ತಮಿಳುನಾಡಿನ ಐತಿಹಾಸಿಕ ಅರುಣಾಚಲೇಶ್ವರ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಯ ಮುಖದ ಮೇಲೆ ಸಿಸಿ ಟಿವಿ ಕ್ಯಾಮರಾ ಅಳವಡಿಕೆ !

ಭಕ್ತರ ವಿರೋಧದ ನಂತರ ಕ್ಯಾಮರಾ ತೆರವು !

ತಿರುವಣ್ಣಾಮಲೈ (ತಮಿಳುನಾಡು) – ಇಲ್ಲಿಯ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಒಂದು ಮೂರ್ತಿಯ ಮುಖದ ಮೇಲೆ ನೇರವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಭಾಜಪ ಇದರ ಬಗ್ಗೆ ರಾಜ್ಯದ ದ್ರಮುಕ (ದ್ರಾವಿಡ ಮುನ್ನೆತ್ರಿ ಕಳಘಮ – ದ್ರಾವಿಡ ಪ್ರಗತಿ ಸಂಘ) ಸರಕಾರವನ್ನು ಟೀಕಿಸಿತು. ಭಕ್ತರ ವಿರೋಧದ ನಂತರ ಕ್ಯಾಮರಾ ತೆಗೆಯಲಾಯಿತು.

ಈ ದೇವಸ್ಥಾನದಲ್ಲಿ ಡಿಸೆಂಬರ್ ೫ ಮತ್ತು ೬ ರಂದು ದೀಪಮ್ ಉತ್ಸವ ನಡೆಯಲಿದೆ. ಆ ಸಮಯದಲ್ಲಿ ೩೦ ಲಕ್ಷ ಭಕ್ತರು ಬರುವ ಸಾಧ್ಯತೆ ಇದೆ. ಡಿಸೆಂಬರ್ ೬, ೧೯೯೨ ರಂದು ಬಾಬ್ರಿ ಮಸೀದಿ ನೆಲಸಮ ಮಾಡಲಾಯಿತು. ಆದ್ದರಿಂದ ದೇಶಾದ್ಯಂತ ಬಹಳಷ್ಟು ಮುಸಲ್ಮಾನರು ಮತ್ತು ಜಾತ್ಯತೀತರು ಈ ದಿನದಂದು `ಕಪ್ಪು ದಿನ’ ಎಂದು ಆಚರಿಸುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸರು ಸುರಕ್ಷತೆಗಾಗಿ ದೇವಸ್ಥಾನದಲ್ಲಿ ೫೫ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಇದರಲ್ಲಿ ಒಂದು ಸಿಸಿ ಟಿವಿ ಕ್ಯಾಮೆರಾ ದೇವಸ್ಥಾನದ ಒಳಗೆ ಇರುವ ೭೦ ಅಡಿ ಎತ್ತರದ ಕಟ್ಟೈ ಗೋಪುರಂ ನಲ್ಲಿನ ದ್ವಾರಪಾನಕನ ಮೂರ್ತಿಯ ಮುಖದ ಮೇಲೆ ಅಳವಡಿಸಿದ್ದರು. ಯಾವಾಗ ಭಕ್ತರು ಇದನ್ನು ನೋಡಿದರೋ ಆಗ ಅವರು ವಿರೋಧಿಸಿ ಗದ್ದಲ ಮಾಡಿದರು. ಅದರ ನಂತರ ಕ್ಯಾಮೆರಾ ತೆರವುಗೊಳಿಸಲಾಯಿತು; ಆದರೆ ಅದರಿಂದ ಮೂರ್ತಿಯ ಮುಖ ವಿದ್ರುಪವಾಯಿತು. ಅದರ ನಂತರ ಅಧಿಕಾರಿಗಳು ಮೂರ್ತಿಯ ಮುಖದ ಮೇಲೆ ಪ್ರಕ್ರಿಯೆ ನಡೆಸಿ ಅದನ್ನು ವ್ಯವಸ್ಥಿತವಾಗಿ ಮಾಡಿಕೊಂಡರು.

