ದುರ್ಗಮ ಪ್ರದೇಶಗಳಿಗೆ ವರ್ಗಾವಣೆ ಬೇಡವೆಂದು ಪ್ರಾಮಾಣಿಕ ಅಧಿಕಾರಿಗಳು ಲಂಚ ತೆಗೆದುಕೊಳ್ಳುವ ವಿಚಾರ ಮಾಡುತ್ತಾರೆ.

`ಇಂಡಿಯನ ಇನ್ಸಟಿಟ್ಯೂಟ ಆಫ್ ಮ್ಯಾನೇಜಮೆಂಟ, ಉದಯಪೂರ’ 7 ರಾಜ್ಯಗಳಲ್ಲಿ ನಡೆಸಿರುವ ಸಂಶೋಧನೆ

ಉದಯಪೂರ(ರಾಜಸ್ಥಾನ)– ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದು ಜಗತ್ತಿಗೇ ತಿಳಿದಿದೆ. ಇಲ್ಲಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಅವರ ವರ್ಗಾವಣೆಯನ್ನು ದುರ್ಗಮ ಪ್ರದೇಶಗಳಿಗೆ ಮಾಡುತ್ತಾರೆ. ಈ ಕಾರಣದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲು ಇಚ್ಛಿಸುವ ಅಧಿಕಾರಿ ಲಂಚ ತೆಗೆದುಕೊಳ್ಳುವ ವಿಚಾರ ಮಾಡುತ್ತಾರೆ ಎನ್ನುವ ಮಾಹಿತಿ `ಭಾಸ್ಕರ’ ದಿನಪತ್ರಿಕೆ ಮುಂದಾಗಿ `ಇಂಡಿಯನ ಇನಸ್ಟಿಟ್ಯೂಟ ಆಫ್ ಮ್ಯಾನೇಜಮೆಂಟ’ (ಆಯ್.ಆಯ್.ಎಮ್) ಉದಯಪೂರ’ ಮಾಡಿರುವ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಅನೇಕ ಪ್ರಕರಣಗಳಲ್ಲಿ ಸಮಾಜವೂ ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎನ್ನುವುದೂ ಇದರಿಂದ ಗಮನಕ್ಕೆ ಬಂದಿದೆ. ಈ ಸಂಶೋಧನೆಯನ್ನು ಪಂಜಾಬ, ಹರಿಯಾಣಾ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಮತ್ತು ಗುಜರಾತ ಈ ರಾಜ್ಯಗಳಲ್ಲಿ ನಡೆಸಲಾಯಿತು.

 

ಆಯ್.ಆಯ್.ಎಂ. ಉದಯಪೂರ’ನ ಪ್ರಾ. ಡಾ. ಸೌರಭ ಗುಪ್ತಾ

`ಆಯ್.ಆಯ್.ಎಂ. ಉದಯಪೂರ’ನ ಪ್ರಾ. ಡಾ. ಸೌರಭ ಗುಪ್ತಾ ಇವರು ಸುಮಾರು 86 ಜನರ ಅಧ್ಯಯನ ನಡೆಸಿದರು. ಅದರಲ್ಲಿ ಕೇಂದ್ರೀಯ ಲೋಕಸೇವಾ ಆಯೋಗದ (`ಯು.ಪಿ.ಎಸ್.ಸಿ’) ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಿಹಾರಿನ 36 ವಿದ್ಯಾರ್ಥಿಗಳಲ್ಲದೇ ಇನ್ನುಳಿದ 6 ರಾಜ್ಯಗಳ 50 ವಿದ್ಯಾರ್ಥಿ ಮತ್ತು ಅಧಿಕಾರಿಗಳು ಸೇರಿದ್ದಾರೆ. ಪ್ರಾಯೋಗಿಕ ಆಟ, ಗುಂಪುಚರ್ಚೆ ಇತ್ಯಾದಿ ಮಾಧ್ಯಮಗಳಿಂದ ಅವರ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ಅವರ ವಿಚಾರಗಳ ಮೇಲೆ ಸಂಶೋಧನೆ ನಡೆಸಲಾಯಿತು. ಈ ಸಮಸ್ಯೆಯ ಮೇಲೆ ಉಪಾಯವನ್ನು ಕೂಡ ಕೇಳಲಾಯಿತು. ಅದಕ್ಕೆ ಅವರು ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನುಗಳಿವೆ; ಆದರೆ ವ್ಯವಸ್ಥೆಗೆ ಹುಳ ಹಿಡಿದಿದೆಯೆಂದು ಹೇಳಿದರು.

