ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ನಟಿ ನೋರಾ ಫತೆಹಿ ಇವರಿಂದ ರಾಷ್ಟ್ರಧ್ವಜದ ಅಪಮಾನ

ದೋಹ (ಕತಾರ್) – ಚಲನಚಿತ್ರ ನಟಿ ನೊರಾ ಫತೆಹಿ ಇವರು ಇಲ್ಲಿ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯ ಸಂದರ್ಭದಲ್ಲಿ ಆಯೋಜಿಸಲಾಗ `ಫ್ಯಾನ್ಸ್ ಫೆಸ್ಟಿವಲ್’ ನಲ್ಲಿ ನೃತ್ಯ ಪ್ರಸ್ತುತಪಡಿಸಿದರು. ಈ ಸಮಯದಲ್ಲಿ ಅವರು ಕೈಯಲ್ಲಿ ಹಿಡಿದಿರುವ ಭಾರತದ ರಾಷ್ಟ್ರಧ್ವಜದ ಅಪಮಾನ ಮಾಡಿರುವುದು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರಗೊಂಡಿರುವ ಛಾಯಾಚಿತ್ರಗಳು ಮತ್ತು ವಿಡಿಯೋದಲ್ಲಿ ಕಾಣುತ್ತಿದೆ. ಇದರಲ್ಲಿ ನೋರಾ ಫತೆಹಿ ಇವರು ರಾಷ್ಟ್ರಧ್ವಜ ತಲೆ ಕೆಳಗಾಗಿ ಹಿಡಿದಿರುವುದು ಎಂದರೆ ಕೇಸರಿ ಬಣ್ಣ ಕೆಳಗೆ ಮತ್ತು ಹಸಿರು ಬಣ್ಣ ಮೇಲೆ ಹಿಡಿದಿದ್ದರು.

ಆ ಸಮಯದಲ್ಲಿ ಅವರು `ಜೈ ಹಿಂದ್’ ಘೋಷಣೆ ಕೂಡ ನೀಡಿದ್ದರು. ಅದರ ಮೊದಲು ಯಾರೋ ವೇದಿಕೆ ಮೇಲೆ ರಾಷ್ಟ್ರಧ್ವಜ ಎಸೆದು ನೋರಾ ಇವರಿಗೆ ನೀಡಿದ್ದರು. ವೇದಿಕೆಯಿಂದ ಕೆಳಗೆ ಬಂದ ನಂತರ ಅವರು ಅದನ್ನು ಕೆಳಗೆ ನಿಂತಿರುವ ವ್ಯಕ್ತಿಯ ಬಳಿ ನೀಡಿದರು. ಈ ಘಟನೆಯಿಂದ ನೋರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಈ ರೀತಿ ರಾಷ್ಟ್ರಧ್ವಜದ ಅಪಮಾನ ಮಾಡುವವರ ಮೇಲೆ ಭಾರತ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು !