆ ನಾಶಗೊಳಿಸಿದರು. ಆದರೆ ಈಗ ಇದೇ ಸಂಘಟನೆಯನ್ನು ಪುನರ್ಜೀವಿತಗೊಳಿಸಿ ಮಾದಕ ವಸ್ತುಗಳು ಮತ್ತು ಶಸ್ಟ್ರಾಸ್ತ್ರ ಪೂರೈಸುವುದಕ್ಕಾಗಿ ಪಾಕಿಸ್ತಾನ ಇದನ್ನು ಉಪಯೋಗಿಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್ .ಐ. ತಮಿಳುನಾಡಿನಲ್ಲಿ ಲಿಟ್ಟೇಯನ್ನು ಜೀವಂತ ಗೊಳಿಸುತ್ತಿದೆ, ಎಂಬ ಮಾಹಿತಿ ದಿ ಐಲ್ಯಾಂಡ್ ಈ ವಾರ್ತಾ ಸಂಕೇತ ಸ್ಥಳದಿಂದ ನೀಡಲಾಗಿದೆ. ತದನಂತರ ರಾಷ್ಟ್ರೀಯ ತನಿಖಾದಳ (ಎನ್.ಐ.ಎ. ಇಂದ) ೯ ಜನರನ್ನು ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರ ಸಹಿತ ಬಂಧಿಸಲಾಗಿದೆ. ಶ್ರೀಲಂಕಾದಲ್ಲಿನ ಮಾದಕ ವಸ್ತುಗಳ ಮಾಫಿಯಾ ಗುಣಶೇಖರ್ ಮತ್ತು ಪುಷ್ಪರಾಜ್ ಇವರು ಪಾಕಿಸ್ತಾನದಲ್ಲಿನ ಒಬ್ಬ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರನ ಸಂಪರ್ಕದಲ್ಲಿರುವ ಮಾಹಿತಿ ದೊರೆತಿದೆ.
೧. ಭಾರತದ ಗೂಢಚಾರ ಸಂಸ್ಥೆಯ ಒಬ್ಬ ಅಧಿಕಾರಿಯು, ಫೆಬ್ರುವರಿಯಲ್ಲಿ ಕೂಡ ಲಿಟ್ಟೇಗೆ ತಮಿಳ್ ರಾಷ್ಟ್ರವಾದದ ಜೊತೆಗೆ ಜೀವಂತ ಗೊಳಿಸುವ ಪ್ರಯತ್ನ ಮಾಡಲಾಗಿದೆಯೆಂದು ಹೇಳಿದರು. ಇದರ ಮಾಹಿತಿ ದೊರೆತ ನಂತರ ಗ್ರಾಮೀಣ ಪ್ರದೇಶದಲ್ಲಿ ಕೆಲವು ಜನರ ಮೇಲೆ ಗಮನ ಇಡಲಾಗಿತ್ತು. ಅದರ ನಂತರ ಕೆಲವು ಜನರನ್ನು ಬಂಧಿಸಲಾಯಿತು. ಅವರ ತನಿಖೆಯಿಂದ ಯುರೋಪದಲ್ಲಿನ ಕೆಲವು ಜನರು ಲಿಟ್ಟೇಗೆ ಆರ್ಥಿಕ ಸಹಾಯ ಮಾಡುವುದಕ್ಕಾಗಿ ಹಣ ಸಂಗ್ರಹ ಮಾಡುವ ಪ್ರಯತ್ನದಲ್ಲಿದ್ದಾರೆ. ಇವರೆಲ್ಲರೂ ಒಂದು ಸರ್ಕಾರೇತರ ಸಂಸ್ಥೆಯ ಸಂಪರ್ಕದಲ್ಲಿದ್ದರು. ಅವರು ಆ ಮಾಧ್ಯಮದ ಮೂಲಕ ತಮಿಳು ರಾಷ್ಟ್ರವಾದದ ಮೇಲೆ ಆನ್ ಲೈನ ಸಮ್ಮೇಳನವನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದರು. ಚೆನ್ನೈ ವಿಮಾನ ನಿಲ್ದಾಣದಲ್ಲಿ ಮೇರಿ ಫ್ರಾನ್ಸಿಸ್ಕಾ ಹೆಸರಿನ ಒಬ್ಬ ಶ್ರೀಲಂಕಾದ ಮಹಿಳೆಯನ್ನು ಬಂಧಿಸಿದ ನಂತರ ಇದು ಬಹಿರಂಗವಾಗಿದೆ.
೨. ಈ ಹಿಂದೆಯೂ ೨೦೧೪ ರಲ್ಲಿ ಕೂಡ ಪಾಕಿಸ್ತಾನ ಲಿಟ್ಟೇಯನ್ನು ಪುನರ್ಜೀವಿತಗೊಳಿಸುವ ಪ್ರಯತ್ನ ಮಾಡಿದ್ದು. ಆಗ ಕೊಲಂಬೋದಲ್ಲಿರುವ ಪಾಕಿಸ್ತಾನದ ಉಚ್ಚಾಯುಕ್ತರಿಂದ ಒಂದು ಗುಂಪು ನಡೆಸುತ್ತಿತ್ತು. ಈ ಗುಂಪಿನ ಮೂಲಕ ಭಾರತದಲ್ಲಿ ವಿವಿಧ ಸ್ಥಳಗಳಲ್ಲಿ ಸಾವು ನೋವು ನಡೆಸುವುದು ಪಾಕಿಸ್ತಾನದ ಸಂಚು ಆಗಿತ್ತು.
೩. ಲಿಟ್ಟೇ ಇದು ಶ್ರೀಲಂಕಾದಿಂದ ಒಂದು ಪ್ರತ್ಯೇಕ ಮತ್ತು ಸ್ವತಂತ್ರ ತಮಿಳ ದೇಶಕ್ಕಾಗಿ ಆಂದೋಲನ ಮಾಡುವ ಸಂಘಟನೆಯಾಗಿತ್ತು. ಈ ಬೇಡಿಕೆಗಾಗಿ ನಿಧಾನವಾಗಿ ಈ ಸಂಘಟನೆಯ ಆಂದೋಲನಗಳು ಹಿಂಸಾಚಾರಕ್ಕೆ ತಿರುಗಿತು. ಅದರಲ್ಲಿ ಸಾವಿರಾರು ಜನರು ಬಲಿಯಾದರೂ . ಕೆ ಪ್ರಭಾಕರನ್ ಈ ಸಂಘಟನೆಯ ನಾಯಕನಾಗಿದ್ದನು. ಅವನನ್ನು ಶ್ರೀಲಂಕಾದ ಸೈನ್ಯ ಹತ್ಯೆ ಮಾಡಿತು.
Tamil Nadu: Drug Smuggling Being Used To Revive LTTE; NIA Arrests Ninehttps://t.co/4BtyaB1k8w
— Swarajya (@SwarajyaMag) December 21, 2022
ಸಂಪಾದಕೀಯ ನಿಲುವುಶ್ರೀಲಂಕಾದ ಲಿಟ್ಟೇಯನ್ನು ಪುನರ್ಜೀವಿತಗೊಳಿಸಿ ಅದರ ಉಪಯೋಗ ಭಾರತದ ವಿರುದ್ಧ ದ ಕಾರ್ಯ ಚಟುವಟಿಗಾಗಿ ಮಾಡುವುದು ಪಾಕಿಸ್ತಾನದ ಷಡ್ಯಂತ್ರವಾಗಿತ್ತು. ಪಾಕಿಸ್ತಾನವನ್ನು ನಾಶಗೊಳಿಸಿದರೆ ಭಾರತದ ಬಹಳಷ್ಟು ಸಮಸ್ಯೆಗಳು ಬಗೆಹರಿಯುವುದು, ಇದು ಭಾರತ ಸರಕಾರ ಗಮನಿಸಬೇಕು ! |