ಪಾಕಿಸ್ತಾನದ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ

ಮೀರಪುರಖಾಸ (ಪಾಕಿಸ್ತಾನ) – ಇಲ್ಲಿಯ ರಾಮಾಪಿರ ಪ್ರದೇಶದಲ್ಲಿ ದುಷ್ಕರ್ಮಿಗಳಿಂದ ಹಿಂದೂಗಳ ಒಂದು ದೇವಸ್ಥಾನದಲ್ಲಿನ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಹುಂಡಿಯಿಂದ ಹಣ ಕೂಡ ಕದ್ದಿದ್ದಾರೆ. ಜೊತೆಗೆ ಧ್ವಂಸಗೊಳಿಸಿರುವ ಮೂರ್ತಿಯ ಅವಶೇಷಗಳು ಎಸೆದಿದ್ದಾರೆ. ಈ ಘಟನೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ವಿಚಾರಣೆ ನಡೆದಿಲ್ಲ, ಎಂದು `ಹಿಂದೂಸ್ ಆರ್ಗನೈಜೇಷನ್ ಆಫ್ ಸಿಂಧ’ ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಭಿಲ್ ಇವರು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಹಿಂದೂ ಮತ್ತು ಅವರ ಧಾರ್ಮಿಕ ಸ್ಥಳಗಳ ಅಳಿವಿನ ಅಂಚಿಗೆ ತಲುಪಿದೆ ಮತ್ತು ಇದರ ಬಗ್ಗೆ ಭಾರತದಲ್ಲಿನ ಹಿಂದೂ ಮತ್ತು ಅವರ ಸಂಘಟನೆ ಮತ್ತು ಸರಕಾರ ಇದಕ್ಕೆ ಅದರ ಬಗ್ಗೆ ಯಾವುದೇ ಸಂಬಂಧವಿಲ್ಲದಂತಹ ಪರಿಸ್ಥಿತಿ ಇದೆ !