ಭ್ರಷ್ಟಾಚಾರದ ವಿಷಯದಲ್ಲಿ ಗಮನಕ್ಕೆ ಬಂದ ಮಾನಸಿಕತೆ.

೧. ಲಂಚದ ಹಣ ಅಧಿಕವಿದ್ದರೆ ಮತ್ತು ಅದರಿಂದ ಜನತೆಗೆ ದೊಡ್ಡ ಹಾನಿಯಾಗುತ್ತಿದ್ದರೆ, ಅಧಿಕಾರಿ ಲಂಚ ತೆಗೆದುಕೊಳ್ಳಲು ಹೆದರುತ್ತಾರೆ; ಕಾರಣ ಇಂತಹ ಪ್ರಕರಣಗಳು ಬೇಗೆನೆ ಬೆಳಕಿಗೆ ಬರುತ್ತವೆ ಮತ್ತು ಇದರಿಂದ ನೌಕರಿಯ ಮೇಲೆ ಗಂಡಾಂತರ ಬರುವ ಸಾಧ್ಯತೆಯಿರುತ್ತದೆ, ಹಾಗೆಯೇ ಸಂಬಂಧಿಸಿದ ಅಧಿಕಾರಿಗಳ ಅಪಕೀರ್ತಿಯೂ ಆಗುತ್ತದೆ.

೨. ಪ್ರಕರಣ ಜನತೆಗೆ ಸಂಬಂಧಿಸಿದೇ ಇದ್ದಲ್ಲಿ, ಹಾಗೆಯೇ ಶಿಕ್ಷೆ ಕಡಿಮೆಯಿದ್ದರೆ, ಅಧಿಕಾರಿ ಸಹಜವಾಗಿ ಲಂಚ ತೆಗೆದುಕೊಳ್ಳುತ್ತಾರೆ. ಎಂದು ಅನೇಕ ಪ್ರಕರಣಗಳಲ್ಲಿ ಬಹಿರಂಗವಾಗಿದೆ; ಆದರೆ ಅದರಲ್ಲಿ ಶಿಕ್ಷೆಯಾಗಿರುವ ಘಟನೆಗಳು ಬಹಳ ಕಡಿಮೆಯಿದೆ. ಆದ್ದರಿಂದಲೇ ಭ್ರಷ್ಟಾಚಾರದ ಹೆದರಿಕೆಯೆನಿಸುವುದಿಲ್ಲ.

೩. ಸರಕಾರ ಕೆಲವು ಪ್ರಾಮಾಣಿಕ ಅಧಿಕಾರಿಗಳಿಗೆ ಪ್ರೋತ್ಸಾಹಿಸುತ್ತದೆ; ಆದರೆ ಸರಕಾರದ ವಿಷಯದಲ್ಲಿ ಅಧಿಕಾರಿಗಳ ನಡುವಳಿಕೆ ಎಲ್ಲಿಯವರೆಗೆ ಮೆದುವಾಗಿ ಮತ್ತು ಸಹಕಾರದಿಂದ ಇರುತ್ತದೆಯೋ ಅಲ್ಲಿಯವರೆಗೆ ಸರಕಾರ ಇಂತಹ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಮಾನಸಿಕತೆ ಈ ರೀತಿ ಇದ್ದರೆ, ದೇಶದಲ್ಲಿರುವ ಭ್ರಷ್ಟಾಚಾರ ಎಂದಾದರೂ ನಷ್ಟಗೊಳ್ಳುವುದೇ? ಈ ಸ್ಥಿತಿ ಧರ್ಮಾಚರಣಿ ರಾಜಕಾರಣಿಗಳು ಮತ್ತು ಜನತೆಯಿಂದ ಹಿಂದೂರಾಷ್ಟ್ರ ಸ್ಥಾಪನೆಯಿಲ್ಲದೇ ಬೇರೆ ಮಾರ್ಗವಿಲ್ಲ.