ನವದೆಹಲಿ – ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ಅಲ್ ಕಾಯ್ದಾವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಆಗಿರುವುದು ಒಪ್ಪಿಕೊಂಡಿದೆ. ಕಲಂ ೩೭೦ ತೆಗೆದನಂತರ ಭಾರತ ಸರಕಾರಕ್ಕೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾಡುವುದರಲ್ಲಿ ಯಶಸ್ಸು ದೊರಕಿದೆ ಎಂದು ಅಲ್ ಕಾಯ್ದಾ ಹೇಳಿದೆ. ಪಾಕಿಸ್ತಾನಿ ಸೇನೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾ ಅಲ್ ಕಾಯ್ದಾ ಈ ಹೇಳಿಕೆ ನೀಡಿದೆ. ಅಲ್ ಕಾಯ್ದಾ ಪಾಕಿಸ್ತಾನ ಸೈನ್ಯಕ್ಕೆ `ಹೇಡಿ’ ಎಂದಿದೆ.
#DNAExclusive: Analysis of #AlQaeda admitting India’s success in #JammuandKashmirhttps://t.co/BuRSEUyi70
— Zee News English (@ZeeNewsEnglish) November 30, 2022
೧. ಅಲ್ ಕಾಯ್ದಾ ಪ್ರಸಾಸ ಮಾಡಿದ ದೈನಿಕದಲ್ಲಿ ಭಾರತ ಸರಕಾರವು ಕಾಶ್ಮೀರ ನೀತಿ ಯಶಸ್ವಿ ಗೊಳಿಸಿದೆ ಮತ್ತು ಅದಕ್ಕಾಗಿ ಅಲ್ ಕಾಯ್ದಾ ಪಾಕಿಸ್ತಾನಕ್ಕೆ ಹೊಣೆಗಾರರನ್ನಾಗಿ ಮಾಡಿದೆ. ಪಾಕಿಸ್ತಾನ ಸೈನ್ಯ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಕಳಿಸಲು ಸಮರ್ಥವಿಲ್ಲ ಎಂದು ಈ ಭಯೋತ್ಪಾದಕ ಸಂಘಟನೆಯ ಅಭಿಪ್ರಾಯವಾಗಿದೆ.
೨. ಭಾರತೀಯ ಭದ್ರತಾ ಪಡೆ ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರನ್ನು ಮುಗಿಸುತ್ತಾ ಬಂದಿದೆ. ಈ ಸೋಲಿಗೆ ಬೇಸತ್ತು ಅಲ್ ಕಾಯ್ದಾ ಈಗ ತನ್ನ ಸಿಟ್ಟು ಪಾಕಿಸ್ತಾನದ ಮೇಲೆ ತೋರಿಸುತ್ತಿದೆ.
೩. ಅಲ್ ಕಾಯ್ದಾವು `ಅನ್ಸಾರ್ ಗಜಾವತ್-ಉಲ್-ಹಿಂದ್’ ಈ ಕಾಶ್ಮೀರದಲ್ಲಿನ ಏಕೈಕ ಭಯೋತ್ಪಾದಕ ಸಂಘಟನೆ ಇರುವುದೆಂದು ಹೇಳಿದೆ. ಕಾಶ್ಮೀರದಲ್ಲಿ ಭದ್ರತಾ ಪಡೆ ಅಲ್ ಕಾಯ್ದಾ ಮತ್ತು ಅದಕ್ಕೆ ಸಂಬಂಧಿತ ಭಯೋತ್ಪಾದಕ ಸಂಘಟನೆ ಇವುಗಳ ಪ್ರತಿಯೊಂದು ತಂತ್ರ ವಿಫಲಗೊಳಿಸುತ್ತಿದೆ. ಕಳೆದ ಕೆಲವು ವರ್ಷದಲ್ಲಿ ಭಾರತೀಯ ಸೈನ್ಯದಿಂದ ಅನೇಕ ಪಾಕಿಸ್ತಾನಿ ಮತ್ತು ವಿದೇಶಿ ಭಯೋತ್ಪಾದಕರನ್ನು ಮುಗಿಸಿದ್ದಾರೆ.
೪. ಈ ದೈನಿಕದಲ್ಲಿ ಅಲ್ ಕಾಯ್ದಾವು ಮುಸಲ್ಮಾನರಿಗೆ ಕಾಶ್ಮೀರದಲ್ಲಿ ಒಟ್ಟಾಗಿ ಸೇರಿ ಭಯೋತ್ಪಾದಕರಿಗೆ ಬೆಂಬಲ ನೀಡಲು ಹೇಳಿದೆ.