(ಅಂತೆ) ‘ನಾವು ಶಾಂತ ವಾಗಿರಲು ಅಣುಬಾಂಬ ತಯಾರಿಸಿಲ್ಲ’.

ಪಾಕಿಸ್ತಾನ ದ ಸಚಿವ ಶಾಜಿಯಾ ಮರ್ರಿ ಇವರಿಂದ ಭಾರತ ಕ್ಕೆ ಬೆದರಿಕೆ.

ಪಾಕಿಸ್ತಾನ ದ ಸಚಿವೆ ಶಾಜಿಯಾ ಮರ್ರಿ

ಇಸ್ಲಾಮಾಬಾದ್(ಪಾಕಿಸ್ತಾನ) -ಪಾಕಿಸ್ತಾನ ಕ್ಕೆ ಪ್ರತ್ಯುತ್ತರ ಕೊಡುವುದು ತಿಳಿದಿದೆ. ಪಾಕಿಸ್ತಾನ ಒಂದು ಕೆನ್ನೆಗೆ ಹೊಡೆದು ಕೊಂಡು ಮತ್ತೊಂದು ಗಲ್ಲ ವನ್ನು ತೋರಿಸುವ ದೇಶವಲ್ಲ. ಭಾರತದಿಂದ ಏನಾದರೂ ಕ್ರಮ ಕೈಗೊಂಡರೆ ಅದಕ್ಕೆ ಪ್ರತ್ಯುತ್ತರ ನೀಡುತ್ತದೆ. ಪಾಕಿಸ್ತಾನದ ಬಳಿ ಅಣುಬಾಂಬ ಇದೆ ಎನ್ನುವುದನ್ನು ಮರೆಯಬಾರದು. ನಮ್ಮ ಅಣುಶಕ್ತಿ ಸುಮ್ಮನೆ ಕುಳಿತು ಕೊಳ್ಳಲು ಇಲ್ಲ ಎನ್ನುವ ಶಬ್ದಗಳಲ್ಲಿ ಪಾಕಿಸ್ತಾನ ದ ಸಚಿವೆ ಶಾಜಿಯಾ ಮರ್ರಿ ಇವರು ಭಾರತ ಕ್ಕೆ ಬೆದರಿಕೆ ಹಾಕಿದ್ದಾರೆ. ‘ನಾನು ಅನೇಕ ಸಭೆ ಗಳಲ್ಲಿ ಮೋದಿ ಸರಕಾರ ಕಳುಹಿಸಿ ದ್ದ ಪ್ರತಿನಿಧಿಗಳನ್ನು ಎದುರಿಸಿದ್ದೇನೆ.’ಎಂದೂ ಅವರು ಹೇಳಿದರು. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನ್ನು’ಗುಜರಾತಿನ ಕೊಲೆಗಾರ’ ಮತ್ತು’ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನಮಂತ್ರಿ’ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಭಾರತದ ಲ್ಲಿ ಭುಟ್ಟೋ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧ ದ ಕಾರಣ ದಿಂದ ಬಿಲಾವಲ ಭುಟ್ಟೋ ರವರನ್ನು ಸಮರ್ಥಿಸಿಕೊಳ್ಳಲು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಶಾಜಿಯಾ ಮಾತನಾಡುತ್ತಿದ್ದರು. ಭಾರತದ ಸಚಿವರು ಸಂಯುಕ್ತ ರಾಷ್ಟ್ರದಲ್ಲಿ’ಪಾಕಿಸ್ತಾನ ಭಯೋತ್ಪಾದನೆ ಯ ಕೇಂದ್ರ ವಾಗಿದೆ’ಎಂದು ಹೇಳಿದ್ದಾರೆ. ಇದು ಅವರ ಪ್ರಚಾರ ವಾಗಿದೆ. (ಇದು ಪ್ರಚಾರ ವಲ್ಲ. ವಸ್ತು ಸ್ಥಿತಿ ಯಾಗಿದೆ ಎನ್ನುವುದು ಜಗತ್ತಿಗೂ ತಿಳಿದಿದೆ.-ಸಂಪಾದಕರು) ಇದು ಕೇವಲ ಇವತ್ತಿನ ದಲ್ಲ. ನಾವು ವಿರೋಧ ವಿದ್ದರೂ ಹೋರಾಡುತ್ತೇವೆ. ನಮಗೂ ನಮ್ಮ ದೇಶವನ್ನು ರಕ್ಷಿಸಬೇಕಿದೆ ದೇಶದ ವಿರುದ್ಧ ದ ತಪ್ಪು ಪ್ರಚಾರದ ಷಡ್ಯಂತ್ರ ವನ್ನು ಬಯಲು ಮಾಡಬೇಕಾಗಿದೆ. ನೀವು ಪಾಕಿಸ್ತಾನದ ಮೇಲೆ ಮೇಲಿಂದ ಮೇಲೆ ಆರೋಪ ಹೊರಿ‌ಸುತ್ತಿದ್ದರೆ, ಪಾಕಿಸ್ತಾನ ಶಾಂತ ವಾಗಿ ಕೇಳಿಸಿಕೊಂಡು ಕುಳಿತು ಕೊಳ್ಳುವುದಿಲ್ಲ. (ಪಾಕಿಸ್ತಾನ ಭಾರತ ದೊಂದಿಗೆ ನಡೆದ ಯುದ್ಧದಲ್ಲಿ 4ಸಲ ಸೋತಿದೆ. ಅದರ ವಿಭಜನೆ ಯೂ ಆಗಿದೆ‌. ಇದರಿಂದ ಬಾಯಿಗೆ ಬಂದಂತೆ ಬಡಬಡಿಸುವುದನ್ನು ಬಿಟ್ಟರೆ ಬೇರೇನೂ ಮಾಡಲು ಕ್ಷಮತೆ ಇಲ್ಲ ಎನ್ನುವುದು ಜಗತ್ತಿಗೂ ತಿಳಿದಿದೆ.-ಸಂಪಾದಕ ರು)

ಸಂಪಾದಕೀಯ ನಿಲುವು

ಆರ್ಥಿಕವಾಗಿ ದಿವಾಳಿ ಆಗುವ ಸ್ಥಿತಿಯಲ್ಲಿ ರುವ ಪಾಕಿಸ್ತಾನ ಈ ರೀತಿಯ ಬೆದರಿಕೆ ಹಾಕುವುದು ಎಂದರೆ ಅದು ಅಂತ್ಯ ತಲುಪುವಂತಿದೆ. ಪಾಕಿಸ್ತಾನದ ಬಳಿಯಿರುವ ಅಣುಬಾಂಬ ನಿಜವಾಗಿಯೂ ಕ್ಷಮತೆ ಹೊಂದಿದೆ ದೆಯೇ? ಎನ್ನುವುದು ಪ್ರಶ್ನೆ ಆಗಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಗೆ ‘ಅಣುಬಾಂಬ ಹೇಗೆ ಇರುತ್ತದೆ’ಎಂದೂ ಗೊತ್ತಿರಲಿಲ್ಲ. ಇಂತಹವರು ಭಾರತ ಕ್ಕೆ ಬೆದರಿಕೆ ಹಾಕುವುದು ಹಾಸ್ಯಾಸ್ಪದವೇ ಆಗಿದೆ.