ಭಾರತೀಯರಿಗೆ `ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ನಿಂದ ಕೊರೊನಾಗೆ ಸಂಬಂಧಿಸಿದಂತೆ ಸೂಚನೆ ಜಾರಿ !

ನವ ದೆಹಲಿ – ಚೀನಾದಲ್ಲಿ ಹೆಚ್ಚುತ್ತಿರುವ ಕೊರೋನ ರೋಗಾಣುವಿನ ಸೋಂಕಿನಿಂದ ಭಾರತದಲ್ಲಿ ಕೂಡ ಜಾಗರೂಕತೆಯ ಎಚ್ಚರಿಕೆ ನೀಡಲಾಗಿದೆ. ಚೀನಾದಲ್ಲಿ ವೇಗವಾಗಿ ಸೋಂಕು ಹೆಚ್ಚುತ್ತಿರುವ `ಓಮಿಕ್ರೋನ್ ಬಿಎಫ್.೭’ ಈ ಕೊರೋನಾ ರೋಗಾಣುವಿನ ಸೋಂಕು ಭಾರತದಲ್ಲಿನ ೪ ಜನರಿಗೆ ಆಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ `ಇಂಡಿಯನ್ ಮೆಡಿಕಲ್ ಅಸೊಶಿಯೇಶನ್’ನಿಂದ ನಾಗರಿಕರಿಗಾಗಿ ಕೆಲವು ಸೂಚನೆ ಜಾರಿ ಮಾಡಿದೆ.

ಅವು ಮುಂದಿನಂತೆ ಇವೆ :

೧. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಹಾಕುವುದು ಅವಶ್ಯಕ.

೨. ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟೆನ್ಸ್) ಕಾಪಾಡುವುದು ಅವಶ್ಯಕ.

೩. ನಿಮ್ಮ ಕೈಗಳನ್ನು `ಸ್ಯಾನಿಟೈಸರ್’ ಮತ್ತು ಸೋಪಿನಿಂದ ತೊಳೆಯುತ್ತಿರಿ !

೪. ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗದಿರಿ !

೫. ವಿದೇಶ ಪ್ರವಾಸ ಮಾಡದಿರಿ !

೬. ನಿಮಗೆ ಏನಾದರೂ ಜ್ವರ, ಗಂಟಲ ನೋವು, ಕೆಮ್ಮು ಅಥವಾ ಅಜೀರ್ಣದ ತೊಂದರೆ ಇದ್ದರೆ ತಕ್ಷಣ ನಿಮ್ಮ ವೈದ್ಯರ ಸಲಹೆ ಪಡೆಯಿರಿ !

೭. ಕೊರೊನಾದ ಲಸಿಕೆ ತೆಗೆದಕೊಳ್ಳದೆ ಇದ್ದರೆ ಲಸಿಕೆಯನ್ನು ತೆಗೆದುಕೊಳ್ಳಿ ! ಹಾಗೂ ಬೂಸ್ಟರ್ ಡೋಸ್ ತೆಗೆದುಕೊಳ್ಳದೆ ಇದ್ದರೆ ಅವಶ್ಯವಾಗಿ ತೆಗೆದುಕೊಳ್ಳಿ !