ಭಾರತಕ್ಕಿಂತಲೂ ಚೀನಾದ ಸೈನಿಕರಿಗೆ ಹೆಚ್ಚಿನ ಹಾನಿ ! – ಜಾಗತಿಕ ಮಾಧ್ಯಮಗಳ ವಾರ್ತೆ

ನವದೆಹಲಿ – ಅರುಣಾಚಲಪ್ರದೇಶದ ತವಾಂಗನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ಆದ ಸಂಘರ್ಷದ ವಾರ್ತೆಯನ್ನು ಜಾಗತಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ಇದರಲ್ಲಿ ಅವರು ಭಾರತಕ್ಕಿಂತಲೂ ಚೀನಾದ ಸೈನಿಕರಿಗೆ ಹೆಚ್ಚು ಹಾನಿಯಾಗಿರುವುದಾಗಿ ಹೇಳಿದ್ದಾರೆ.

೧. ಹಾಂಗ್‌ಕಾಂಗ್‌ನ ‘ಸೌಥ ಚಾಯ್ನಾ ಮಾರ್ನಿಂಗ್ ಪೋಸ್ಟ್‌’ನ ವಾರ್ತೆಯಲ್ಲಿ ಹೀಗೆ ಹೇಳಿದೆ, ಸಂಘರ್ಷವಾದ ನಂತರ ಎರಡೂ ಸೈನ್ಯಗಳು ತಮ್ಮ ಭಾಗಕ್ಕೆ ಮರಳಿದವು. ಇದರಲ್ಲಿ ಭಾರತದ ೨೦ ಸೈನಿಕರು ಗಾಯಗೊಂಡಿದ್ದಾರೆ. ಭಾರತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ಸೈನಿಕರು ಗಾಯಗೊಂಡಿದ್ದಾರೆ. ಭಾರತ ಮತ್ತು ಅಮೇರಿಕಾದಲ್ಲಿರುವ ಚೀನಾದ ರಾಯಭಾರಿ ಕಛೇರಿಯು ಈ ಘರ್ಷಣೆಯ ಬಗ್ಗೆ ಮೌನ ತಾಳಿದೆ. ಅಮೇರಿಕಾದ ವಿದೇಶ ಮಂತ್ರಾಲಯವೂ ಈ ಬಗ್ಗೆ ಏನೂ ಹೇಳಿಲ್ಲ.

೨. ಬಿಬಿಸಿಯು, ಈ ಸಂಘರ್ಷದಲ್ಲಿ ಭಾರತಕ್ಕಿಂತಲೂ ಚೀನಾದ ಸೈನಿಕರಿಗೆ ಹೆಚ್ಚಿನ ಹಾನಿಯಾಗಿದೆ, ಎಂದು ಹೇಳಿದೆ.

೩. ಜರ್ಮನಿಯಲ್ಲಿರುವ ‘ಡಿ.ಡಬ್ಲೂ.’ಯು ವಾರ್ತಾಸಂಸ್ಥೆ ಮತ್ತು ಭಾರತೀಯ ಸೈನ್ಯದಿಂದ ದೊರೆತ ಮಾಹಿತಿಯ ಆಧಾರ ನೀಡುತ್ತ ವಾರ್ತೆಯನ್ನು ಬಿತ್ತರಿಸಿದೆ. ಇದರಲ್ಲಿ ‘ಚೀನಾದ ಸೈನಿಕರು ಗಡಿಯ ಅತ್ಯಂತ ಸಮೀಪ ಬಂದಿದ್ದರು. ಅನಂತರ ಭಾರತೀಯ ಸೈನಿಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ಎಂದು ಹೇಳಿದೆ.

೪. ಪಾಕಿಸ್ತಾನದಲ್ಲಿನ ‘ಡಾನ್‌’ನಲ್ಲಿ ಔಲಿಯಲ್ಲಿ ನಡೆದ ಸೈನ್ಯ ತಾಲೀಮು ಚೀನಾ ಮತ್ತು ಭಾರತದ ನಡುವಿನ ಸಂಘರ್ಷದ ಕಾರಣವಾಗಿದೆ ಎಂದು ಹೇಳಿದೆ. ಇದರಲ್ಲಿ ಎರಡೂ ಬದಿಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ, ಎಂದು ಹೇಳಲಾಗಿದೆ.