ಇರಾನ್‌ನಲ್ಲಿ ಹಿಜಾಬ್ ನ್ನು ಪ್ರತಿಭಟಿಸಿದ್ದರಿಂದ ‘ಆಸ್ಕರ್’ ಪ್ರಶಸ್ತಿ ವಿಜೇತ ನಟಿಯ ಬಂಧನ

ಹಿಜಾಬ್ ಅನ್ನು ವಿರೋಧಿಸಿದ್ದರಿಂದ ಖ್ಯಾತ ಇರಾನ್ ನಟಿ ತರಾನೆಹ ಅಲಿದೋಸ್ತಿ

ಟೆಹ್ರಾನ್ (ಇರಾನ್) – ಇರಾನ್‌ನಲ್ಲಿ ಹಿಜಾಬ್ ಅನ್ನು ವಿರೋಧಿಸಿದ್ದರಿಂದ ಖ್ಯಾತ ಇರಾನ್ ನಟಿ ತರಾನೆಹ ಅಲಿದೋಸ್ತಿ ಅವರನ್ನು ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ. ಹಿಜಾಬ್ ನಿಷೇಧವನ್ನು ಬೆಂಬಲಿಸಿ ಬೀದಿಗಿಳಿದ ನಾಗರಿಕರ ಹತ್ಯೆಯನ್ನು ಅಲಿದೋಸ್ತಿ ಟೀಕಿಸಿದ್ದರು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನೂ ಪ್ರಸಾರ ಮಾಡಿದ್ದರು. ಅಲಿದೋಸ್ತಿ ಅವರು ಸಾರ್ವಜನಿಕರ ಭಾವನೆಗಳನ್ನು ಪ್ರಚೋದಿಸಿದ್ದಾರೆ ಎಂದು ಇರಾನ್ ಸರಕಾರ ಆರೋಪಿಸಿದೆ.

‘ದಿ ಸೇಲ್ಸ್‌ಮ್ಯಾನ್’ ಚಿತ್ರಕ್ಕಾಗಿ ಅಲಿದೋಸ್ತಿ ಅವರಿಗೆ ೨೦೧೬ ರ ಅತ್ಯುತ್ತಮ ನಟಿ ಎಂದು ಆಸ್ಕರ್ ಪ್ರಶಸ್ತಿ ದೊರಕಿತ್ತು. ಸದ್ಯ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಮುಚ್ಚಲಾಗಿದೆ. ಅಲಿದೋಸ್ತಿ ಅವರ ತಂದೆ ಹಮೀದ್ ಇರಾನ್ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿದ್ದರು ಮತ್ತು ವಿದೇಶಿ ತಂಡಗಳಿಗೆ ಆಡಿದ ಮೊದಲ ಇರಾನ್ ಆಟಗಾರರಾಗಿದ್ದರು.