ಜಗತ್ತಿಗೆ ‘ಲೈಂಗಿಕ ಸಮಾನತೆ’ ಗೊತ್ತಿಲ್ಲದಿರುವಾಗಲೇ ಭಾರತದಲ್ಲಿ ಗಾರ್ಗಿ, ಮೈತ್ರೇಯಿ, ಅತ್ರೇಯಿ ಮುಂತಾದ ವಿದುಷಿಗಳು ಶಾಸ್ತ್ರಾರ್ಥ ಮಾಡುತ್ತಿದ್ದರು!

ಪ್ರಧಾನಿ ನರೇಂದ್ರ ಮೋದಿ ಹೇಳಿಕೆ!

ರಾಜಕೋಟ (ಗುಜರಾತ) – ‘ಲೈಂಗಿಕ ಸಮಾನತೆ’ ಎಂಬ ಪದವೂ ಜಗತ್ತಿನಲ್ಲಿ ಹುಟ್ಟಿಕೊಂಡಿರಲಿಲ್ಲದಿದ್ದ ಕಾಲದಲ್ಲಿ ನಮ್ಮಲ್ಲಿ ಗಾರ್ಗಿ, ಮೈತ್ರೇಯಿ, ಅತ್ರೇಯಿ ಇವರಂತಹ ವಿದುಷಿಗಳು ಶಾಸ್ತ್ರಾರ್ಥ ಮಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಇಲ್ಲಿನ ‘ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜಕೋಟ ಸಂಸ್ಥಾನ’ದ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಆನ್‌ಲೈನ್ ಮಾತನಾಡುತ್ತಿದ್ದರು.

ನಾವು ಶೂನ್ಯದಿಂದ ಅನಂತದವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಶೋಧಿಸಿ ನಡೆಸಿ ನಿರ್ಣಯಗಳಿಗೆ ತಲುಪಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಒದೇಶಗಳು ತಮ್ಮ ರಾಜಮನೆತನಗಳಿಂದಾಗಿ ಪ್ರಪಂಚದಲ್ಲಿ ಹೆಸರಾಂತರಾಗಿತ್ತಿದ್ದವೋ ಆಗ ಭಾರತಭೂಮಿಯನ್ನು ಗುರುಕುಲಗಳಿಂದ ಗುರುತಿಸಲಾಗುತ್ತಿತ್ತು. ಗುರುಕುಲ ಎಂದರೆ ಗುರುಗಳ ಕುಲ ! ನಳಂದ ಮತ್ತು ತಕ್ಷಶಿಲ ಇವುಗಳಂತಹ ವಿಶ್ವವಿದ್ಯಾನಿಲಯಗಳು ನಮ್ಮ ಗುರುಕುಲ ಪರಂಪರೆಯ ಜಾಗತಿಕ ವೈಭವವಾಗಿದ್ದವು. ಆಧುನಿಕ ಭಾರತದಲ್ಲಿ ಈ ಪ್ರಾಚೀನ ಪರಂಪರೆಯನ್ನು ವರ್ಧಿಸಲು ಸ್ವಾಮಿನಾರಾಯಣ ಗುರುಕುಲವು ‘ಕನ್ಯಾ ಗುರುಕುಲ’ವನ್ನು ಸ್ಥಾಪಿಸುತ್ತಿದೆ. ಕಳೆದ 75 ವರ್ಷಗಳಲ್ಲಿ ಈ ಗುರುಕುಲವು ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆಗಳ ಬೀಜವನ್ನು ಬಿತ್ತಿದೆ; ಇದರಿಂದ ಅವರು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುವರು.