ಬೆಂಗಳೂರಿನಲ್ಲಿರುವ ಶಾಲೆಗಳ ವಿದ್ಯಾರ್ಥಿ ಬ್ಯಾಗಗಳಲ್ಲಿ ನಿರೋಧ, ಗರ್ಭನಿರೋಧಕ ಮಾತ್ರೆಗಳು ಮತ್ತು ಸಿಗರೇಟು !

ಬೆಂಗಳೂರು – ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ ತರುತ್ತಿರುವ ಬಗ್ಗೆ ದೂರು ದೊರೆತ ನಂತರ ಶಾಲೆಯ ಆಡಳಿತವು ೮ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳ ಪಾಠಿಚೀಲಗಳ ತಪಾಸಣೆಯ ಅಭಿಯಾನವನ್ನು ಆರಂಭಿಸಿತು. ಪಾಠಿಚೀಲಗಳ ತಪಾಸಣೆ ಮಾಡುವಾಗ ಅವುಗಳಿಂದ ನಿರೋಧ, ಸಿಗರೇಟು, ಲಾಯಿಟರ್‌, ವ್ಹೈಟನರ್‌ ಇತ್ಯಾದಿ ವಸ್ತುಗಳು ಕಂಡುಬಂದವು. ಶಿಕ್ಷಣ ಮಂಡಳಿಯ ಮಹಾಸಚಿವರಾದ ಡಿ. ಶಶಿ ಕುಮಾರರವರು ಸುಮಾರು ೮೦ ಶಾಲೆಗಳಲ್ಲಿ ತಪಾಸಣೆ ಮಾಡಿದರು. ಒಂದು ವಿದ್ಯಾರ್ಥಿಯ ಬ್ಯಾಗಿನಲ್ಲಿ ಗರ್ಭನಿರೋಧಕ ಮಾತ್ರೆ, ಅದರೊಂದಿಗೆ ನೀರಿನ ಬಾಟಲಿಯಲ್ಲಿ ಸರಾಯಿ ದೊರೆತಿದೆ. ೧೦ನೇ ತರಗತಿಯಲ್ಲಿ ಕಲಿಯುವ ಹುಡುಗಿಯ ಪಾಠಿಚೀಲದಲ್ಲಿ ನಿರೋಧ ದೊರೆತಿದೆ. ಈ ಬಗ್ಗೆ ಆಕೆಗೆ ವಿಚಾರಿಸಿದಾಗ ಆಕೆಯು ‘ನಾನು ಕಲಿಯಲು ಹೋಗುವಲ್ಲಿ ಇರುವ ಜನರೇ ಇದಕ್ಕೆ ಕಾರಣರಾಗಿದ್ದಾರೆ’ ಎಂದು ಹೇಳಿದಳು. ಈ ಸಂಗತಿಯಿಂದ ಶಿಕ್ಷಕರೊಂದಿಗೆ ಪಾಲಕರೂ ಚಕಿತರಾಗಿದ್ದಾರೆ. ಅನಂತರ ಈಗ ಕೆಲವು ಶಾಲೆಗಳು ಪಾಲಕರು ಹಾಗೂ ಶಿಕ್ಷಕರ ಸಭೆಯನ್ನು ಕರೆದಿದ್ದಾರೆ. ಹಾಗೆಯೇ ಪಾಲಕರು ತಮ್ಮ ಮಕ್ಕಳೊಂದಿಗೆ ಸಂವಾದ ಸಾಧಿಸಬೇಕು, ಎಂದು ಅನೇಕ ಶಾಲೆಗಳು ಸೂಚನೆ ನೀಡಿವೆ.

ಮಾನಸೋಪಚಾರ ತಜ್ಞರಾದ ಡಾ. ಎ. ಜಗದೀಶರವರು ಮಾತನಾಡುತ್ತ, ಇಂದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಂದ ಅವರನ್ನು ಹೊರಗೆ ತರಲು ಸಂಘರ್ಷ ಮಾಡಬೇಕಾಗುವುದು. ತಂದೆ-ತಾಯಂದಿರು ಮಕ್ಕಳ ಕಡೆಗೆ ಗಮನ ನೀಡಬೇಕು. ಒಂದು ಪ್ರಕರಣದಲ್ಲಿ ೧೪ ವರ್ಷದ ಹುಡುಗನ ಬೂಟಿನಿಂದ ನಿರೋಧ ತೆಗೆಯಲಾಗಿದೆ. ಅನೇಕ ಮಕ್ಕಳು ಇಂತಹ ಪ್ರಯೋಗಗಳನ್ನು ಮಾಡುತ್ತಾರೆ. ಇದರಲ್ಲಿ ಧೂಮಪಾನ, ಅಮಲು ಪದಾರ್ಥ ಮತ್ತು ಲೈಂಗಿಕ ಸುಖವೂ ಸೇರಿರುತ್ತದೆ. ತಂದೆ-ತಾಯಂದಿರು ಮಕ್ಕಳೊಂದಿಗೆ ಚರ್ಚಿಸಬೇಕು. ಅವರೊಂದಿಗೆ ಮಾತನಾಡಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಕ್ಕಳ ಮೇಲೆ ಸಂಸ್ಕಾರವಾಗಲು ಪಾಲಕರು ಅವರನ್ನು ಶಾಲೆಗೆ ಕಳುಹಿಸುತ್ತಾರೆ; ಆದರೆ ಅವರು ಅಲ್ಲಿ ಏನು ಮಾಡುತ್ತಾರೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುವಂತಹ ವಾತಾವರಣವನ್ನು ನಿರ್ಮಿಸುವುದೂ ಆವಶ್ಯಕವಾಗಿದೆ !