ದ್ರಮುಕ ಸರಕಾರಕ್ಕೆ ಮೂರ್ತಿಯ ಬಗ್ಗೆ ಗೌರವ ಇಲ್ಲ ! – ಭಾಜಪ

ಭಾಜಪದ ಪ್ರದೇಶ ಅಧ್ಯಕ್ಷ ಅಣ್ಣಾಮಲೈ ಇವರು, ರಾಜ್ಯದ ದ್ರಮುಕ್ ಸರಕಾರ ಹಿಂದೂಗಳ ದೇವತೆಗಳ ಮೂರ್ತಿಯನ್ನು ಗೌರವಿಸುವುದಿಲ್ಲ. ದೇವತೆಗಳ ಮೂರ್ತಿಯ ಮುಖದ ಮೇಲೆ ಮೊಳೆ ಹೊಡೆದು ಅಲ್ಲಿ ಸಿಸಿಟಿವಿ ಕ್ಯಾಮೆರ ಅಳವಡಿಸಿದ್ದರು; ಇದರಿಂದ ವ್ಯವಸ್ಥಾಪಕರು ನಾಸ್ತಿಕ, ಹಿಂದೂ ಧಾರ್ಮಿಕ ಮತ್ತು ಧರ್ಮಾರ್ಥ ರಕ್ಷಣೆ ಇಲಾಖೆ’ ಮಾಡುತ್ತಿದೆ. ಯಾವ ವ್ಯಕ್ತಿಗೆ ತಲೆ ಇದೆ ಅವರು ಹೀಗೆ ಎಂದಿಗೂ ಮಾಡುವುದಿಲ್ಲ. ದ್ರುಮುಕ ಸರಕಾರವು ಇದು ಉದ್ದೇಶಪೂವFಕವಾಗಿ ಮಾಡಿರುವ ಕೃತಿಯಾಗಿದೆ; ಏಕೆಂದರೆ ಅಲ್ಪಸಂಖ್ಯಾತರನ್ನು ಸಂತೋಷಪಡಿಸುವ ಪ್ರಯತ್ನ ಈ ಸರಕಾರ ಮಾಡುತ್ತಿದೆ. `ಈಗ ಮೂರ್ತಿಯ ಹಾನಿಯ ಹೊಣೆ ಯಾರು ತೆಗೆದುಕೊಳ್ಳುವರು ?’, ಎಂಬ ಪ್ರಶ್ನೆ ಅವರು ಕೇಳಿದರು.

ಅಣ್ಣಾಮಲೈ ಇವರು, ದೇವತೆಗಳ ಬಂಗಾರದ ಪ್ರಾಚೀನ ಆಭರಣಗಳು ಕರಗಿಸಿ ಅದನ್ನು ಇಟ್ಟಿಗೆ ಮಾಡಲಾಗುತ್ತಿದೆ. ಇದರಿಂದ ಭ್ರಷ್ಟಾಚಾರದ ಮಾರ್ಗ ಸುಗಮ ಮಾಡಲಾಗುತ್ತಿದೆ. ದ್ರಮುಕ ಸರಕಾರ ಹಿಂದೂಗಳ ಆಧ್ಯಾತ್ಮಿಕ ಪರಂಪರೆಯನ್ನು ನಿರಂತರವಾಗಿ ಅವಮಾನುಸುತ್ತಿದೆ.
ಜನರು ಮತ್ತು ದೇವರು ಅವರನ್ನು ಕ್ಷಮಿಸುವುದಿಲ್ಲ. ಸರಕಾರವು ದೇವಸ್ಥಾನದ ಅರ್ಚಕರ ಪ್ರಶಿಕ್ಷಣದ ಕಾಲಾವಧಿಯು ಕೂಡ ೫ ವರ್ಷದಿಂದ ೧ ವರ್ಷಕ್ಕೆ ಇಳಸಿದೆ. ದ್ರಮುಕ ಸರಕಾರದ ವಿಚಾರಧಾರೆ ಮಠಗಳ ಮೇಲೆ ಹೇರಲು ನೋಡುತ್ತಿದೆ. ಸರಕಾರ ನಾಸ್ತಿಕ ಇದ್ದರು ಕೂಡ ಅದು ರಾಜ್ಯದಲ್ಲಿನ ಜನರ ಸಂಸ್ಕೃತಿ ಪರಂಪರೆ ಮುಂತಾದರ ಸಂರಕ್ಷಣೆ ಮಾಡುವುದು ಅಪೇಕ್ಷಿತವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಕೃತ್ಯಗಳು ಚರ್ಚ ಅಥವಾ ಮಸೀದಿಯಲ್ಲಿ ಮಾಡುವ ಧೈರ್ಯ ದ್ರಮುಕ ಸರಕಾರ ಮಾಡುತ್ತಿತ್ತೆ ? ಪ್ರಾಚೀನ ಸ್ಮಾರಕಗಳಿಗೆ ಹಾನಿ ಮಾಡಿದ ನಂತರ ಸರಕಾರದ ವಿರುದ್ಧ ದೂರು ದಾಖಲಿಸಿ ಸಂಬಂಧಿಸಿದರಿಗೆ ಶಿಕ್ಷೆ ಆಗಲು ಹಿಂದೂಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ !