ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿಯನ್ನು ಕೊಡುವುದಿಲ್ಲ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಧಾನಮಂಡಳದಲ್ಲಿ ಹೇಳಿಕೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ- ಹಿಂದಿನ ಸರಕಾರ ತೆಗೆದುಕೊಂಡಿದ್ದ ನಿರ್ಣಯ ಮತ್ತು ರಾಜ್ಯದ ಗಡಿ, ನೀರು ಮತ್ತು ಭಾಷೆಯ ವಿಷಯದಲ್ಲಿ ನಮ್ಮ ನಿರ್ಧಾರ ಸ್ಪಷ್ಟವಾಗಿದೆ. ರಾಜ್ಯದ ಹಿತವನ್ನು ರಕ್ಷಿಸಲು ನಾವು ಯಾವಾಗಲೂ ಕಟಿಬದ್ಧರಾಗಿದ್ದೇವೆ. ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಹೇಳಿಕೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರಾಜ್ಯದ ವಿಧಾನಮಂಡಳದ ಅಧಿವೇಶನದಲ್ಲಿ ನೀಡಿದ್ದಾರೆ. ಗಡಿವಿವಾದದ ಬಗ್ಗೆ ಕರ್ನಾಟಕ ಸರಕಾರದ ಪಾತ್ರವು ಸ್ಪಷ್ಟಗೊಳಿಸಲು ಕರ್ನಾಟಕ ವಿಧಾನಮಂಡಳದ ಎರಡೂ ಸಭೆಯಲ್ಲಿ ಒಮ್ಮತದಿಂದ ಠರಾವು ಸಮ್ಮತಿಸಬೇಕು ಎನ್ನುವ ಸೂಚನೆಯನ್ನೂ ಅವರು ನೀಡಿದ್ದಾರೆ. ಕರ್ನಾಟಕದ ವಿಧಾನಸಭೆಯಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದದ ಮೇಲೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಮೇಲಿನಂತೆ ಹೇಳಿಕೆ ನೀಡಿದರು. ಮುಖ್ಯಮಂತ್ರಿ ಬೊಮ್ಮಾಯಿಯವರ ಸೂಚನೆಯನುಸಾರ ಕರ್ನಾಟಕ ವಿಧಾನಮಂಡಳದಲ್ಲಿ ಗಡಿವಿವಾದದ ಮೇಲೆ ಠರಾವು ಸಮ್ಮತಿಸಲಾಗುವುದು.

ಕರ್ನಾಟಕದ ವಿರೋಧಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯರವರೊಂದಿಗೆ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಬೊಮ್ಮಾಯಿಯವರು ಮಂಡಿಸಿರುವ ಪ್ರಸ್ತಾವನೆಗೆ ಬೆಂಬಲವನ್ನು ಸೂಚಿಸಿದರು. ಸಿದ್ಧರಾಮಯ್ಯನವರು ಮುಂದುವರಿದು ಈ ಪ್ರಕರಣದಲ್ಲಿ ಯಾವುದೇ ವಾದದ ಪ್ರಶ್ನೆಯೇ ಉದ್ಭವಿಸುವುದಿಲ್ಲ.