ಚಿಕ್ಕಮಗಳೂರು ಇಲ್ಲಿಯ ದತ್ತಪೀಠಕ್ಕಾಗಿ ಸರಕಾರದಿಂದ ೨ ಹಿಂದೂ ಪುರೋಹಿತರ ನೇಮಕ !

ಚಿಕ್ಕಮಗಳೂರು – ಇಲ್ಲಿಯ ದತ್ತಪೀಠಕ್ಕೆ ೨ ಹಿಂದೂ ಪುರೋಹಿತರ ನೇಮಕ ಮಾಡುವಂತೆ ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ಕಾರ್ಯಕಾರಿ ಮಂಡಳಿಯ ಶಿಫಾರಸಿನ ಪ್ರಕಾರ ಮೂಲತಃ ಶೃಂಗೆರಿಯವರಾಗಿದ್ದ ಶ್ರೀಕಾಂತ ಮತ್ತು ಚಿಕ್ಕಬಳ್ಳಾಪುರದ ಸಂದೀಪ ಎಂಬ ೨ ಹಿಂದೂ ಪುರೋಹಿತರ ನೇಮಕ ಮಾಡಲಾಗಿದೇ ಎಂದು ರಾಜ್ಯ ಸರಕಾರ ಘೋಷಿಸಿದೆ. ಪುರೋಹಿತರ ನೇಮಕಕ್ಕೆ ಸಂಬಂಧದಲ್ಲಿ ರಾಜ್ಯ ಸರಕಾರ ಕಾರ್ಯಕಾರಿ ಸಮಿತಿಯ ಸ್ಥಾಪನೆ ಮಾಡಿತ್ತು. ಈ ಕಾರ್ಯಕಾರಿ ಸಮಿತಿಯಲ್ಲಿ ಒಬ್ಬ ಮುಸಲ್ಮಾನ ಸದಸ್ಯನ ಸಹಿತ ೮ ಜನರು ಇದ್ದರು. ಪುರೋಹಿತರ ನೇಮಕದ ಅಧಿಕಾರ ಕಾರ್ಯಕಾರಿ ಮಂಡಳಿಗೆ ಇರುವುದೆಂದು ರಾಜ್ಯ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದರ ಪ್ರಕಾರ ಕಾರ್ಯಕಾರಿ ಸಮಿತಿಯು ೨ ಅರ್ಚಕರ ನೇಮಕ ಮಾಡಿ ಆದೇಶ ನೀಡಿದರು. ಇದು ದತ್ತಪೀಠವಲ್ಲಿ ಅಲ್ಲ ಬಾಬಾ ಬುಡನ್ ಗಿರಿ ಇವರ ದರ್ಗಾ ಇರುವುದೆಂದು ಮುಸಲ್ಮಾನರು ದಾವೆ ಮಾಡಿದ್ದಾರೆ. ಇಲ್ಲಿ ಹಿಂದೂ ಮತ್ತು ಮುಸಲ್ಮಾನರು ಇಬ್ಬರು ದರ್ಶನಕ್ಕಾಗಿ ಬರುತ್ತಿದ್ದರು.

ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ದತ್ತಪೀಠದಲ್ಲಿ ದತ್ತ ಜಯಂತಿ ಆಚರಿಸಲಾಗುವುದರಿಂದ ಈ ಸಂದರ್ಭದಲ್ಲಿ ಇಲ್ಲಿಯ ಪರಿಸರದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗಳಿಗೆ ಐದು ದಿನಗಳ ಕಾಲ ನಿರ್ಬಂಧಿಸಲಾಗಿದೆ. ಈ ಕುರಿತು ಪ್ರವಾಸಿಗಳಿಗೆ ಮಾಹಿತಿ ನೀಡುತ್ತಾ ಜಿಲ್ಲಾಧಿಕಾರಿ ಕೆ.ಎನ್. ರಮೇಶ ಇವರು, ಈ ಕಾಲಾವಧಿಯಲ್ಲಿ ಉಪಹಾರ ಗೃಹ, ರೆಸಾರ್ಟ್ ಮುಂತಾದ ಸ್ಥಳದಲ್ಲಿ ಕಾಯ್ದಿರಿಸಲಾಗಿದ್ದರೆ ಅಲ್ಲಿ ವಾಸ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಕರ್ನಾಟಕದಲ್ಲಿನ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ !