ಕರ್ನಾಟಕದಲ್ಲಿನ ದತ್ತಪೀಠದ ಮಾರ್ಗದಲ್ಲಿ ಮೊಳೆಗಳನ್ನು ಹಾಕಿದ ಇಬ್ಬರು ಮತಾಂಧರ ಬಂಧನ !

ಮಹಂಮದ ಶಾಹಬಾಜ ಮತ್ತು ವಾಹಿದ ಹುಸೇನ

ಚಿಕ್ಕಮಗಳೂರು : ದತ್ತಜಯಂತಿಯ ಸಮಯದಲ್ಲಿ ದತ್ತಪೀಠದ ಕಡೆಗೆ ಹೋಗುವ ಮಾರ್ಗದಲ್ಲಿ ಅಪಘಾತಗಳಾಗಬೇಕು, ಎಂಬ ಉದ್ದೇಶದಿಂದ ಅಪಾಯಕಾರಿ ಅಪಘಾತಗಳು ನಡೆಯುವ ತಿರುವುಗಳಲ್ಲಿ ಮೊಳೆಗಳನ್ನು ಹಾಕಿರುವ ಇಬ್ಬರು ಮತಾಂಧರನ್ನು ಬಂಧಿಸಲಾಗಿದೆ. ‘ಓಡಿ ಹೋಗಿರುವ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು’, ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ಮಾಹಿತಿ ನೀಡುವಾಗ ಜಿಲ್ಲಾ ಪೊಲೀಸ ಅಧೀಕ್ಷಕರಾದ ಉಮಾ ಪ್ರಶಾಂತರವರು ಮಾತನಾಡುತ್ತ, ಈ ಸಂದರ್ಭದಲ್ಲಿ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದ ನಂತರ ಪ್ರಕರಣದ ತನಿಖೆಗಾಗಿ ಸ್ವತಂತ್ರ ದಳವನ್ನು ರಚಿಸಲಾಯಿತು. ನಗರದಲ್ಲಿನ ಒಂದು ಅಂಗಡಿಯಿಂದ ಒಂದೇ ಮಾದರಿಯ ೪ ಕಿಲೊ ಮೊಳೆಗಳನ್ನು ಇಬ್ಬರು ಖರೀದಿಸಿರುವ ಮಾಹಿತಿ ದೊರೆಯುತ್ತಲೇ ದುಬೈನಗರದಲ್ಲಿನ ಮಹಂಮದ ಶಾಹಬಾಜ (ವಯಸ್ಸು ೨೯ ವರ್ಷ) ಮತ್ತು ವಾಹಿದ ಹುಸೇನ (ವಯಸ್ಸು ೨೧ ವರ್ಷ)ರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಸಹಭಾಗಿಯಾಗಿರುವ ಮಾಹಿತಿ ದೊರೆತಿದ್ದು ಅವರು ಓಡಿಹೋಗಿದ್ದಾರೆ. ಅವರ ಹುಡುಕಾಟ ನಡೆದಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ದತ್ತಪೀಠದಲ್ಲಿ ಈಗಾಗಲೇ ಮತಾಂಧರು ಅತಿಕ್ರಮಣ ಮಾಡಿದ್ದಾರೆ; ಆದರೆ ಈಗ ಹಿಂದೂಗಳು ಅಲ್ಲಿಗೆ ಹೋಗದಿರಲು ಮತಾಂಧರು ಎಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !