ಸರಿತಾ ಎಂಬ ಹಿಂದೂ ಮಹಿಳೆಯನ್ನು ಆಕೆಯ ಮುಸ್ಲಿಂ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆಂದು ಆರೋಪ !

ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸರಿತಾ ಉಪನಾಮ ಸಯೀದಾ ಎಂಬ ಯುವತಿಯು ಡಿಸೆಂಬರ್ ೩ ರಂದು ಸೀತಾಪುರ ಜಿಲ್ಲೆಯ ಮಚ್ರೆಹತಾ ಪ್ರದೇಶದಲ್ಲಿ ನಿಧನರಾದರು. ಸಂತ್ರಸ್ತೆಯ ಹಿಂದೂ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಹಿಂದುತ್ವ ಸಂಘಟನೆಗಳು’ ಈ ಪ್ರಕರಣವು ಲವ್ ಜಿಹಾದ್ ಆಗಿದೆ ಮತ್ತು ಅವಳು ಅದರ ಬಲಿಪಶುವಾಗಿದ್ದಾಳೆ’ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆಕೆಯ ತಂದೆ ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದಾರೆ. ಈ ವೀಡಿಯೊದಲ್ಲಿ, ’ನನ್ನ ಮಗಳನ್ನು ಆಕೆಯ ಪತಿ ಯೂನುಸ್ ಮತ್ತು ಅವನ ಕುಟುಂಬವು ಕೊಲೆ ಮಾಡಿದೆ’ ಎಂದು ತಂದೆ ಹೇಳುತ್ತಿರುವುದನ್ನು ಕಾಣಬಹುದು. ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಗ್ಯೂ, ಸರಿತಾ ಅವರ ಸಾವು ಮಾನಸಿಕ ಅಸ್ವಸ್ಥತೆಯಿಂದ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ.

ಯೂನುಸ್ ಎರಡು ವರ್ಷಗಳ ಹಿಂದೆ ಸರಿತಾಗೆ ಏನೋ ತಿನ್ನಲು ನೀಡುವ ಮೂಲಕ ಅವಳನ್ನು ಅಪಹರಿಸಿದ್ದಾನೆ ಎಂದು ಸರಿತಾಳ ತಂದೆ ಆರೋಪಿಸಿದ್ದಾರೆ. ಅವರು ಸರಿತಾ ಅವರ ಅಶ್ಲೀಲ ವೀಡಿಯೊಗಳನ್ನು ಸಹ ಮಾಡಿದ್ದನು. ಅವನು ಅದನ್ನು ಅವಳಿಗೆ ಬೆದರಿಕೆ ಹಾಕುತ್ತಿದ್ದನು. ಅವನು ಅವಳನ್ನು ಮದುವೆಯಾದನು. ನಂತರ ಆಕೆಯನ್ನು ಗರ್ಭಪಾತಕ್ಕೆ ಒತ್ತಾಯಿಸಲಾಯಿತು.

ಸಂಪಾದಕೀಯ ನಿಲುವು

ಈ ಆರೋಪಗಳಲ್ಲಿ ಸತ್ಯಾಂಶವಿದ್ದರೆ, ಹಿಂದೂಗಳ ಮೂಲದಲ್ಲಿ ಉದ್ಭವಿಸಿರುವ ಲವ್ ಜಿಹಾದ್ ವಿರುದ್ಧ ಕೇವಲ ಅದರ ವಿರುದ್ಧ ಕಾನೂನು ಮಾಡಿ ಉಪಯೋಗವಿಲ್ಲ, ಅದರ ಮುಂದೆ ಹೋಗಿ ಅದರ ವಿರುದ್ಧ ಕಠಿಣ ಪರಿಹಾರೋಪಾಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹಿಂದೂಗಳಿಗೆ ಬಲವಾಗಿ ಅನಿಸುತ್ತದೆ!