ರಂಗಾರೆಡ್ಡಿ (ತೆಲಂಗಾಣ) ಇಲ್ಲಿ ಮನೆಯೊಳಗೆ ನುಗ್ಗಿ ಡಾಕ್ಟರ್ ಯುವತಿಯನ್ನು ಅಪಹರಿಸಿದ ೧೦೦ ಜನರು!

ಪೊಲೀಸರಿಂದ ಕೆಲವೇ ಗಂಟೆಯೊಳಗೆ ಯುವತಿಯ ಬಿಡುಗಡೆ !

ರಂಗಾರೆಡ್ಡಿ (ತೆಲಂಗಾಣ):  ಇಲ್ಲಿಯ ಆದಿಬಾಟಲಾ ಪ್ರದೇಶದಲ್ಲಿನ ೨೪ ವರ್ಷದ ಡಾಕ್ಟರ್ ಯುವತಿಯನ್ನು ೧೦೦ ಕ್ಕೂ ಹೆಚ್ಚಿನ ಜನರು ಮನೆಗೆ ನುಗ್ಗಿ ಅಪಹರಿಸಿದ್ದರು. ಯುವತಿಯ ತಂದೆಗೆ ಹೊಡೆಯಲಾಗಿತ್ತು ಹಾಗೂ ಅವರ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ಪೊಲೀಸರು ಕೆಲವೇ ಗಂಟೆಯಲ್ಲಿ ಯುವತಿಯನ್ನು ಬಿಡುಗಡೆಗೊಳಿಸಿ ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ಯುವತಿಯ ಹೆಸರು ವೈಶಾಲಿ ಎಂದಾಗಿದ್ದು ಆಕೆ (ಹಲ್ಲಿನ ಡಾಕ್ಟರ) ದಂತ ವೈದ್ಯ ಆಗಿದ್ದಾಳೆ.

ಕುಟುಂಬದವರು ನವೀನ ರೆಡ್ಡಿ ಎಂಬ ವ್ಯಕ್ತಿಯ ಮೇಲೆ ಗುಂಪಿನ ನೇತೃತ್ವ ವಹಿಸಿದ ಬಗ್ಗೆ ಮತ್ತು ಹುಡುಗಿಯನ್ನು ಅಪಹರಿಸಿರುವ ಆರೋಪ ಮಾಡಿದ್ದಾರೆ. ಅವನು ಈ ಯುವತಿಗೆ ತನ್ನ ಜೊತೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನು. ಪೊಲೀಸರು ಮುಖ್ಯ ಆರೋಪಿ ನವೀನನ ಜೊತೆಗೆ ೧೮ ಜನರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?