`ಯುದ್ಧ ನಡೆದರೆ ಸಂಪೂರ್ಣ ಶಕ್ತಿಯಿಂದ ಎದುರಿಸುವೆವು ! (ಅಂತೆ)

ಪಾಕಿಸ್ತಾನದ ನೂತನ ಸೈನ್ಯದಳ ಪ್ರಮುಖನ ದರ್ಪದ ಹೇಳಿಕೆ !

ಪಾಕಿಸ್ತಾನದ ನೂತನ ಸೈನ್ಯದಳ ಪ್ರಮುಖ ಜನರಲ್ ಅಸಿಮ ಮುನೀರ್

ಇಸ್ಲಾಮಾಬಾದ (ಪಾಕಿಸ್ತಾನ) – ನಾನು, ಪಾಕಿಸ್ತಾನದ ಸೈನ್ಯ ತನ್ನ ಭೂಮಿಯ ಭಾಗದ ಪ್ರತಿಯೊಂದು ಇಂಚಿನ ಸಂರಕ್ಷಣೆ ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಮ್ಮ ಮೇಲೆ ಯುದ್ಧ ಹೇರಿದರೆ ಶತ್ರುಗಳನ್ನು ಸೋಲಿಸುವ ಕ್ಷಮತೆ ನಮ್ಮಲ್ಲಿದೆ. ಯಾವುದೇ ಚಟುವಟಿಕೆ ನಡೆಸಿದರೇ ಪಾಕಿಸ್ತಾನದಿಂದ ಸಂಪೂರ್ಣ ಶಕ್ತಿಯಿಂದ ಎದುರಿಸಲಾಗುವುದು, ಎಂದು ಪಾಕಿಸ್ತಾನದ ನೂತನ ಸೈನ್ಯದಳ ಪ್ರಮುಖ ಜನರಲ್ ಅಸಿಮ ಮುನೀರ್ ಇವರು ದರ್ಪದಿಂದ ಹೇಳಿಕೆ ನೀಡಿದರು. ಅಸಿಮ ಮುನಿರ್ ಇವರು ಡಿಸೆಂಬರ್ ೩ ರಂದು ಭಾರತಕ್ಕೆ ತಾಗಿರುವ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಗಡಿ ಪ್ರದೇಶದಲ್ಲಿರುವ ಚೌಕಿಗಳ ಪರಿಶೀಲನೆ ಮಾಡಿದರು.

ಅದರ ನಂತರ ಪಾಕಿಸ್ತಾನಿ ಸೈನಿಕರಿಗೆ ಸಂಬೋಧಿಸುವಾಗ ಅಸಿಮ ಮುನಿರ ಇವರು, ಭಾರತ ಗಿಲಗಿಟ್, ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇದರ ಬಗ್ಗೆ ನೀಡಿರುವ ಹೇಳಿಕೆ ಬೇಜವಾಬ್ದಾರಿತನವಾಗಿದೆ, ಎಂದು ಹೇಳಿದರು. ಭಾರತವು ಇತ್ತಿಚೆಗೆ `ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂಪಡೆಯುವೇವು, ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಕಳೆದ ೭೫ ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಜೊತೆ ನಡೆದ ೪ ಯುದ್ಧದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದೆ. ಪಾಕಿಸ್ತಾನದ ೨ ಭಾಗವಾಗಿ ವಿಭಜನೆ ಆಗಿದೆ. ಆದರೂ ಸಹ ಪಾಕಿಸ್ತಾನದ ಅಹಂಕಾರ ಕಡಿಮೆ ಆಗಿಲ್ಲ. ಪಾಕಿಸ್ತಾನ ಸಂಪೂರ್ಣವಾಗಿ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಇದು ಹೀಗೆ ನಡೆಯುವುದು !