ಹಿಂದೂ ಮಹಿಳೆಯ ಜೊತೆ `ಲಿವ್ ಇನ್ ರಿಲೇಶನ ಶಿಪ್’ನಲ್ಲಿ ವಾಸಿಸುವ ಶಾಹರುಖನು ಆಕೆಯ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಗೈದ !

(`ಲಿವ್ ಇನ್ ರಿಲೇಶನ್ ಶಿಪ್’ ಎಂದರೆ ವಿವಾಹ ಮಾಡಿಕೊಳ್ಳದೆ ಒಟ್ಟಾಗಿ ಇರುವುದು)

ಆರೋಪಿ ಶಾಹರುಖ ಮತ್ತು ಅವನ ಸಹೋದರ ಸಾಹಿಲ್

ಇಂದೂರು – ಹಿಂದೂ ಮಹಿಳೆಯ ಜೊತೆಗೆ `ಲಿವ್ ಇನ್ ರಿಲೇಶನಶಿಪ್’ನಲ್ಲಿ ವಾಸಿಸುವ ಶಾಹರುಖನು ಆಕೆಯ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಲೈಂಗಿಕ ದೌರ್ಜನ್ಯದಲ್ಲಿ ಆರೋಪಿ ಶಾಹರುಖ ಮತ್ತು ಅವನ ಸಹೋದರ ಸಾಹಿಲ್ ಸಹಭಾಗಿ ಇರುವುದಾಗಿ ಆಪ್ರಾಪ್ತ ಹಿಂದೂ ಹುಡುಗಿ ಆರೋಪಿಸಿದ್ದಾಳೆ. ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

೧. ಸಂಬಂಧಿತ ಹಿಂದೂ ಮಹಿಳೆ ಆಕೆಯ ೨ ವರ್ಷದ ಮಗಳ ಜೊತೆ ೨೦೦೮ ರಿಂದ ಆಕೆಯ ಗಂಡನನ್ನು ಬಿಟ್ಟು ಇರುತ್ತಿದ್ದಳು. 2 ವರ್ಷಗಳ ಹಿಂದೆ ಶಾಹರುಖ ಈ ಮಹಿಳೆಯ ಸಂಪರ್ಕಕ್ಕೆ ಬಂದನು. ನಂತರ ಈ ಮಹಿಳೆ ಆಕೆಯ ೨ ವರ್ಷದ ಮಗಳ ಜೊತೆಗೆ ಶಾಹರುಖ ಜೊತೆ `ಲಿವ್ ಇನ್ ರಿಲೇಶನಶಿಪ್’ನಲ್ಲಿ ವಾಸಿಸಲು ಆರಂಭಿಸಿದಳು.

೨. ದೊಡ್ಡ ಹುಡುಗಿಯ ವಯಸ್ಸು ೧೪ ವರ್ಷವಾಗಿದೆ. ಒಂದು ದಿನ ಆಕೆಯ ಚಿಕ್ಕ ಸಹೋದರಿಯು ಹೊರಗೆ ಹೋದಾಗ ಆಕೆ ಒಬ್ಬಳೇ ಇರುವುದನ್ನು ನೋಡಿ ಶಾಹರುಖ ಆಕೆಯ ಜೊತೆಗೆ ಅಶ್ಲೀಲವಾಗಿ ವರ್ತಿಸಿದ್ದನು. ಅದರ ನಂತರ ಕೂಡ ಕಾಮುಕ ಶಾಹರುಖನು ಆ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಮುಂದುವರೆಸಿದನು.

೩. ಕೆಲವು ದಿನಗಳ ನಂತರ ಶಾಹರುಖನ ಸಹೋದರ ಸಾಹಿಲ್ ಇವನು ಕೂಡ ಸಂತ್ರಸ್ತೇ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದನು. ಹುಡುಗಿ ಅವನ ಕೃತ್ಯಕ್ಕೆ ವಿರೋಧಿಸಿದ ನಂತರ ಆಕೆಗೆ ಜೀವ ಬೆದರಿಕೆ ನೀಡಲಾಯಿತು.

೪. ಸಂತ್ರಸ್ತೆ ಹುಡುಗಿ ಡಿಸೆಂಬರ್ ೧೭, ೨೦೨೨ ರಂದು ಅಜ್ಜಿಯ ಬಳಿಗೆ ಓಡಿ ಹೋದಳು. ಆಕೆ, ಅಜ್ಜಿಗೆ ಶಾಹರುಖ ಮತ್ತು ಸಾಹಿಲ್ ಇವರ ಎಲ್ಲ ಕುಕೃತ್ಯಗಳ ಬಗ್ಗೆ ಹೇಳಿದಳು. ಆಕೆಯ ತಾಯಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಳು. ಅಪ್ರಾಪ್ತ ಹುಡುಗಿಯ ವೇದನೆ ಕೇಳಿ ಆಕೆಯ ಅಜ್ಜಿ ಪೊಲೀಸರಲ್ಲಿ ದೂರು ದಾಖಲಿಸಿದಳು.

ಮತಾಂಧರೊಂದಿಗೆ ಪ್ರೀತಿಸುವುದು, ಎಂದರೆ ತನ್ನ ಜೊತೆಗೆ ತನ್ನ ಕುಟುಂಬದವರ ಜೀವನ ಕೂಡ ಹಾಳು ಮಾಡುವುದು, ಇದು ಹಿಂದೂ ಮಹಿಳೆಯರಿಗೆ ಅರ್ಥವಾಗುವ ದಿನವೇ ಸುದಿನ !- ಸಂಪಾದಕರು