ಜಕಣಾಚಾರ್ಯ ಪ್ರಶಸ್ತಿ ವಿಜೇತ ಕಾರವಾರದ ಸುಪ್ರಸಿದ್ದ ಶಿಲ್ಪಿ ಪೂಜ್ಯ ನಂದಾ ಆಚಾರಿ ಇವರ ದೇಹತ್ಯಾಗ

ಪೂಜ್ಯ ನಂದಾ ಆಚಾರಿ

ಅನಾಸಕ್ತ, ದೇಹಭಾವ ಮರೆತು ಮೂರ್ತಿ ಕೆತ್ತನೆಯ ಸೇವೆಯನ್ನು ಮಾಡುವ ಹಾಗೂ ಕರ್ನಾಟಕ ರಾಜ್ಯ ಸರಕಾರದಿಂದ ‘ಜಕಣಾಚಾರ್ಯ ಪ್ರಶಸ್ತಿ’ ವಿಜೇತ ಕಾರವಾರದ ಪ್ರಸಿದ್ಧ ಶಿಲ್ಪಿ ಪೂ. ನಂದಾ ಆಚಾರಿ (ಗುರೂಜಿ) ಇವರು ಡಿಸೆಂಬರ್ ೧೧ ರಂದು ಮಧ್ಯಾಹ್ನ ೧೨.೩೦ ಕ್ಕೆ ದೇಹತ್ಯಾಗ ಮಾಡಿದರು. ಅವರು ೮೨ ವರ್ಷದವರಾಗಿದ್ದರು. ಅವರು ಪತ್ನಿ, ೧ ಪುತ್ರಿ, ೪ ಪುತ್ರರನ್ನು ಅಗಲಿದ್ದಾರೆ.

೩ ನವೆಂಬರ್ ೨೦೨೨ ರಂದು ಅವರನ್ನು ಗೋವಾದ ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಸಂತರೆಂದು ಘೋಷಿಸಲಾಗಿತ್ತು. ಅವರಿಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿತ್ತು. ಆಶ್ರಮದಲ್ಲಿರುವ ಶ್ರೀ ಸಿದ್ಧಿವಿನಾಯಕನ ಮೂರ್ತಿಯನ್ನು ಪೂ. ನಂದಾ ಆಚಾರಿಯವರೇ ಕೆತ್ತಿದ್ದರು.

ದಶಕಲೆಗಳ ಮೇಲೆ ಪ್ರಭುತ್ವವಿದ್ದ ಪೂ. ನಂದಾ ಆಚಾರಿ ಗುರೂಜಿ

ಪೂ. ಗುರೂಜಿಯವರಿಗೆ ದಶಕಲೆಗಳು ಬರುತ್ತದೆ. ‘ಇಲ್ಲಿಯವರೆಗೆ ನಾವು ಪಂಚಕಲೆಗಳು ಬರುವ ವ್ಯಕ್ತಿಗಳನ್ನು ಕೇಳಿದ್ದೇವೆ, ಆದರೆ ‘ಭಗವಂತನು ಇಂದು ನನಗೆ ದಶಕಲೆಗಳನ್ನು ನೀಡಿದ್ದಾನೆ’, ಎಂದು ಗುರೂಜಿ ಹೇಳುತ್ತಿದ್ದರು. ಅವರಿಗೆ ಕಲ್ಲು, ಮಣ್ಣು, ಸಿಮೆಂಟ್, ಫೈಬರ್, ಮರ, ಬಂಗಾರ, ಬೆಳ್ಳಿ, ಹಿತ್ತಾಳೆ, ತಾಮ್ರ ಮತ್ತು ಅಲ್ಯೂಮಿನಿಯಂ ಮುಂತಾದ ವಸ್ತುಗಳಿಂದ ಮೂರ್ತಿ ತಯಾರಿಸಲು ಬರುತ್ತದೆ. ಅದೇ ರೀತಿ ಹಳೆ ‘ಟೈಪ್ ರೈಟರ ದುರಸ್ತಿ ಮಾಡುವುದು, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್, ಚತುಶ್ಚಕ್ರ ವಾಹನ, ದ್ವಿಚಕ್ರ ವಾಹನ ಇವುಗಳ ದುರಸ್ತಿ ಮಾಡುವುದು, ಹೊಲಿಗೆ ಯಂತ್ರ ತಯಾರಿಸುವುದು ಮತ್ತು ಅದರ ದುರುಸ್ತಿ ಮಾಡುವುದು; ಅಲ್ಯೂಮಿನಿಯಂ ಉಪಯೋಗಿಸಿ ಅದರಿಂದ ಈಳಿಗೆ ಮನೆ ತಯಾರಿಸುವ ಕಲೆ ಅವರಿಗೆ ಬರುತ್ತದೆ. ಇಷ್ಟೇ ಅಲ್ಲದೆ ಅವರು ಮೂರ್ತಿಗಳನ್ನು ತಯಾರಿಸಲು ಬೇಕಾಗುವ ಯಂತ್ರ ಅಥವಾ ಸಲಕರಣೆಗಳನ್ನು ಅವರೇ ತಯಾರಿಸುತ್ತಾರೆ.

ಸೂಕ್ಷ್ಮದಲ್ಲಿ ತಿಳಿಯುವ ಕ್ಷಮತೆಯಿರುವ ಮತ್ತು ಅದರಂತೆ ಮೂರ್ತಿ ತಯಾರಿಸುವ ಪೂ. ಆಚಾರಿ ಗುರೂಜಿ

‘ಯಾವ ದೇವರ ಮೂರ್ತಿಯನ್ನು ಯಾವ ಶಿಲೆಯಿಂದ ತಯಾರಿಸಬೇಕು ?’, ಇದು ಗುರೂಜಿಯವರಿಗೆ ಆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತಿತ್ತು. ‘ಮೂರ್ತಿ ತಯಾರಿಸುವುದಕ್ಕಾಗಿ ವಿಶಿಷ್ಟ ರೀತಿಯ ಮೂರ್ತಿಗೆ ವಿಶಿಷ್ಟ ರೀತಿಯ ಶಿಲೆ ಬೇಕಾಗುತ್ತದೆ’. ಉದಾ. ಕೃಷ್ಣಶಿಲೆ, ವಜ್ರಶಿಲೆ, ಸಾಲಿಗ್ರಾಮ, ಅಮೃತಶಿಲೆ ಇತ್ಯಾದಿ. ‘ಯಾವ ದೇವತೆಯ ಮೂರ್ತಿಯನ್ನು ಯಾವ ಶಿಲೆಯಿಂದ ತಯಾರಿಸಬೇಕು ?’, ಇದು ಗುರೂಜಿಯವರಿಗೆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತದೆ. ಆ ಕಲ್ಲನ್ನು ಸ್ಪರ್ಶಿಸಿದ ನಂತರ ಆ ಕಲ್ಲಿನಿಂದ ಅರಿವಿಗೆ ಬರುವ ಸ್ಪಂದನಗಳು ಯಾವ ಮೂರ್ತಿ ತಯಾರಿಸುವುದಿದೆ, ಆ ದೇವತೆಯ ಸ್ಪಂದನಕ್ಕೆ ಹೊಂದಬೇಕು. ಆ ಸ್ಪಂದನದ ಮೂಲಕ ಅವರಿಗೆ ‘ಆ ಮೂರ್ತಿಗಾಗಿ ಈ ಶಿಲೆ ಯೋಗ್ಯವಿದೆಯೇ ?’ ಎಂದು  ಒಳಗಿನಿಂದ ಅರಿವಾಗುತ್ತಿತ್ತು.

– ಶ್ರೀ. ರಾಮಾನಂದ ಪರಬ (ಆಧ್ಯಾತ್ಮಿಕ ಮಟ್ಟ ಶೇ. ೬೮) ಮತ್ತು ಶ್ರೀ. ರಾಜು ಸುತಾರ, ಸನಾತನ ಆಶ್ರಮ, ರಾಮನಾಥಿ, ಗೋವಾ.