ಇಂದೋರ (ಮಧ್ಯಪ್ರದೇಶ) ಇಲ್ಲಿ ಇಸ್ಲಾಂ ಸ್ವೀಕರಿಸದಿದ್ದರೆ ಮನೆಯನ್ನು ಧ್ವಂಸಗೊಳಿಸಿ ಗೊರಿ ಕಟ್ಟಲಾಗುವುದೆಂದು ಮತಾಂಧದಿಂದ ಹಿಂದೂ ಕುಟುಂಬಕ್ಕೆ ಬೆದರಿಕೆ !

ಆರೋಪಿ ಶಾಹರುಖ

ಇಂದೋರ (ಮಧ್ಯಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬದ ಮೇಲೆ ಮತಾಂಧರಿಂದ ದೌರ್ಜನ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಹಿಂದೂ ಕುಟುಂಬದ ಮಹಿಳೆಯರು ಇಸ್ಲಾಂ ಸ್ವೀಕರಿಸದೆ ಇದ್ದರೆ ಅವರ ಮನೆ ಧ್ವಂಸಗೊಳಿಸಿ ಅಲ್ಲಿ ಗೋರಿ ಕಟ್ಟಲಾಗುವುದೆಂದು ಬೆದರಿಕೆ ನೀಡಲಾಗಿದೆ. ಇದರ ಜೊತೆಗೆ ಶಾಹರುಖ, ಜಾವೇದ ಮತ್ತು ಅಜೀಜ ಎಂದು ಬೆದರಿಕೆ ನೀಡುವವರ ಹೆಸರುಗಳಾಗಿವೆ. ಈ ಪ್ರಕರಣದ ಮುಖ್ಯ ಆರೋಪಿ ಶಾಹರುಖ ಪ್ರಸ್ತುತ ಜೈಲಿನಲ್ಲಿದ್ದಾನೆ.

೧. ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆಪ್ರಕಾರ ಕುಮ್ಹೇಡಿ ಕಂಕರ್ ಪ್ರದೇಶದಲ್ಲಿ ವಾಸವಾಗಿರುವ ಒಂದು ಹಿಂದೂ ಕುಟುಂಬವು ಶಾಹರುಖ ಮತ್ತು ಬೇರೆ ಇನ್ನಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

೨. ಶಾಹರುಖ ಸಂತ್ರಸ್ತೆ ಕುಟುಂಬದ ಮಹಿಳೆಯರಿಗೆ ಸತತವಾಗಿ ಬೆದರಿಸುತ್ತಿರುತ್ತಾನೆ. ಕೆಲವು ದಿನಗಳ ಹಿಂದೆ ಶಾಹರುಖ, ಅಜೀಜ್ ಮತ್ತು ಜಾವೇದ ಸಂತ್ರಸ್ತೆಯ ಮನೆಗೆ ಹೋದರು. ಶಾಹರುಖ ಸಂತ್ರಸ್ತ ಹಿಂದೂ ಮಹಿಳೆಯ ಮನೆ ದ್ವಂಸ ಗೊಳಿಸುವ ಬೆದರಿಕೆ ನೀಡಿದ.

೩. ಶಾಹರುಖನ ಸಹಚರ ಅಜೀಜ ಇವನು ಸಂತ್ರಸ್ತ ಕುಟುಂಬಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದನು. ಹಿಂದೂ ಕುಟುಂಬವನ್ನು ಕತ್ತರಿಸಿ ಎಸೆಯುವ ಬೆದರಿಕೆ ಜಾವೇದನು ನೀಡಿದನು, ಎಂದು ದೂರಿನಲ್ಲಿ ಹೇಳಲಾಗಿದೆ.

೪. ದೂರು ಹಿಂಪಡೆಯಲು ಇವರೆಲ್ಲರೂ ಒತ್ತಡ ಹೇರಿರುವುದರ ಬಗ್ಗೆ ಸಂತ್ರಸ್ತ ಕುಟುಂಬದವರು ಆರೋಪ ಕೂಡ ಮಾಡಿದ್ದಾರೆ.

೫. ಯಾವ ಸ್ಥಳದಲ್ಲಿ ಹಿಂದೂ ಕುಟುಂಬದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ, ಅಲ್ಲಿ ಮುಸಲ್ಮಾನ ಜನರ ೨-೩ ಮನೆಗಳಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಬೆದರಿಕೆ ನೀಡಲು ಇಂದೋರ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ !