9 ಪೊಲೀಸ ಅಧಿಕಾರಿಗಳನ್ನು ತಮ್ಮ ಬಂಧನದಲ್ಲಿಟ್ಟುಕೊಂಡರು
ಖೈಬರ ಫೈಖ್ತುನಖ್ವಾ(ಪಾಕಿಸ್ತಾನ)- `ತೆಹರಿಕ-ಎ-ತಾಲಿಬಾನ ಪಾಕಿಸ್ತಾನ’ (ಟಿ.ಟಿ.ಪಿ) ಈ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರು ಬನ್ನೂ ಕಂಟೋನ್ಮೆಂಟ ನಲ್ಲಿ ನುಗ್ಗಿ ಒಂದು ಪೊಲೀಸ ಠಾಣೆಯನ್ನು ವಶಕ್ಕೆ ಪಡೆದರು. ಇಲ್ಲಿ ಅವರು ಬಂಧಿಸಲ್ಪಟ್ಟಿದ್ದ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದರು. ಮತ್ತು 9 ಜನ ಪೊಲೀಸರನ್ನು ವಶದಲ್ಲಿಟ್ಟುಕೊಂಡರು. ಈ ಘಟನೆಯ ಮಾಹಿತಿ ದೊರಕುತ್ತಲೇ ಪಾಕಿಸ್ತಾನ ಸೈನ್ಯವನ್ನು ಅಲ್ಲಿಗೆ ಕಳುಹಿಸಿದ್ದು, ಅವರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ. ತಾಲಿಬಾನಿ ಭಯೋತ್ಪಾದಕರು ಒಂದು ವ್ಹಿಡಿಯೋ ಪ್ರಸಾರ ಮಾಡಿದ್ದು, `ನಾವು 9 ಜನ ಪೊಲೀಸ ಅಧಿಕಾರಿಗಳನ್ನು ನಮ್ಮ ವಶದಲ್ಲಿಟ್ಟುಕೊಂಡಿದ್ದು, ವಾಯುಮಾರ್ಗದಿಂದ ಅಫಘಾನಿಸ್ತಾನಕ್ಕೆ ಹೋಗುವ ವ್ಯವಸ್ಥೆ ಮಾಡಬೇಕೆಂದು’ ಕೇಳಿದ್ದಾರೆ.
There is a hostage situation ongoing at the Counter-terrorism Department installation at Bannu Cantonment, an official said.#Taliban #Pakistanhttps://t.co/Jgcx9XYFJP
— ABP LIVE (@abplive) December 19, 2022
ಸಂಪಾದಕೀಯ ನಿಲುವುಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ. |