ಕೇಂದ್ರ ಸರಕಾರ` ಭಾರತ ಜೋಡೋ’ ಯಾತ್ರೆಯನ್ನು ಗುರಿ ಮಾಡುತ್ತಿದೆಯೆಂದು ಕಾಂಗ್ರೆಸ್ಸಿನ ಸುಳ್ಳು ಆರೋಪ.

ಕೊರೊನಾದ ಹೆಚ್ಚುತ್ತಿರುವ ಸಾಂಕ್ರಾಮಿಕತೆಯನ್ನು ಗಮನಕ್ಕೆ ತೆಗೆದುಕೊಂಡು ಯಾತ್ರೆಯನ್ನು ನಿಲ್ಲಿಸುವಂತೆ ಸರಕಾರದ ಕರೆ

ಕಾಂಗ್ರೆಸ ನಾಯಕ ರಾಹುಲ ಗಾಂಧಿ

ನವದೆಹಲಿ– ಕೋವಿಡ ಮಹಾಮಾರಿಯ ಹೊಸ ಅಪಾಯದ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ 22, 2022 ರಂದು ಕರೆದ ಸಭೆಯಲ್ಲಿ ಕಾಂಗ್ರೆಸ್ ಸಮಾಚಾರವನ್ನು ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಕೊರೊನಾ ಚಿಂತೆಯಿಂದ ಕೇಂದ್ರ ಸರಕಾರವು `ಭಾರತ ಜೋಡೊ’ ಯಾತ್ರೆಯನ್ನು ಗುರಿ ಮಾಡುತ್ತಿದೆಯೆಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರೀಯ ಆರೋಗ್ಯಮಂತ್ರಿ ಮನಸುಖ ಮಾಂಡವಿಯಾ ಇವರು ಕಾಂಗ್ರೆಸ ನಾಯಕ ರಾಹುಲ ಗಾಂಧಿಯವರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿದೆ. ಈ ಪತ್ರದಲ್ಲಿ ಮಾಂಡವಿಯಾ ಇವರು ರಾಹುಲಗಾಂಧಿಯವರಿಗೆ ಕೊರೊನಾದ ಸಾಂಕ್ರಾಮಿಕತೆ ಪುನಃ ಹೆಚ್ಚುತ್ತಿರುವ ಸಾಧ್ಯತೆಯಿರುವುದರಿಂದ ಅವರ `ಭಾರತ ಜೋಡೊ’ ಯಾತ್ರೆಯ ಪುನರ್ವಿಚಾರ ಮಾಡುವಂತೆ ಕರೆ ನೀಡಿದೆ.

ಕಾಂಗ್ರೆಸ್ಸಿನ ಕಾರ್ಯದರ್ಶಿ ಜಯರಾಮ ರಮೇಶ ಇವರು ಟ್ವೀಟ ಮಾಡಿ `ಓಮಿಕ್ರಾನ್ ಬಿ.ಎಫ್.7’ ಈ ಕೊರೊನಾ ವಿಷಾಣುವಿನ ಸಾಂಕ್ರಾಮಿಕತೆ ಹರಡಿರುವ ಪ್ರಕರಣವನ್ನು ಕೆಲವು ತಿಂಗಳುಗಳ ಹಿಂದೆ ಬಹಿರಂಗವಾಗಿದೆ; ಆದರೆ ಪ್ರಧಾನಮಂತ್ರಿಯವರ ಸಭೆಯಲ್ಲಿ `ಭಾರತ ಜೋಡೊ’ ಯಾತ್ರೆ ದೆಹಲಿಯನ್ನು ತಲುಪುತ್ತಿರುವಾಗ ಆಗುತ್ತಿದೆ. (ಪ್ರತಿಯೊಂದು ವಿಷಯವನ್ನು ರಾಜಕೀಯದ ದೃಷ್ಟಿಕೋನದಿಂದ ನೋಡುವ ಕಾಂಗ್ರೆಸ್ಸಿನ ಹಳೆಯ ಚಾಳಿಯೇನು ಹೋಗುವುದಿಲ್ಲ’, ಎಂದು ಯಾರಾದರೂ ಹೇಳಿದರೆ ಅದು ಅಯೋಗ್ಯವೆಂದು ಹೇಳಲಾಗುವುದಿಲ್ಲ- ಸಂಪಾದಕರು) `ಭಾರತ ಜೋಡೊ’ ಯಾತ್ರೆ ಬುಧವಾರ ರಾಜಸ್ಥಾನದಿಂದ ಹರಿಯಾಣವನ್ನು ತಲುಪಿದೆ. ಡಿಸೆಂಬರ 24 ರಂದು ಅದು ದೆಹಲಿಯನ್ನು ಪ್ರವೇಶಿಸಲಿದೆ.

`ಕುಂಭಮೇಳದಿಂದ ಕೊರೊನಾ ಸಾಂಕ್ರಾಮಿಕತೆ ಹರಡುತ್ತಿದೆ’, ಎಂದು ಟೀಕಿಸುತ್ತಾ, ಆ ಸಮಯದಲ್ಲಿ ಈ ಉತ್ಸವವನ್ನು ಸ್ಥಗಿತಗೊಳಿಸುವಂತೆ ನಿಧರ್ಮಿವಾದಿಗಳು ಕೋರಿದ್ದರು. ಈಗ ಕೊರೊನಾದ ಅಪಾಯ ಪುನಃ ಉದ್ಭವಿಸಿರುವಾಗ, `ಭಾರತ ಜೋಡೊ ಯಾತ್ರೆ’ ಸ್ಥಗಿತಗೊಳಿಸುವಂತೆ ನಿಧರ್ಮಿವಾದಿಗಳು ಏಕೆ ಕೋರುತ್ತಿಲ್ಲ?- ಸಂಪಾದಕರು