ಭಾರತ ಜೋಡೋ ಯಾತ್ರೆ ರದ್ದು ಪಡಿಸಿ !

ಕೇಂದ್ರ ಸರಕಾರದಿಂದ ಕೊರೊನಾದ ಹಿನ್ನಲೆಯಲ್ಲಿ ರಾಹುಲ ಗಾಂಧಿ ಇವರಿಗೆ ಮನವಿ

ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವೀಯಾ ಮತ್ತು ಕಾಂಗ್ರೆಸ್ ನಾಯಕ ರಾಹುಲ ಗಾಂಧಿ

ನವ ದೆಹಲಿ – ಚೀನಾದಲ್ಲಿ ಕೊರೋನಾದ ಹೆಚ್ಚುತ್ತಿರುವ ಸಂಕ್ರಮಣದ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವೀಯಾ ಇವರು ರಾಹುಲ ಗಾಂಧಿ ಇವರಿಗೆ, `ನೀವು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಕೊರೋನ ವಿಷಯವಾಗಿ ನಿಯಮ ಪಾಲನೆ ಮಾಡಬೇಕು ಮತ್ತು ನಿಯಮ ಪಾಲನೆ ಸಾಧ್ಯವಿಲ್ಲದೆ ಇದ್ದರೆ ಭಾರತ ಜೋಡೋ ಯಾತ್ರೆ ದೇಶದ ಹಿತದ ದೃಷ್ಟಿಯಿಂದ ನಿಲ್ಲಿಸಬೇಕು’, ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ರಾಜಸ್ಥಾನದಲ್ಲಿನ ಶಾಸಕ ಪಿ.ಪಿ. ಚೌಧರಿ, ನಿಹಾಲ ಚಂದ ಮತ್ತು ದೇವಜಿ ಪಟೇಲ ಇವರು ಆರೋಗ್ಯ ಸಚಿವ ಮಾಂಡವೀಯಾ ಇವರಿಗೆ ಪತ್ರ ಬರೆದು ಭಾರತ ಜೋಡೋ ಯಾತ್ರೆಯಿಂದ ಹರಡುವ ಕೊರೋನಾದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ನಿಂದ ಯಾತ್ರೆ ರದ್ದುಗೊಳಿಸಲು ವಿರೋಧ

ಆರೋಗ್ಯ ಸಚಿವರ ಮನವಿ ಬಗ್ಗೆ ಕಾಂಗ್ರೆಸ್ ಶಾಸಕ ಅಧೀರ ರಂಜನ ಚೌದರಿ ಇವರು, ಭಾರತ ಜೋಡೋ ಯಾತ್ರೆಗೆ ಮೋದಿ ಸರಕಾರ ಹೆದರಿದೆ. ಜನರ ಗಮನ ಬೇರೆ ಕಡೆಗೆ ಸೆಳೆಯಲು ಭಾಜಪ ವಿವಿಧ ಪ್ರಶ್ನೆಗಳನ್ನು ನಿರ್ಮಿಸುತ್ತಿದೆ. `ಗುಜರಾತ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಇವರು ಎಲ್ಲಾ ನಿಯಮದ ಪಾಲನೆ ಮಾಡಿ ಮುಖಕ್ಕೆ ಮಾಸ್ಕ ಧರಿಸಿ ಮನೆ ಮನೆಗೆ ಹೋಗಿದ್ದರೆ ?’, ಎಂದು ಪ್ರಶ್ನೆ ಕೇಳಿದರು.