ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ಇವರಿಂದ ಹಿಂದೂಗಳಿಗೆ ಜಾಗೃತವಾಗಿರಲು ಕರೆ !

ಕರ್ನಾಟಕದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಭಯೋತ್ಪಾದಕರು `ಹಿಂದೂ’ವಿನಂತೆ ಬಂದು ರಕ್ತಪಾತ ಮಾಡಬಹುದು !

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ

ಉಡುಪಿ – ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ. ಜಿಹಾದಿ ಭಯೋತ್ಪಾದಕರು `ಹಿಂದೂ’ ಎಂದು ಹೇಳಿ ರಕ್ತಪಾತ ಮಾಡಬಹುದು. ಕೆಲವು ಜನರು ದುಶ್ಕೃತ್ಯಗಳನ್ನು ಮಾಡಿ ಅದನ್ನು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ಮಾಡಬಹುದು. ಅವರಿಗೆ ಅಂತಹ ಕೃತ್ಯ ಮಾಡಲು ಹಿಂದೂಗಳು ಅವಕಾಶ ನೀಡಬಾರದು. ಪ್ರಸ್ತುತ ಸಮಾಜಘಾತಕ ಶಕ್ತಿಗಳು ಹಿಂದೂಗಳ ಧಾರ್ಮಿಕ ಚಿಹ್ನೆಗಳನ್ನು ಉಪಯೋಗಿಸಿ ಇಂತಹ ಕೃತ್ಯಗಳ ನಡೆಸುವುದು ನಾವು ನೋಡುತ್ತಿದ್ದೇವೆ. ಭವಿಷ್ಯದಲ್ಲಿ ಈ ರೀತಿ ಆಗಬಾರದು, ಅದಕ್ಕಾಗಿ ಹೆಚ್ಚು ಜಾಗೃತ ಇರುವುದು ಅವಶ್ಯಕವೆಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇವರು ಕರೆ ನೀಡಿದ್ದಾರೆ. ಇತ್ತೀಚೆಗೆ ಮಂಗಳೂರಿನ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈ ಮೇಲಿನಂತೆ ಕರೆ ನೀಡಿದರು. ಈ ಪ್ರಕರಣದಲ್ಲಿ ಶರಿಕ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಅವನಲ್ಲಿ ಹಿಂದೂ ಹೆಸರಿನ ಆಧಾರ ಕಾರ್ಡ ಪತ್ತೆಯಾಗಿದೆ. ಇದರಿಂದ ಬಾಂಬ ಸ್ಪೋಟಿಸಿ ಅದರ ಹೊಣೆಯನ್ನು ಹಿಂದೂಗಳ ಮೇಲೆ ಹೊರಿಸುವ ಜಿಹಾದಿಗಳ ಸಂಚಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ಈ ಮೇಲಿನ ಹೇಳಿಕೆಯನ್ನು ನೀಡಿದರು.

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಮಾತನ್ನು ಮುಂದುವರಿಸಿ, ಜನರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಏನಾದರೂ ಭಯಾನಕವಾಗಿ ಘಟಿಸಿದರೆ ಸಮಾಜಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಬಹುದು. ಅದಕ್ಕಾಗಿ ಪ್ರತಿಯೊಬ್ಬರೂ ಜಾಗೃತವಾಗಿರಬೇಕು. ಯಾವುದೇ ಅನುಮಾನಸ್ಪದ ಚಟುವಟಿಕೆ ಅಥವಾ ವ್ಯಕ್ತಿ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಂಚಾರ ವಾಣಿ ಅಥವಾ ಗುರುತಿನ ಚೀಟಿ ಕಳೆದು ಹೋದರೆ ತಕ್ಷಣ ಸಂಬಂಧಿತರಿಗೆ ತಿಳಿಸಬೇಕು ಎಂದು ಹೇಳಿದರು.