ಅಶ್ಲೀಲ ಚಲನಚಿತ್ರ ನೋಡಿದ ನಂತರ ೧೭ ವರ್ಷದ ಹುಡುಗನಿಂದ ೧೦ ವರ್ಷದ ಹುಡುಗಿಯ ಮೇಲೆ ಬಲತ್ಕಾರ ನಡೆಸಿ ಹತ್ಯೆ

ರಾಯಪುರ (ಛತ್ತಿಸ್ಗಢ) – ಅಶ್ಲೀಲ ಚಲನಚಿತ್ರ ನೋಡಿದ ನಂತರ ಓರ್ವ ೧೦ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಬೇಮೇಟಾರ ಇಲ್ಲಿಯ ಒಬ್ಬ ೧೭ ವರ್ಷದ ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮದಲ್ಲಿನ ವಾರ್ತೆಯ ಪ್ರಕಾರ, ರಾಯಪೂರನಿಂದ ೯೦ ಕಿಲೋಮೀಟರ್ ಅಂತರದಲ್ಲಿರುವ ಕೋತಬಾಲಿ ಪೋಲಿಸ್ ಠಾಣೆ ಗಡಿಯಲ್ಲಿ ಒಂದು ಹುಡುಗಿಯ ನೇಣು ಹಾಕಿಕೊಂಡು ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ದೊರೆಯಿತು. ಪೊಲೀಸರು ಶವವನ್ನು ಶವ ಪರೀಕ್ಷೆಗಾಗಿ ಕಳುಹಿಸಿದರು.
ಪ್ರಾರಂಭದಲ್ಲಿ ಪೊಲೀಸರು ಘಟನೆಯನ್ನು ಆತ್ಮಹತ್ಯೆಯ ದೃಷ್ಟಿಯಿಂದ ನೋಡುತ್ತಿದ್ದರು; ಆದರೆ ನಂತರ ವೈದ್ಯಕೀಯ ವರದಿಯ ಪ್ರಕಾರ ಆಕೆಯ ಮೇಲೆ ಬಲಾತ್ಕಾರ ನಡೆದಿರುವುದು ತಿಳಿದುಬಂದಿತು. ಅದರ ನಂತರ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದರು. ತನಿಖೆಯ ಸಮಯದಲ್ಲಿ ನೆರೆ ಮನೆಯಲ್ಲಿರುವ ಒಬ್ಬ ಹುಡುಗನ ಮೇಲೆ ಪೊಲೀಸರಿಗೆ ಅನುಮಾನ ಬಂದಿತು. ಹುಡುಗನನ್ನು ಕುಲಂಕುಶವಾಗಿ ವಿಚಾರಣೆ ನಡೆಸಿದಾಗ ಅವನು ಅಪರಾಧ ಮಾಡಿರುವುದು ಒಪ್ಪಿಕೊಂಡನು.

ಆರೋಪಿಯು, ನವಂಬರ್ ೨೬ ರಂದು ಅವನು ಸಂಚಾರವಾಣಿಯಲ್ಲಿ ಬಹಳ ಸಮಯದ ವರೆಗೆ ಅಶ್ಲೀಲ ಚಲನಚಿತ್ರ ನೋಡಿದ್ದನು .ಅದರ ನಂತರ ಅವನು ಪಕ್ಕದ ಮನೆಗೆ ಹೋದನು. ಹುಡಗಿ ಮನೆಯಲ್ಲಿ ಒಬ್ಬಳೇ ಇರುವುದು ನೋಡಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಆ ಸಮಯದಲ್ಲಿ ಅವನು ಸಂತ್ರಸ್ತೆಯ ಬಾಯಿಗೆ ಬಟ್ಟೆ ತುರುಕಿದ್ದನು. ತಮ್ಮ ರಹಸ್ಯ ಬಯಲಾಗುವುದು ಎಂದು ಆ ಭಯದಿಂದ ಆ ಹುಡುಗನು ಸಂತ್ರಸ್ತೆಯನ್ನು ಸ್ಕಾರ್ಫ್ ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣ ಆತ್ಮಹತ್ಯೆ ಎಂದು ತೋರಿಸಲು ಆರೋಪಿ ಹುಡುಗಿಯ ಶವವನ್ನು ನೇಣಿಗೆ ಹಾಕಿದನು. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ .

ಸಂಪಾದಕೀಯ ನಿಲುವು

  • ಮಕ್ಕಳಿಗೆ ಬಾಲ್ಯದಿಂದ ಸಾಧನೆ ಕಲಿಸದೇ ಇರುವುದರ ಪರಿಣಾಮ !

  • ಇಂತಹ ಚಲನಚಿತ್ರಗಳ ಮೇಲೆ ಸರಕಾರ ನಿಷೇಧ ಏಕೆ ಹೇರುವುದಿಲ್ಲ ?