ಸಂತ್ರಸ್ತೇ ಮತ್ತು ಆಕೆಯ ತಂದೆಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ
ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬದ ಮನೆಯಲ್ಲಿ ತಂದೆಯ ಜೊತೆಗೆ ಟೈಲ್ಸ್ ಹಾಕುವ ಕೆಲಸಕ್ಕಾಗಿ ಹೋಗಿದ್ದ ಫರ್ಮಾನ ಅಲಿ ಇವನು ಆ ಮನೆಯಲ್ಲಿನ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಲಾತ್ಕಾರದ ನಂತರ ಅವನು ಹುಡುಗಿಗೆ ಕೊಲ್ಲುವ ಬೆದರಿಕೆ ನೀಡಿದ್ದ. ಫರ್ಮಾನ ಈ ಹುಡುಗಿ ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸುತ್ತಿದ್ದನು. ಫರ್ಮಾನ ಇವನು ನವಂಬರ್ ೨೨ ರಂದು ಆಕೆಯ ಅಪಹರಣ ಮಾಡಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ನಶೆಯ ಪದಾರ್ಥ ತಿನ್ನಲು ನೀಡಿ ಆಕೆಯ ಮೇಲೆ ಬಲತ್ಕಾರ ಮಾಡಿದನು. ಹುಡುಗಿಯ ತಂದೆಗೆ ಇದರ ಮಾಹಿತಿ ದೊರೆಯುತ್ತಲೇ ಅವರು ಪೊಲೀಸ ಠಾಣೆಗೆ ದೂರು ನೀಡಲು ಹೋಗುವಾಗ ಫರ್ಮಾನ ಮತ್ತು ಅವನ ತಂದೆ ಅವರ ಹುಡುಗಿಯ ತಂದೆಯನ್ನು ದಾರಿಯಲ್ಲಿ ತಡೆದು ಅವರಿಗೆ ಅವಾಚ್ಯಪದಗಳಲ್ಲಿ ಬೈದು ಕೊಲ್ಲುವ ಬೆದರಿಕೆ ನೀಡಿದ್ದಾರೆ. ಇದರ ನಂತರ ಹುಡುಗಿಯ ತಂದೆ ವಿಶ್ವ ಹಿಂದೂ ಪರಿಷತ್ತಿನ ಸಹಾಯ ಪಡೆದು ಫರ್ಮಾನ ಮತ್ತು ಅವನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ತಕ್ಷಣ ಬಂದಿಸಲು ಇಲ್ಲಿಯ ನಾಗರೀಕರು ರಸ್ತೆ ತಡೆ ಆಂದೋಲನ ಕೂಡ ನಡೆಸಿದ್ದಾರೆ.
ಸಂಪಾದಕೀಯ ನಿಲುವು
|