ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಹಿಂದೆ ಹಿಂದೂ ಆಗಿದ್ದರು ! – ಗುಲಾಮ ಗೌಸ್, ಶಾಸಕ, ಜನತಾದಳ

ಜನತಾ ದಳ ಪಕ್ಷದ ವಿಧಾನಪರಿಷತ್ತಿನ ಸಂಸದ ಗುಲಾಮ ಗೌಸ್

ಪಾಟಲಿಪುತ್ರ (ಬಿಹಾರ) – ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಹಿಂದೆ ಹಿಂದುಗಳಾಗಿದ್ದರು. ಬ್ರಾಹ್ಮಣವಾದಿ ವ್ಯವಸ್ಥೆಯಿಂದ ಜನರು ಇಸ್ಲಾಂ ಅನ್ನು ಸ್ವೀಕರಿಸಿದರು; ಕಾರಣ ಬ್ರಾಹ್ಮಣವಾದಿ ನೀತಿಯಿಂದ ಜನರು ಬೇಸತ್ತಿದ್ದರು, ಎಂದು ಜನತಾ ದಳ ಪಕ್ಷದ ವಿಧಾನಪರಿಷತ್ತಿನ ಸಂಸದ ಗುಲಾಮ ಗೌಸ್ ಇವರು ಪರಿಷತ್ತಿನ ಒಂದು ಕಾರ್ಯಕ್ರಮದಲ್ಲಿ ಹೇಳಿದರು. (ಗೌಸ್ ಇವರು ಅರ್ಧ ಸತ್ಯ ಹೇಳಿದ್ದಾರೆ. ಭಾರತದಲ್ಲಿನ ಮುಸಲ್ಮಾನರು ಹಿಂದೆ ಹಿಂದುಗಳಾಗಿದ್ದರು, ಇದು ಸತ್ಯವಾಗಿದೆ; ಆದರೆ ಬ್ರಾಹ್ಮಣರಿಂದ ಅವರು ಮುಸಲ್ಮಾನರಾಗಲಿಲ್ಲ, ಅವರು ಮೊಘಲರು ಮತ್ತು ಇತರ ಇಸ್ಲಾಮಿ ಆಡಳಿತದ ಬಲವಂತದಿಂದ ಇಸ್ಲಾಂ ಸ್ವೀಕರಿಸಲು ಅನಿವಾರ್ಯಪಡಿಸಲಾಯಿತು, ಇದು ಉಳಿದಿರುವ ಸತ್ಯವಾಗಿದೆ. ಗೌಸ್ ಉದ್ದೇಶ ಪೂರ್ವಕವಾಗಿ ಇದನ್ನು ಮುಚ್ಚಿಟ್ಟು `ಹಿಂದೂಗಳ ಮತಾಂತರಕ್ಕೆ ಹಿಂದೂಗಳೇ ಜವಾಬ್ದಾರರು’, ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ, ಇದನ್ನು ತಿಳಿದುಕೊಳ್ಳಿ ! -ಸಂಪಾದಕರು)

ಈ ಸಮಯದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದರು. `ಪ್ರಧಾನಿ ಮೋದಿಯವರು ಮುಸಲ್ಮಾನರಿಗಾಗಿ ಏನಾದರೂ ಮಾಡುವುದಕ್ಕಾಗಿ ಹೇಳಿದ್ದಾರೆ, ಆದ್ದರಿಂದ ಅವರು ಶ್ಲಾಘನೀಯಕ್ಕೆ ಅರ್ಹರಾಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಧಾನಿ ಬಡವರು, ಹಿಂದುಳಿದವರು, ದಲಿತರು ಮತ್ತು ಮುಸಲ್ಮಾನರಿಗೆ ಏನನ್ನು ಮಾಡಲಿಲ್ಲ.’ ಎಂದು ಹೇಳಿದರು. ಗೌಸ್ ಮಾತು ಮುಂದುವರಿಸುತ್ತಾ, ದಲಿತರು ಮತ್ತು ಹಿಂದುಳಿದವರಿಗೆ ಸೌಲಭ್ಯ ನೀಡುತ್ತಿದ್ದರೇ, ಅವರು ಇತರ ಧರ್ಮಕ್ಕೆ ಹೋಗುವುದಿಲ್ಲ. (ಇತರ ಧರ್ಮಕ್ಕೆ ಹೋಗುವವರು ಆಮಿಷಕ್ಕೆ ಒಳಗಾಗಿ ಮತ್ತು ಒತ್ತಡದಿಂದ ಹೋಗುತ್ತಾರೆ, ಇದು ಗೌಸ್ ಇವರಿಗೆ ತಿಳಿದಿಲ್ಲವೇ ? – ಸಂಪಾದಕರು) ಕೆಲವು ಜನರ ಕುರ್ಚಿ ಅಪಾಯದಲ್ಲಿರಬಹುದು; ಆದರೆ ಇಸ್ಲಾಂ, ಹಿಂದುತ್ವ ಮತ್ತು ದೇಶ ಎಂದೂ ಅಪಾಯದಲ್ಲಿ ಇರುವುದಿಲ್ಲ.

ಸಂಪಾದಕೀಯ ನಿಲುವು

ಈ ಸತ್ಯ ಗುಲಾಮ ಗೌಸ್ ಇವರಿಗೆ ಒಪ್ಪಿಗೆ ಇದ್ದರೇ ಅವರು ಈ ಮುಸಲ್ಮಾನರಿಗೆ ಅವರ ಮೊದಲಿನ ಹಿಂದೂ ಧರ್ಮಕ್ಕೆ ಬರಲು ಏಕೆ ಹೇಳುತ್ತಿಲ್ಲ ? ಅವರು ಗುಲಾಮಗಿರಿಯ ಜೀವನ ಏಕೆ ಬದುಕುತ್ತಿದ್ದಾರೆ ?, ಇದನ್ನು ಗೌಸ್ ತಮ್ಮನ್ನು ಮತ್ತು ಇತರ ಮುಸಲ್ಮಾನರಿಗೆ ಏಕೆ ವಿಚಾರಿಸುವುದಿಲ್ಲ ?