ಜಮಶೇದಪುರ (ಜಾರ್ಖಂಡ್) ಇಲ್ಲಿಯ ಗುರುದ್ವಾರದಲ್ಲಿ ಖಲಿಸ್ತಾನಿ ಭಯೋತ್ಪಾದಕರನ್ನು ಹುತಾತ್ಮರೆಂದು ಹೇಳುವ ಭಿತ್ತಿ ಪತ್ರಗಳ ಪ್ರಸಾರ

ಭಾರತೀಯ ಸೈನ್ಯಕ್ಕೆ `ಹಿಂದುತ್ವ ಭಯೋತ್ಪಾದಕರು’ ಎನ್ನಲಾಗಿದೆ !

ಜಮಶೇದಪುರ (ಜಾರ್ಖಂಡ್) – ಇಲ್ಲಿಯ ಮಾನಗೋ ಗುರುದ್ವಾರದಲ್ಲಿ ಭಿತ್ತಿ ಪತ್ರಗಳನ್ನು ಹಚ್ಚಲಾಗಿದೆ. ಇದರಲ್ಲಿ ಭಾರತೀಯ ಸೈನ್ಯಕ್ಕೆ `ಹಿಂದುತ್ವ ಭಯೋತ್ಪಾದಕg’ೆಂದು ಹೇಳಲಾಗಿದೆ. ಭಾರತೀಯ ವಾಯುದಳ ಮತ್ತು ನೌಕಾದಳ ಇವರನ್ನು ಸಾವಿರ ಸಿಖರ ಹತ್ಯೆ ಮಾಡಿರುವವರು ಎಂದು ಹೇಳಲಾಗಿದೆ. ಇದರಲ್ಲಿ ಖಲಿಸ್ತಾನಿ ಭಯೋತ್ಪಾದಕ ಜನರಲ್ ಸಿಂಹ ಬಿಂದ್ರನ್ ವಾಲೆ ಇವನ ಛಾಯಾ ಚಿತ್ರ ಇದೆ. ಅದರ ಕೆಳಗೆ `ಮಹಾನ ಶಹೀದ್’ ಎಂದೂ ಬರೆಯಲಾಗಿದೆ. ಇದರ ಜೊತೆಗೆ ಜನರಲ್ ಶಾಬೇಗ ಸಿಂಹ, ಭಾಯಿ ಸತವಂತ ಸಿಂಹ, ಜಗತಾರ ಸಿಂಹ ಹವಾರಾ, ಬಲವಂತ ಸಿಂಹ ರಾಜೋಆನಾ , ದವಂದರ್ ಪಾಲಸಿಂಹ ಬುಲ್ಲರ್, ದಿಲಾವರ್ ಸಿಂಹ ಬಬ್ಬರ್ ಮುಂತಾದ ಖಲಿಸ್ತಾನಿ ಭಯೋತ್ಪಾದಕರ ಹೆಸರುಗಳು ಕೂಡ ಇದೆ. ಈ ಪ್ರಕರಣದಲ್ಲಿ ಪೊಲೀಸರ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಅವರ ಹೇಳಿಕೆಯಾಗಿ. (ನಿದ್ರಿಸಿರುವ ಜಾರ್ಖಂಡ್ ಪೊಲೀಸ್! ಇಂತಹ ಪೊಲೀಸರು ಭಯೋತ್ಪಾದಕರಿಂದ ಜನರನ್ನು ಎಂದಾದರೂ ರಕ್ಷಣೆ ಮಾಡಲು ಸಾಧ್ಯವೇ ?-ಸಂಪಾದಕರು)

ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ ಕೂಡ ಗುರುದ್ವಾರದಿಂದ ಭಿತ್ತಿ ಪತ್ರಗಳು ತೆಗೆದು ಹಾಕಲು ನಿರಾಕರಣೆ !

ಈ ವಿಷಯದ ಬಗ್ಗೆ ವಿಶ್ವ ಹಿಂದೂ ಪರಿಷತ್ತಿನ ಜಾರ್ಖಂಡ್ ರಾಜ್ಯ ಪ್ರಚಾರ ಪ್ರಸಾರ ಪ್ರಮುಖ ಸಂಜಯ ಕುಮಾರ ಇವರು, ಈ ಭಿತ್ತಿ ಪತ್ರಗಳಿಗೆ ವಿರೋಧ ಮಾಡಲಾಗಿದೆ. ಈ ವಿಷಯವಾಗಿ ಗುರುದ್ವಾರದ ವ್ಯವಸ್ಥಾಪಕರಿಗೆ ಹೇಳಿಯೂ ಕೂಡ ಅವರು ಭಿತ್ತಿ ಪತ್ರ ತೆಗೆಯಲು ನಿರಾಕರಿಸಿದರು, ಈ ಭಿತ್ತಿ ಪತ್ರದ ಬಗ್ಗೆ ಸ್ಥಳೀಯ ಆಡಳಿತಕ್ಕೆ ಕೂಡ ಮಾಹಿತಿ ಇದೆ ; ಆದರೆ ಅವರಿಂದ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಪೊಲೀಸರು ಕೂಡ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಜಾರ್ಖಂಡ ಗುರುದ್ವಾರ ಪ್ರಬಂಧಕ ಕಮಿಟಿಯ ಅಧ್ಯಕ್ಷರಿಂದ ಖಲಿಸ್ತಾನಿ ಭಯೋತ್ಪಾದಕರ ಸಮರ್ಥನೆ!

ಜಾರ್ಖಂಡ ಗುರುದ್ವಾರ ಪ್ರಬಂಧಕ ಕಮಿಟಿಯ ಅಧ್ಯಕ್ಷ ಸರದಾರ ಶೈಲೇಂದ್ರ ಸಿಂಹ ಇವರು, ಜರ್ನೆಲ್ ಸಿಂಹ ಬಿಂದ್ರನ ವಾಲೆ ಇವರ ಛಾಯಾಚಿತ್ರ ಹಚ್ಚಲಾಗಿದೆ. ಅವರನ್ನು ಸಿಕ್ಖ್ ಸಮಾಜ ಹುತಾತ್ಮ ಎನ್ನುತ್ತದೆ. ನಿಮ್ಮ ದೃಷ್ಟಿಯಿಂದ ಅವರು ಭಯೋತ್ಪಾದಕರು ಇರಬಹುದು, ಆದರೆ ಸಿಕ್ಖ್ರ ದೃಷ್ಟಿಯಿಂದ ಅಲ್ಲ. ಅವನ ಛಾಯಾಚಿತ್ರಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವನಿಗೆರಿತರ ನೂರಾರು ಹುತಾತ್ಮರಲ್ಲಿ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಂಜಾಬದಲ್ಲಿನ ಖಲಿಸ್ತಾನಿ ಭಯೋತ್ಪಾದನೆಯ ಹುಳು ಈಗ ಬೇರೆ ರಾಜ್ಯಗಳಲ್ಲಿ ಕೂಡ ಪಸರಿಸುತ್ತಿದೆ. ಇದರ ಭೀಕರ ಪರಿಣಾಮ ಅನುಭವಿಸುವ ಮೊದಲು ಇಂತಹ ಪ್ರವೃತ್ತಿಯನ್ನು ಚಿವುಟಿಹಾಕಬೇಕು !